ಮೈಸೂರು ಸ್ಯಾಂಡಲ್ ಸಾಬೂನು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
Mysore Sandal Soap Distribution Program Launched
ತಾಳಿಕೋಟಿ 22: ದೇವಿಕಾ ಸುಬ್ಬರಾವ್ ಫೌಂಡೇಶನ್ ಮುದ್ದೇಬಿಹಾಳ ಇವರ ವತಿಯಿಂದ ಕ್ಷೇತ್ರದ ಪ್ರತಿ ಮನೆಗೂ ಮೈಸೂರು ಸ್ಯಾಂಡಲ್ ಸೋಪ ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಪಟ್ಟಣದ ಭೂವಿ ವಡ್ಡರ ಬಡಾವಣೆಯಲ್ಲಿ ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಶನಿವಾರ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಸಕ ನಾಡಗೌಡರ ಪುತ್ರಿಯಾದ ಪಲ್ಲವಿ ನಾಡಗೌಡರು ತಮ್ಮ ದೇವಿಕಾ ಸುಬ್ಬರಾವ್ ಫೌಂಡೇಶನ್ ದ ಮೂಲಕ ಈಗಾಗಲೇ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಇದೀಗ ಕ್ಷೇತ್ರದ ಪ್ರತಿ ಮನೆಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಪಡೆದ ಈ ಸಾಬೂನುವನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷೆ ನೀಲಮ್ಮಗೌಡತಿ ಪಾಟೀಲ ಅವರು ಮಾತನಾಡಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಫೌಂಡೇಶನ್ ದ ಅಧ್ಯಕ್ಷೆಯಾದ ಪಲ್ಲವಿ ನಾಡಗೌಡರು ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಭೂವಿ ವಡ್ಡರ ಬಡಾವಣೆಯಲ್ಲಿ ಚಾಲನೆ ನೀಡಲಾಗಿದ್ದು ಪಟ್ಟಣದ ಪ್ರತಿ ಮನೆಗೂ ತಲುಪಿ ಈ ಸಾಬೂನುವನ್ನು ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ದನಗೌಡ ಪಾಟೀಲ(ನಾವದಗಿ), ಮಲ್ಲಿಕಾರ್ಜುನ ಪಟ್ಟಣಶೆಟ್ಟಿ,ಪರುಶರಾಮ ತಂಗಡಗಿ, ಅಕ್ಕಮಹಾದೇವಿ ಕಟ್ಟಿಮನಿ, ಜುಬೇದಾ ಜಮಾದಾರ,ಗೌರಮ್ಮ ಕುಂಬಾರ, ಸಂಗನಗೌಡ ಅಸ್ಕಿ,ಮಹೆಬೂಬ ಕೆಂಭಾವಿ,ಬಸವರಾಜ ಕುಂಬಾರ, ಹುಸೇನಬಾಷಾ ಜಮಾದಾರ, ಸದಾಶಿವ ರೆಡ್ಡಿ ಇಬ್ರಾಹಿಂಪೂರ, ಅಪ್ಪುಗೌಡ ಮಾಡಗಿ, ಬಸವರಾಜ ಮಾಲಿಪಾಟೀಲ, ಲಕ್ಷ್ಮಣ ಕೆ.ಲಮಾಣಿ, ಗೋಪಾಲ ಕಟ್ಟಿಮನಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 