ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ ಅಧಿಕಾರಿಗಳಿಗೆ ಸಚಿವ ತಿಮ್ಮಾಪೂರ ಸೂಚನೆ

ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ  ಅಧಿಕಾರಿಗಳಿಗೆ ಸಚಿವ ತಿಮ್ಮಾಪೂರ ಸೂಚನೆ   Minister Thimmapur instructs officials to handle land acquisition work of Krishna Upper River Projec

ಲೋಕದರ್ಶನ ವರದಿ

        ಬಾಗಲಕೋಟೆ 25: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಪರಿಹಾರ ಹಂಚಿಕೆಗೆ ಸಂಬಂಧಿಸಿದಂತೆ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ ಮಾಹಿತಿ ಸಜ್ಜಾಗಿ ಇಟ್ಟುಕೊಳ್ಳುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚವ ಆರಿ​‍್ಬ.ತಿಮ್ಮಾಪೂರ ಅಧಿಕಾರಿಗಳಿಗೆ ಸಲಹೆ ನೀಡಿದರು.  ನವನಗರದ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂಗಮ ಸಭಾಭವನದಲ್ಲಿ ಶನಿವಾರ ಯುಕೆಪಿ ಯೋಜನೆಯಡಿ ಮುಳುಗಡೆ ಜಮೀನಿಗೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ವಿಷಯಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅವಾರ್ಡ ಆಗಿರುವ ಹಾಗೂ ಅವಾರ್ಡ ಸ್ಟೇಜನಲ್ಲಿರುವ ಜಮೀನುಗಳ ಸರ್ವೆ ಕಾರ್ಯ ಕೈಗೊಂಡು ಪರಿಹಾರ ಹಂಚಿಕೆ ಮಾಡಲು ಎಲ್ಲ ರೀತಿಯಿಂದ ಮಾಹಿತಿ ಸಜ್ಜಾಗಿರಬೇಕು. ಇದಕ್ಕಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕೆಲಸ ಮಾಡಲು ಸೂಚನೆ ನೀಡಿದರು.  

        ಆದ್ಯತೆ ಮೇರೆಗೆ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದ್ದು, ಅಧಿಕಾರಿಗಳು ಮಾನವೀತ ದೃಷ್ಠಿಯನ್ನು ಇಟ್ಟುಕೊಂಡು ಹಾಗೂ ನೋಂದ ಸಂತ್ರಸ್ತರಿಗೆ ಧ್ವನಿಯಾಗುವ ರೀತಿಯಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸೂಕ್ತ ಪರಿಹಾರ ದೊರೆಯುವಂತೆ ಮಾಡಬೇಕು. ಮುಧೋಳ ತಾಲೂಕಾ ವ್ಯಾಪ್ತಿಯಲ್ಲಿ 3300 ಎಕರೆ, ಬೀಳಗಿ ತಾಲೂಕಿನಲ್ಲಿ 19500 ಎಕರೆ ಜಮಖಂಡಿ ತಾಲೂಕಿನಲ್ಲಿ 2400 ಎಕರೆ  ಹಾಗೂ ಬಾಗಲಕೋಟೆಯಲ್ಲಿ 8700 ಎಕೆರೆ ಜಮೀನು ಮುಳುಗಡೆಯಾಗುತ್ತಿರುವ ಬಗ್ಗೆ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮಾಹಿತಿ ಪಡೆದುಕೊಂಡರು.  

          ಪುನರ್ವಸತಿ ಕೇಂದ್ರಗಳಲ್ಲಿ ಶೇ.50ಕ್ಕಿಂದ ಹೆಚ್ಚಿಗೆ ಜನ ಸಿಪ್ಟ ಆಗುತ್ತಿದ್ದರೆ ಆ ಕೇಂದ್ರದಲ್ಲಿ ಅಲ್ಲಿರುವ ಸಮಸ್ಯೆಗಳು ಇದ್ದಲ್ಲಿ ಪರಿಹರಿಸುವ ಕೆಲಸವಾಗಬೇಕು. ಅಲ್ಲದೇ ಪ್ರತಿಯೊಂದು ಪುನರ್ವಸತಿ ಕೇಂದ್ರಗಳಲ್ಲಿ ಸ್ಮಶಾನ ಜಾಗ ಗುರುತಿಸಿ ಅದಕ್ಕೆ ಬೋರ್ಡ ಹಾಕುವ ಕೆಲಸವಾಗಬೇಕು. ಜಮಖಂಡಿ ಎಸ್‌.ಎಲ್‌.ಓಗಳು ಮುಂದಿನ 5 ದಿನಗಳಲ್ಲಿ ಗ್ರಾಮ ಸಭೆ ಕೈಗೊಂಡು ಸಂತ್ರಸ್ತರ ಅಹವಾಲುಗಳಿಗೆ ಸ್ಪಂದಿಸಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು. ಮೊದಲ ಹಂತದಲ್ಲಿ 23 ಗ್ರಾಮಗಳ ಸಂತ್ರಸ್ತರ ಪಟ್ಟಿಯನ್ನು ಸಿದ್ದಪಡಿಸಲು ತಿಳಿಸಿದರು.  

          ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಮಾತನಾಡಿ ಮುಳುಗಡೆಹೊಂದಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಪರಿಹಾರ ನೀಡಲು ಜೂನ್ 8 ಗಡುವು ನೀಡಿದ ಅವರು ಅಧಿಕಾರಿಗಳ ಕಾರ್ಯ ಮಹತ್ವವಾಗಿದ್ದು, ಪ್ರತಿ ವಾರಕ್ಕೊಮ್ಮೆ ತಮ್ಮ ಪ್ರಗತಿಯಕ ಕಾರ್ಯದ ವರದಿಯನ್ನು ಸಲ್ಲಿಸಲು ಸಚಿವರು ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ ಮಾತನಾಡಿ ಮುಳುಗಡೆಯಾಗುವ ಕಟ್ಟಡಗಳಿಗೆ ವಾಸ್ತವ ಬೆಲೆಕೊಡುವ ಕೆಲಸವಾಗಬೇಕು ಎಂದರು. ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿ ಕಂಕಣವಾಡಿ ಗ್ರಾಮ ನಡುಗಡೆಯಾಗಿದ್ದು, ಅಲ್ಲಿರುವ ಜನವಸತಿಯನ್ನು ಸಂಪೂರ್ಣವಾಗಿ ಸ್ಥಳಾಂತರಕ್ಕೆ ಮನವಿ ಮಾಡಿಕೊಂಡರು.  ಸಭೆಯಲ್ಲಿ ಬಾಗಲಕೋಟೆ ಶಾಸಕ ಉಮೇಶ ಮೇಟಿ, ಜಿಲ್ಲಾಧಿಕಾರಿ ಸಂಗಪ್ಪ, ಯುಕೆಪಿ ವ್ಯವಸ್ಥಾಪಕ ನಿರ್ದೇಶಕ ಗಜಾನನ ಬಾಲೆ, ವಿಶೇಷ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಹಾಗೂ ಎಸ್‌.ಎಲ್‌.ಓಗಳು ಉಪಸ್ಥಿತರಿದ್ದರು.