ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹ ಹಿರೇಮಠ ಕಗ್ಗೋಲೆ

ಕೊಲೆಗಡುಕನಿಗೆ ಗಲ್ಲು ಶಿಕ್ಷೆ ವಿಧಿಸಲು ಬಳ್ಳಾರಿಯಲ್ಲಿ ಒತ್ತಾಯ  

ಬಳ್ಳಾರಿ 19: ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಹೋಗಿದ್ದ ನೇಹಾ ಹಿರೇಮಠ ಎಂಬ ಎಂ.ಸಿ.ಎ., ವಿದ್ಯಾರ್ಥಿನಿಯನ್ನು ಫಯಾಜ್ ಎಂಬ ಅನ್ಯ ಕೋಮಿನ ಸಮಾಜ ಘಾತಕ ದುಷ್ಕರ್ಮಿ ಹಾಡ ಹಗಲೇ ಕಾಲೇಜಿನ ಕ್ಯಾಂಪಸ್‌ನಲ್ಲಿ ಹನ್ನೊಂದು ಬಾರಿ ಚಾಕುವಿನಿಂದ  ಇರಿದು, ಹತ್ಯೆ ಮಾಡಿದ ಕೊಲೆ ಪಾತಕನಿಗೆ ಗಲ್ಲು ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿ ಬಳ್ಳಾರಿ ನಗರದ ಜನತೆ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಇರುವ ಗಾಂಧಿಜೀ ಪ್ರತಿಮೆ ಮುಂದೆ ಸತ್ಯಾಗ್ರಹ ಕೈಗೊಂಡು ಕೊಲೆಗಡುಕ ಹಾಗೂ ಅವರ ಸಹಚರರನ್ನು ಗಲ್ಲಿಗೆ ಏರಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದರು.  

ಪಾಪಿ ಕೊಲೆಗಾರ ಕಳೆದ 2 ವರ್ಷಗಳಿಂದ ಹತ್ಯೆಯಾದ ನೇಹಾ ಹಿರೇಮಠ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಾ, ಜೀವ ಬೆದರಿಕೆ ಹಾಕಿದ್ದ. ಕೊಲೆಗಾರನ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಕ್ರಮಕೈಗೊಳ್ಳದೇ ಇರುವುದನ್ನು ಧರಣಿ ನಿರತರು ಖಂಡಿಸಿದರು. ಈ ಮೊದಲೇ ಕೊಲೆಗಡುಕನ ಮೇಲೆ ಪೊಲೀಸರು ಲೈಂಗಿಕ ಕಿರುಕುಳ ಮೊಕದ್ದಮೆ ಹೂಡಿದ್ದರೇ, ಈ ಅನಾಹುತ ನಡೆಯುತ್ತಿರಲಿಲ್ಲ. ಕರ್ನಾಟಕ ಸರ್ಕಾರ ಈ ಕ್ರೂರ ಹತ್ಯೆಯನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ಸಾಕ್ಷಧಾರಗಳನ್ನು ನ್ಯಾಯಾಲಯದಲ್ಲಿ ಸಾದರಪಡಿಸಿ, ಕೊಲೆಗಡುಕನಿಗೆ ಮರಣದಂಡನೆ ವಿಧಿಸಲು ಒತ್ತಾಯಿಸಿದರು. ಅಲ್ಲದೇ ರಾಜ್ಯದಲ್ಲಿ ಅನ್ಯಕೋಮಿನ ವ್ಯಕ್ತಿಗಳು ಹಿಂದುಗಳ ಮೇಲೆ ಅನವಶ್ಯಕವಾಗಿ ಎಸುಗುವ ದೌರ್ಜನ್ಯಗಳ ವಿರುದ್ಧ ಕ್ರಮಕೈಗೊಳ್ಳಲು ಧರಣಿ ನಿರತರು ಒತ್ತಾಯಿಸಿದರು.  

