ಮುಂಡರಗಿ: ಸಾಮೂಹಿಕ ವಿವಾಹ ಕಾರ್ಯಕ್ರಮ

ಮುಂಡರಗಿ 22:  ವಧು-ವರರು ತಮ್ಮ ನೂತನ ಜೀವನವನ್ನು ಸುಂದರವಾಗಿಸಲು ಇಬ್ಬರೂ ಸತಿಪತಿಗಳೊಂದಾಗಿ ಪ್ರೀತಿ ವಿಶ್ವಾಸದಿಂದ ಸಣ್ಣವರು ದೊಡ್ಡವರು ಎನ್ನುವುದಕ್ಕಿಂದ ಎಲ್ಲರೊಂದಿಗೆ ಪ್ರೀತಿ ಗೌರವದಿಂದ ನಡೆದುಕೊಂಡು ಈ ದೇಶಕ್ಕೆ ಗಂಡು-ಹೆಣ್ಣು ಎಂಬ ಬೇದ-ಭಾವ ಮಾಡದೇ ಉತ್ತಮವಾದ ಮಗುವಿಗೆ ಜನ್ಮವನ್ನು ನೀಡಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು. 

ಪಟ್ಟಣದ ಅನ್ನದಾನೀಶ್ವರ 154ನೇ ಯಾತ್ರಾ ಮಹೋತ್ಸವದ ನಿಮಿತ್ಯ ಏರಿ​‍್ಡಸಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು, ಚನ್ನಬಸವಣ್ಣನವರ ಬಳಿವಿಡಿದು ಬಂದು ಪರಮ ತಪಸ್ವಿ ಅನ್ನದಾನೀಶ್ವರರು ಒಲಿದು ಪಾದವನಿಟ್ಟ ಕ್ಷೇತ್ರ ಈ ಮೃಡಗಿರಿ ಕ್ಷೇತ್ರ. ಇಲ್ಲಿಯ ಕಾಡ ಜನತೆಗೆ ಕಾಯಕವ ಕಲಿಸಿ ನಾಡ ಜನರನ್ನಾಗಿಸಿದ ಕೀರ್ತಿ ಮೂಲ ಪುರುಷರದ್ದಾಗಿದೆ. 

ಬಸವಾದಿ ಶರಣರ ತತ್ವ-ಸಿದ್ದಾಂತ-ಸಾಹಿತ್ಯ-ಸಂಸ್ಕೃತಿ-ಜೀವನ ಹೀಗೆ ಹಲವಾರು ಮೌಲ್ಯಗಳನ್ನು ತಮ್ಮ ಶ್ರದ್ಧೆ-ನಿಷ್ಠೆ-ಅವಧಾನಗಳಿಂದ ಪ್ರಸಾರ ಮಾಡುತ್ತಾ ಬಂದು, ಈ ಕನ್ನಡ ನಾಡಿನ ಲಿಂಗಾಯತ ಮಠಗಳಲ್ಲಿ ಮುಂಡರಗಿ ಜಗದ್ಗುರು ಶ್ರೀ ಅನ್ನದಾನೀಶ್ವರ ಸಂಸ್ಥಾನಮಠವು ತನ್ನದೇಯಾದ ಉನ್ನತ ಘನತೆಯನ್ನು ಹೊಂದಿದೆ. ಹೀಗೆ ಧಾಮಿಕ ಸ್ವಾತಂತ್ರವನ್ನು ಕೊಟ್ಟಿರುವ ಈ ಧರ್ಮದಲ್ಲಿ ಲಿಂಗವನ್ನು ಕಟ್ಟಿಕೊಂಡ ಭಕ್ತ ಸದಾಚಾರದಿಂದ ಶಿವಧರ್ಮವನ್ನು ನಡೆಸಿಕೊಂಡು ಹೋಗಬೇಕಾಗುತ್ತದೆ. ಹಾಗೂ ಇಂದು ಅರಣ್ಯವೆಲ್ಲ ನಾಶವಾಗಿ ಹೆಚ್ಚು ಬಿಸಿಲಿನ ತಾಪಕ್ಕೆ ಎಷ್ಟೋ ಜನತೆ ತತ್ತರಿಸುತ್ತಿದ್ದಾರೆ. ಇದರಿಂದ ಮಳೆಯ ಅಭಾವವು ಹೆಚ್ಚಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಗಿಡ ಮರಗಳನ್ನು ನೆಟ್ಟು ಅವುಗಳನ್ನು ರಕ್ಷಿಸುವ ಗುಣಧರ್ಮಗಳನ್ನು ರೂಡಿಸಿಕೊಳ್ಳಬೇಕು. ಅಲ್ಲದೇ ಎಲ್ಲರೂ ಪ್ರತಿಜ್ಞಾ ಭದ್ಧರಾಗಿ ನಿಮ್ಮ ಜೀವನ ನಾಶರಹಿತವಾಗಿರಲಿ ಎಂದು ಹೇಳಿದರು. 

