ಭಕ್ತಿಭಾವದಲ್ಲಿ ಮುಳುಗಿದ ಮುಂಡಗೋಡ ಹನುಮ ಜಯಂತಿ ವೈಭವ
Mundagoda, immersed in devotion, celebrates Hanuman Jayanti
ಲೋಕದರ್ಶನ ವರದಿ
ಮುಂಡಗೋಡ 03 : ಪಟ್ಟಣದಲ್ಲಿ ಹನುಮ ಜಯಂತಿ ಈ ಬಾರಿ ಅಪಾರ ಭಕ್ತಿಭಾವ ಮತ್ತು ಅದ್ಧೂರಿ ಸಂಭ್ರಮದೊಂದಿಗೆ ಆಚರಿಸಲಾಯಿತು. ಚೈತ್ರ ಮಾಸದ ಪೂರ್ಣಿಮೆಯ ಪವಿತ್ರ ದಿನದ ಅಂಗವಾಗಿ ಜಂಬಗಿ ದವಾಖಾನೆ ಸಮೀಪದ ಹನುಮಾನ್ ದೇವಸ್ಥಾನ ಭಕ್ತರಿಂದ ಕಿಕ್ಕಿರಿದು ತುಂಬಿತ್ತು.ಕಲಿಯುಗದ ಪ್ರತ್ಯಕ್ಷ ದೈವ ಎಂದು ನಂಬಲಾಗುವ ಹನುಮಂತನ ಆರಾಧನೆಗಾಗಿ ಭಕ್ತರು ಬೆಳಗ್ಗಿನಿಂದಲೇ ದೇವಸ್ಥಾನಕ್ಕೆ ಆಗಮಿಸಿ ಪೂಜೆಯಲ್ಲಿ ತೊಡಗಿಕೊಂಡರು.ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹನುಮಂತನ ಭಾವಚಿತ್ರಕ್ಕೆ ವಿಶೇಷ ಪುಷ್ಪಾರ್ಚನೆ ಮತ್ತು ಮಹಾಪೂಜೆ ನೆರವೇರಿಸಲಾಯಿತು. ಭಕ್ತರ ನಂಬಿಕೆಯಂತೆ, ಇಂದಿಗೂ ಭೂಮಿಯ ಮೇಲೆಯೇ ನೆಲೆಸಿರುವ ಹನುಮಂತನು ತಮ್ಮನ್ನು ಕಾಪಾಡುತ್ತಾನೆ ಎಂಬ ಭಾವನೆ ಕಾರ್ಯಕ್ರಮದ ವಾತಾವರಣವನ್ನು ಇನ್ನಷ್ಟು ಆಧ್ಯಾತ್ಮಿಕವಾಗಿಸಿತು.
ಪೂಜಾ ಕಾರ್ಯಕ್ರಮದ ಬಳಿಕ ಭಕ್ತರಿಗೆ ತಂಪಾದ ಮಜ್ಜಿಗೆ ಹಾಗೂ ಸಿಹಿ ಪ್ರಸಾದ ವಿತರಣೆ ಮಾಡಲಾಗಿದ್ದು, ಬೇಸಿಗೆಯ ತಾಪದಲ್ಲಿ ಇದು ವಿಶೇಷ ಆಕರ್ಷಣೆಯಾಯಿತು. ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರು ಸಹ ಭಕ್ತಿಭಾವದಿಂದ ಪ್ರಸಾದ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಜರಂಗದಳ ತಾಲೂಕ ಸಂಚಾಲಕ ಶಂಕರ ಲಮಾಣಿ, ವಿಶ್ವ ಹಿಂದೂ ಪರಿಷತ್ ಅಯ್ಯಪ್ಪ ಭಜಂತ್ರಿ,ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ್ ಪಾಟೀಲ್, ಪ್ರಕಾಶ್ ಬಡಿಗೇರ್, ಮಂಜುನಾಥ್ ಹೆಚ್ ಪಿ, ವಿಶ್ವನಾಥ್ ನಾಯರ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಶೇಖರ್ ಲಮಾಣಿ ಮಂಜುನಾಥ್, ಹರ್ಮಲ್ಕರ್ ವಿಶ್ವನಾಥ್ ಪವರ್ ಶೆಟ್ರು, ಹಾಗೂ ಬಸವರಾಜ್ ಓಶಿಮಠ, ಮಂಜುನಾಥ್ ಮತ್ತಿಗಟ್ಟಿ, ಸುರೇಶ್ ಕಲ್ಲೋಳ್ಳಿ, ಮಾರುತಿ ಲಮಾಣಿ, ರವಿ ಹಿರೇಮ, ಕಾರ್ಯಕರ್ತರು ಮತ್ತು ಹನುಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 