ಲೈಂಗಿಕ ಕಿರುಕುಳ ನೀಡಿ ನೇಹಾ ಹಿರೇಮಠರನ್ನು ಕೊಲೆ ಮಾಡಿದ ಪಾಪಿಗೆ ಗಲ್ಲು ಶಿಕ್ಷೆ ಆಗಲೇಬೇಕು. ಅಲ್ಲದೆ ಅವನಿಗೆ ಸಹಕಾರ ನೀಡಿದವರಿಗೆಲ್ಲಾ ಶಿಕ್ಷೆ ಆಗಲೇಬೇಕು. ಹಾಡು ಹಗಲೇ ಕೊಲೆಯಾದ ನೇಹಾ ಹಿರೇಮಠರಿಗೆ ರಕ್ಷಣೆ ನೀಡದ ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಧಿಕ್ಕಾರ ಧಿಕ್ಕಾರ. ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಲೇಬೇಕು. ಕೊಲೆಯಾದ ನೇಹಾ ಹಿರೇಮಠ ನಮ್ಮೆಲ್ಲರ ಮಗಳು ಕೊಲೆಗಡುಕನಿಗೆ ಮರಣ ದಂಡನೆ ಆಗಲೇಬೇಕು. ಕೊಲೆಯಾದ ನೇಹಾ ಹಿರೇಮಠರ ನೊಂದ ಕುಟುಂಬದ ಜೊತೆಗೆ ಬಳ್ಳಾರಿ ಜನತೆ ನಿಮ್ಮೊಡನೆ ಇರುವೆವು. ಎನ್ನುವ ಬರಹದ ಫಲಕಗಳನ್ನು ಹಿಡಿದು, ಪಾಪಿ ಕೊಲೆಗಾರನಿಗೆ ಗಲ್ಲು ಶಿಕ್ಷೆ ಆಗಲೇಬೇಕೆಂದು  ಘೋಷಣೆಗಳನ್ನು ಕೂಗಿ ಸತ್ಯಗ್ರಹ ಕೈಕೊಂಡರು. ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳ ಮುಖಾಂತರ ನೀಡಿದ ಪತ್ರದಲ್ಲಿ ಕೊಲೆಗಡುಕನಿಗೆ ಗಲ್ಲು ಶಿಕ್ಷೆ ಆಗಬೇಕು, ಹಾಗೂ ಅವನಿಗೆ ಸಹಕಾರ ನೀಡಿದವರೆಲ್ಲಾರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆನ್ನುವ ಪತ್ರವನ್ನು ಜಿಲ್ಲಾಧಿಕಾರಿಗಳ ಪರವಾಗಿ ವಿಶೇಷ ತಹಶೀಲ್ದಾರರು ಧರಣಿ ನಿರತ ಸತ್ಯಾಗ್ರಹಿಗಳ ಹತ್ತಿರ ಬಂದು ಹೋರಾಟಗಾರರ ಪತ್ರವನ್ನು ಸ್ವೀಕರಿಸಿದರು.    

