ಮಿಸ್ಗ್ರ್ಯಾಂಡ್ ಮಲೇಷ್ಯಾ 2021 ವಿಜೇತೆಗೆ ದೇವಾಲಯದಲ್ಲಿ ಲೈಂಗಿಕ ಕಿರುಕುಳ
Miss Grand Malaysia 2021 Winner Lishallini Kanaran Sexually Harassed in Temple
ಕೌಲಾಲಂಪುರ 10: ದೇಗುಲಕ್ಕೆ ಬಂದಿದ್ದ ಮಿಸ್ಗ್ರ್ಯಾಂಡ್ ಮಲೇಷ್ಯಾ 2021 ವಿಜೇತೆಗೆ ಪೂಜಾರಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ರೂಪದರ್ಶಿಯೊಬ್ಬರು ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ದೇಗುಲದ ಪೂಜಾರಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಭಾರತ ಮೂಲದ ನಟಿ ಹಾಗೂ ದೂರದರ್ಶನ ನಿರೂಪಕಿ ಹಾಗೂ ಮಿಸ್ಗ್ರ್ಯಾಂಡ್ ಮಲೇಷ್ಯಾ 2021 ವಿಜೇತೆ ಲಿಶಾಲ್ಲಿನಿ ಕನರನ್ ಈ ವಿಚಾರವನ್ನು ತಮ್ಮ ಇನ್ ಸ್ಟಾಗ್ರಾಮ್ನಲ್ಲಿ ಬಹಿರಂಗ ಪಡಿಸಿದ್ದಾರೆ. ಮಾತ್ರವಲ್ಲದೇ ಪೂಜಾರಿ ವಿರುದ್ಧ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ರೂಪದರ್ಶಿ ಲಿಶಾಲ್ಲಿನಿ ಕನರನ್ ತಾವು ಯಾವಾಗಲೂ ಭೇಟಿ ನೀಡುತ್ತಿದ್ದ ಮಲೇಷ್ಯಾದ ಸೆಪಾಂಗ್ ನಲ್ಲಿರುವ ಮಾರಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಈಕೆಯನ್ನು ನೋಡಿದ ಪೂಜಾರಿ ವಿಶೇಷ ಪೂಜೆ ನೆಪದಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ರೂಪದರ್ಶಿಯ ಎದೆಗೆ ಕೈಹಾಕಿ, ಏಕಾಂತ ಸೇವೆ ನೆಪದಲ್ಲಿ ಆಕೆಯ ಬಟ್ಟೆ ಬಿಚ್ಟಲು ಸೂಚಿಸಿದ್ದಾನೆ. ಇದಕ್ಕೆ ರೂಪದರ್ಶಿ ಒಪ್ಪದಿದ್ದಾಗ ಆಕೆಯನ್ನು ನಿಂದಿಸಿದ್ದಾನೆ ಎಂದು ಹೇಳಲಾಗಿದೆ.
ನಾನು ತುಂಬಾ ಧಾರ್ಮಿಕ ವ್ಯಕ್ತಿತ್ವದವಳು. ನನ್ನ ತಾಯಿ ಭಾರತಕ್ಕೆ ತೆರಳಿರುವುದರಿಂದ ನಾನು ಒಬ್ಬಳೇ ಮಲೇಷ್ಯಾದ ಸೆಂಪಾಂಗ್ ನಲ್ಲಿರುವ ಮಾರಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ದೇವಾಲಯದ ಆಚರಣೆಗಳ ಪರಿಚಯವಿಲ್ಲದ ಕಾರಣ, ನಾನು ಸಾಮಾನ್ಯವಾಗಿ ಮಾರ್ಗದರ್ಶನಕ್ಕಾಗಿ ಅರ್ಚಕರನ್ನು ಅವಲಂಬಿಸಿದ್ದೆ. ಆದರೆ ಈ ಭೇಟಿ ಸಮಯದಲ್ಲಿ ಪೂಜಾರಿ ಪವಿತ್ರ ನೀರು ಮತ್ತು ರಕ್ಷಣಾತ್ಮಕ ದಾರ ನೀಡುವುದಾಗಿ ಹೇಳಿದರು. ನಾನು ನನ್ನ ಪ್ರಾರ್ಥನೆ ಪೂರ್ಣಗೊಳಿಸಿದ ನಂತರ ಸುಮಾರು 90 ನಿಮಿಷಗಳ ಕಾದೆ. ನಂತರ ಪೂಜಾರಿ ಆಶೀರ್ವಾದಕ್ಕಾಗಿ ಖಾಸಗಿ ಕಚೇರಿಗೆ ಬಾ ಎಂದು ನನ್ನನ್ನು ಹಿಂಬಾಲಿಸು ಎಂದ.
