ಜೀವ ಜಲ ಬಂಗಾರಕ್ಕಿಂತ ಅತೀ ಮೌಲ್ಯಯುತವಾದುದು: ಡಾ.ಪಂಡಿತಾರಾಧ್ಯ ಶ್ರೀಗಳು
ಸಾಣೇಹಳ್ಳಿ: ನಾಡಿನಲ್ಲಿ ಮಳೆಯ ಅಭಾವ ತುಂಬಾ ಇದೆ. ಹಾಗಾಗಿ ಮಕ್ಕಳು ನೀರನ್ನು ಮಿತವಾಗಿ ಬಳಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು. ರೈತರ ಸ್ಥಿತಿಯನ್ನು ಗಮನಿಸಿದರೆ ಎಲ್ಲಲ್ಲಿಂದಲೋ ನೀರನ್ನು ತಂದು ತಮ್ಮ ತೋಟ ತುಡಿಕೆಗಳನ್ನು ಉಳಿಸಿಕೊಳ್ಳೋದನ್ನ ನೋಡಿದರೆ ಅಯ್ಯೋ ಅನಿಸುತ್ತದೆ. ರೈತರು ಇದರ ಸಹವಾಸವೇ ಬೇಡ ಎಂದು ಸುಸ್ತಾಗಿ ಹೋಗಿದ್ದಾರೆ. ಜೀವ ಜಲ ಬಂಗಾರಕ್ಕಿಂತ ಅತೀ ಮೌಲ್ಯಯುತವಾದುದು. ಆದ್ದರಿಂದ ವಿದ್ಯಾಥರ್ಿಗಳು ಇಂತಹ ಜೀವಜಲ'ವನ್ನು ಮಿತವಾಗಿ ಬಳಸಬೇಕು ಎಂದು ನಗರದ ಶಿವಕುಮಾರ ರಂಗಮಂದಿರದಲ್ಲಿ ನಡೆದ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶಿವಕುಮಾರ ಸ್ವಾಮಿಜಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾಥರ್ಿ ಸಂಘಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಹೆಜ್ಜೆ 'ಗುರುತು ಸ್ಮರಣೆ' ಸಂಚಿಕೆ ಉದ್ಘಾಟನಾ ಸಮಾರಂಭದ ಮಾತನಾಡಿದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿದರು.
ವಿದ್ಯಾಥರ್ಿಸಂಘಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಶಿವಮೊಗ್ಗ ಬಸವಕೇಂದ್ರ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ದೀಪವನ್ನು ಬೆಳಗಿ ಉದ್ಘಾಟನೆ ಮಾಡಿದ್ವಿ, ಮೊದಲನೆಯ ಬಾರಿ ದೀಪ ಹತ್ತಲಿಲ್ಲ, ಆದರೆ ಎರಡನೆಯ ಬಾರಿ ಬೆಳಗಿಸಿದಾಗ ಸ್ವಲ್ಪ ಸಮಯ ಉರಿದು ನಂದಿತು, ಆವಾಗ ನಮಗೆ ಅನಿಸಿದ್ದು ದೀಪ ಬೆಳಗಿಸುವುದು ತುಂಬಾ ಕಷ್ಟ ಅಂತ. ಏಕೆಂದರೆ ಒಂದು ಪ್ರಣತೆ ತಯಾರಾಗಬೇಕಾದಲ್ಲಿ ಕುಂಬಾರ ವರ್ಷವಿಡಿ ಕಷ್ಟಪಡಬೇಕು. ಬತ್ತಿ ತಯಾರಗಬೇಕಾದಲ್ಲಿ ರೈತ ವರ್ಷವಿಡಿ ಕಷ್ಟಪಡಬೇಕು. ಹಾಗೂ ಎಣ್ಣೆ ತಯಾರಾಗಬೇಕಾದಲ್ಲಿ ಮತ್ತೊಬ್ಬ ರೈತ ವರ್ಷವಿಡಿ ಕಷ್ಟಪಡಬೇಕು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾತನಾಡಿದ ಹೊಸದುರ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ ಜಯ್ಯಪ್ಪ ಮಾತನಾಡಿ; ನನಗೆ ತುಂಬಾ ಖುಷಿಯ ವಿಚಾರ ಏನೆಂದರೆ ಇಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ವಿದ್ಯಾಥರ್ಿಗಳ ಮೂಲಕ ಅನುಷ್ಠ್ಠಾನಗೊಳಿಸುತ್ತಿರುವುದು. ಇದರಿಂದ ಮಕ್ಕಳಲ್ಲಿ ನಾಯಕತ್ವದ ಗುಣ ಹಾಗೂ ಸೇವಾಮನೋಭಾವನೆ ಬೆಳೆಯುತ್ತದೆ. ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಶಾಸಕರು ಮಾತ್ರವೇ ನಾಯಕರುಗಳಲ್ಲ, ಯಾರು ಮುಖ್ಯವಾಗಿ ಒಂದು ಮನೆಗೆ, ಸಮಾಜಕ್ಕೆ ಬೇಕಗಿದೆಯೋ ಅಂತವರು ನಿಜವಾದ ನಾಯಕರು. ಅಂತಹ ನಾಯಕರು ನಮ್ಮ ಪೂಜ್ಯರು ಎಂದರು.
ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ ವಿ ಗಂಗಾಧರಪ್ಪ ಮಾತನಾಡಿ ಸಂಘಗಳ ಉದ್ಘಾಟನಾ ಸಮಾರಂಭ ತುಂಬಾ ಚೆನ್ನಾಗಿ ಸರಳವಾಗಿ ಮೂಡಿಬಂದಿತು, ಇಲ್ಲಿ ಓದುವ ವಿದ್ಯಾಥರ್ಿಗಳು ತುಂಬಾ ಪುಣ್ಯವಂತರು, ಇಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಸಂಸ್ಕೃತಿ ದೊರೆಯುತ್ತದೆ. ನಿಮ್ಮ ತಂದೆ ತಾಯಿಗಳು ತುಂಬಾ ಕಷ್ಟ ಪಟ್ಟು ಸಾಣೇಹಳ್ಳಿಗೆ ಸೇರಿಸಿದ್ದಾರೆ. ಅವರಿಗೆ ಹಾಗೂ ಪೂಜ್ಯರಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಎಂದರು.
ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಭಾನುಪ್ರಿಯ ಸ್ವಾಗತಿಸಿದರೆ ವಂದನಾ ಚಂದನ ಕಾರ್ಯಕ್ರಮ ನಿರೂಪಿಸಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 