ಜನಪರ ಹೋರಾಟಗಾರ ಕೆ.ಎಂ.ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸತ್ಯಗ್ರಹದಲ್ಲಿ ಉಗರಗೊಳ ಶ್ರೀಗಳು, ರೈತ ಸಂಘದ ದರೂರು ಪುರುಷೋತ್ತಮ ಗೌಡ, ವೀ.ವಿ.ಸಂಘದ ಮಾಜಿ ಅಧ್ಯಕ್ಷ ಗುರುಸಿದ್ಧಸ್ವಾಮಿ, ವೀ.ವಿ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕಲ್ಗುಡಿ ಮಂಜುನಾಥ, ಕೋರಿ ವಿರುಪಾಕ್ಷಪ್ಪ, ಕೆರೇನಳ್ಳಿ ಚಂದ್ರಶೇಖರ್, ಹೆಚ್‌.ಎಂ.ಕಿರಣ್ ಕುಮಾರ್, ಪತ್ರಕರ್ತರಾದ ವೀರಭದ್ರಗೌಡ, ಹೆಚ್‌.ಎಂ.ಮಹೇಂದ್ರಕುಮಾರ್,  ವೀರಶೈವ ಮಹಾಸಭಾದ ಮುಖಂಡರಾದ ಹೊನ್ನನ ಗೌಡ, ಗಂಗಾವತಿ ವೀರೇಶ್, ಕೆ.ಪಿ.ಚನ್ನಬಸವರಾಜ, ಶಿವಾ ರಮೇಶ್,  ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಪಿ.ಬಂಡೇಗೌಡ, ವಿ.ಎಸ್‌.ಮರಿದೇವಯ್ಯ, ಕೋಳೂರು ಚಂದ್ರಶೇಖರಗೌಡ, ಹೆಚ್‌.ಕೆ.ಗೌರಿಶಂಕರ, ಕೆ.ಎಂ. ಕೊಟ್ರೇಶ್ ಸಿಂಧುವಾಳ್  ಎಂ.ಲೋಕನಾಥಸ್ವಾಮಿ, ಬಿ.ಎಂ.ಎರಿ​‍್ರಸ್ವಾಮಿ, ಮೋರೆಗೆರೆ ಕೊಟ್ರೇಶ್, ಸಿಂಧುವಾಳ್ ಮಹೇಶ್ ಗೌಡ,  ಬಾಣಾಪುರ ಶಿವಕುಮಾರಗೌಡ ಚೆಳ್ಳುಗುರ್ಕಿ ವಿರುಪಾಕ್ಷಗೌಡ,  ಹೂಗಾರ ಸುರೇಶ್,  ಜೆ.ಎಂ.ಶಶಿಧರ, ಕಲ್ಲುಕಂಭ ಪ್ರತಾಪಗೌಡ, ಬಸವರಾಜ ಬಿಸಲಹಳ್ಳಿ, ಸಿ.ಎಂ.ವೀರಭದ್ರಯ್ಯ, ಕಂಪ್ಲಿ ಶರಣಬಸವಸ್ವಾಮಿ, ಶಂಕರಬಂಡೆ ಮಲ್ಲಿಕಾರ್ಜುನ, ಮಂಜುನಾಥಸ್ವಾಮಿ, ಭೀಮೇಶ್, ಕೆ.ಹೆಚ್‌.ಎಂ.ಗೌರಿಶಂಕರ, ಜನಕಲ್ಯಾಣ ರಕ್ಷಣ ವೇದಿಕೆಯ ಬಸವರಾಜಸ್ವಾಮಿ, ಅಮರೇಶಯ್ಯ ಹಚ್ಚೊಳ್ಳಿ, ಮದಿರೆ ಬಸವರಾಜಸ್ವಾಮಿ, ಹೆಚ್‌.ಎಂ.ವೀರೇಶಸ್ವಾಮಿ, ಚನ್ನಬಸಯ್ಯಸ್ವಾಮಿ, ವಿಶ್ರಾಂತ ಪ್ರಾಂಶುಪಾಲರಾದ ಹೇಮರೆಡ್ಡಿ, ಜೆ.ಬಸವರಾಜ ಹಾಗೂ ಜಮಾಪುರ ಪೊಂಪಾಪತಿ, ಮಲ್ಲಿಕಾರ್ಜುನಸ್ವಾಮಿ, ಎರಿ​‍್ರಸ್ವಾಮಿ ಕೆ.ಎಸ್‌.ಆರ್‌.ಟಿ.ಸಿ., ಮಣಿಕಂಠ ಕೆ.ಎಂ. ಹರೀಶ್, ಭರತ್‌ಗೌಡ, ಸುನೀಲ್, ಪ್ರಮೋದರೆಡ್ಡಿ ಮತ್ತು ಗೀರೀಧರ ಭಾಗವಹಿಸಿದ್ದರು.