ನಾನೂ ಕೂಡ ಒಳಗೆ ಹೋದೆ. ಈ ವೇಳೆ ಪೂಜಾರಿ ಒಂದು ಸುವಾಸನೆ ಭರಿತ ನೀರನ್ನು ತೋರಿಸಿ ಇದು ಭಾರತದಿಂದ ಬಂದ ಪವಿತ್ರ ನೀರು.. ಸಾಮಾನ್ಯ ಜನರಿಗೆ ಇದನ್ನು ನೀಡುವುದಿಲ್ಲ ಎಂದು ಗುಲಾಬಿ ಸಾರ ಇರುವ ನೀರನ್ನು ಮೈಮೇಲೆ ಎರಚಿದರು. ನೀರಿನ ಗಾಢತೆಯಿಂದಾಗಿ ಕಣ್ಣು ತೆರೆಲಾಗಲಿಲ್ಲ. ಈ ವೇಳೆ ಪೂಜಾರಿ ನನ್ನ ಎದೆಯೊಳಗೆ ಕೈಹಾಕಿ ನಾನು ಧರಿಸಿದ್ದ ಪಂಜಾಬಿ ಡ್ರೆಸ್ ತೆಗೆಯುವಂತೆ ಹೇಳಿದ. ಈ ವೇಳೆ ನಾನು ಡ್ರೆಸ್ ಟೈಟ್ ಇದೆ ಎಂದು ಡ್ರೆಸ್ ತೆರೆಯಲು ವಿರೋಧಿಸಿದೆ. ಈ ವೇಳೆ ಕೋಪಗೊಂಡ ಪೂಜಾರಿ ದೇಗುಲಕ್ಕೆ ಬಂದಾಗ ಇಂತಹ ಟೈಟ್ ಡ್ರೆಸ್ ಗಳನ್ನು ಧರಿಸಬಾರದು ಎಂದು ಗದರಿದ. ಬಳಿಕ ನನ್ನ ತಲೆ ಮೇಲೆ ಕೈ ಇಟ್ಟು ಬ್ಲೌಸ್ ನೊಳಗೆ ಕೈಹಾಕಿದ ಎಂದು ಬರೆದುಕೊಂಡಿದ್ದಾರೆ.
ಇನ್ನು ತನಗಾದ ಲೈಂಗಿಕ ದೌರ್ಜನ್ಯದ ಕುರಿತು ಯಾರಿಗೂ ಹೇಳದ ರೂಪದರ್ಶಿ ಬಳಿಕ ತನ್ನ ತಾಯಿ ಭಾರತದಿಂದ ಬಂದ ಬಳಿಕ ಆಕೆಗೆ ನಡೆದ ಎಲ್ಲ ಘಟನೆಗಳನ್ನು ವಿವರಿಸಿದ್ದಾರೆ. ಬಳಿಕ ತಾಯಿಯೊಂದಿಗೆ ಸೇರಿ ಸೆಪಾಂಗ್ ಜಿಲ್ಲಾ ಪೊಲೀಸರಿಗೆ ಜುಲೈ.4 ರಂದು ದೂರು ನೀಡಿದ್ದಾರೆ.
ಇನ್ನು ಪ್ರಕರಣ ಸಂಬಂಧ ದೂರುದಾಖಲಿಸಿಕೊಂಡಿರುವ ಸೆಂಪಾಂಗ್ ಪೊಲೀಸರು ಪರಾರಿಯಾಗಿರುವ ಪೂಜಾರಿಗಾಗಿ ಶೋಧ ನಡೆಸುತ್ತಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 