ಡಾ.ಸುಜ್ಞಾನದೇವ ಶಿವಾಚಾರ್ಯ ಮಾತನಾಡಿ, ಮನುಷ್ಯನು ತಮ್ಮ ಜೀವನದಲ್ಲಿ ಅತ್ಯುತ್ತಮ ವ್ಯವಸ್ತೆಯನ್ನು ಕಾಣಬೇಕಾದರೆ ದೇವರ ಸನ್ನಿದಿಯಲ್ಲಿ ಮಾತ್ರ. ಧಮ, ಸಂಸ್ಕೃತಿ, ಸಂಸಾರವನ್ನು ಗಳಿಸಬೇಕು. ನವ ದಂಪತಿಗಳು ಇಂದು ನಡೆದ ತಮ್ಮ ಮದುವೆಯ ಜೊತೆಗೆ ಪ್ರೀತಿ ವಾತ್ಸಲ್ಯದಿಂದ ಬದುಕಬೇಕು. ಅಂದಾಗ ನಮ್ಮ ಜೀವನ ಪವಿತ್ರವಾಗುತ್ತದೆ. ಕಾಯಾ, ವಾಚಾ, ಮನಸಾದಿಂದ ಎಲ್ಲರೊಂದಿಗೆ ಪ್ರೀತಿ ವಿಶ್ವಾಸ ಅಷ್ಟೇ ಸಾಲದು ಇತರರೊಂದಿಗೆ ಅವಿನಾವಭವ ಸಂಬಂಧವನ್ನು ಇಟ್ಟುಕೊಳ್ಳಬೇಕು. ಹಾಗೂ ಮಮತೆ, ವ್ಸನ, ಪ್ರೀತಿಯನ್ನು ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪ್ರವನಕಾರರಾದ ಬಳೂಟಗಿಯ ಶಿವಕುಮಾರ ದೇವರು ಮಾತನಾಡಿದರು, ಕುಕನೂರಿನ ಮಹಾದೇವ ಶ್ರೀಗಳು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಎಸ್‌.ಎಸ್‌.ಇನಾಮತಿ ಹಾಗೂ ಶಂಭುಲಿಂಗಸ್ವಾಮಿ ಮಠದ ನಿರೂಪಿಸಿದರು. ಹಾಗೂ ಈ ವೇಳೆ 15 ಜೋಡಿಗಳು ತಮ್ಮ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆಯಿಂದ ಮಠದಲ್ಲಿ ವಿಶೇಷ ಪೂಜೆ, ನೈವೆದ್ಯ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. 

ಈ ವೇಳೆ ಶಾಂತಯ್ಯ ಹಿರೇಮಠ, 2023ರಲ್ಲಿ ಪದ್ಮಶ್ರಿ ಪ್ರಶಸ್ತಿ ಪಡೆದ ರಾಣಿ ಮಾಚೆ, ಅನ್ನದಾನೀಶ್ವರ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಕರಬಸಪ್ಪ ಹಂಚಿನಾಳ, ಡಾ.ಬಿ.ಜಿ.ಜವಳಿ, ನಾಗೇಶ ಹುಬ್ಬಳ್ಳಿ, ಮಂಜುನಾಥ ಮುಧೋಳ, ದೇವೇಂದ್ರ​‍್ಪ ರಾಮೇನಹಳ್ಳಿ, ಮಂಜುನಾಥ ಇಟಗಿ, ನಾಗರಾಜ ಮುರಡಿ, ದೇವಪ್ಪ ಇಟಗಿ, ಅಕ್ಕನ ಬಳಗದವರು ಹಾಗೂ ಇತರರು ಇದ್ದರು.