ವಿದ್ಯುತ್ ಗುತ್ತಿಗೆದಾರರ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಮೆಹಬೂಬ್ ಪಠಾಣ್ ಆಯ್ಕೆ
Mehboob Pathan selected as District Joint Secretary of the Electrical Contractors' Association
ಲಕ್ಷ್ಮೇಶ್ವರ 3: ವಿದ್ಯುತ್ ಗುತ್ತಿಗೆದಾರರ ಗದಗ ಜಿಲ್ಲಾ ಸಂಘದ ಪಂಚವಾರ್ಷಿಕ ಚುನಾವಣೆ ಭಾನುವಾರ ಗದಗದಲ್ಲಿ ನಡೆಯಿತು. 2026ರಿಂದ 2031ರ ಅವಧಿಗೆ ನಡೆದ ಚುನಾವಣೆಯಲ್ಲಿ ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ಮೆಹಬೂಬ್ ಖಾನ್ ಪಠಾಣ್ ಅವರು ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪಟ್ಟಣದ 21ನೇ ವಾರ್ಡ್ನ ಮೊಮಿನ್ ಗಲ್ಲಿಗೆ ಆಗಮಿಸಿದ ವೇಳೆ ವಾರ್ಡ್ನ ಹಿರಿಯರು ಹಾಗೂ ಯುವಕರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಮಾಜಿ ಉಪಾಧ್ಯಕ್ಷ ದಾದಾಪೀರ್ ಮುಚ್ಚಾಳೆ ಪಿಡ್ರೋಶ್ ಆಢೂರು ಅವರು, “ನಮ್ಮ ವಾರ್ಡ್ನ ಯುವ ನಾಯಕ ಮೆಹಬೂಬ್ ಖಾನ್ ಪಠಾಣ್ ಅವರು ವಿದ್ಯುತ್ ಗುತ್ತಿಗೆದಾರರ ಜಿಲ್ಲಾ ಸಂಘದ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇವೆ” ಎಂದು ಹೇಳಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಭಾಷಾಸಾಬ್ ಮುಳಗುಂದ, ಮೈನುದ್ದೀನ್ ಸಾಬ್ ಆಢೂರು, ರಿಯಾಜ್ ಗದಗ, ಗುಡುಸಾಬ್ ಗುಡಗೇರಿ, ಇಂತಿಯಾಜ್ ಖಾನ್ ಕಾಪೂರ್, ದಾದಾಪೀರ್ ಬಾಗಲಕೋಟೆ, ಮಾಮೂದ್ ಸಾಬ್ ಸುಡಕೆ, ನಜೀರ್ ಬಾಗಲಕೋಟೆ, ಮೈನುದ್ದೀನ್, ಯಲ್ಲಪ್ಪ ಬಾಕಳೆ, ಮೊಲಾಲಿ ಮುಲ್ಲಾ, ಅಕ್ಬರ್ ಚಳಿಯಾಳ ಸೇರಿದಂತೆ ಮೊಮಿನ್ ಗಲ್ಲಿಯ ಹಿರಿಯರು, ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 