ರಾಯ್ ಪುರ, ಜ 28, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಾಂಧವ್ಯ ಬಲವರ್ಧನೆ, ಗಡಿ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೇಂದ್ರೀಯ ವಲಯ ಮಂಡಳಿಯ ೨೨ನೇ ಸಭೆ ಮಂಗಳವಾರ ಇಲ್ಲಿ ಆಯೋಜನೆಗೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಲಾಗಿದೆ.ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ವಿಶೇಷವಾಗಿ ಸಮಾಲೋಚನೆ ನಡೆಸಲಾಗುತ್ತಿದೆ. ಅಂತಾರಾಜ್ಯ ವಿವಾದಗಳನ್ನು ಪರಿಹರಿಸುವ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ತಂಟೆ ತಕರಾರುಗಳನ್ನುಇತ್ಯರ್ಥಪಡಿಸುವುದು ಸಹ ಈ ಮಂಡಳಿಯ ಜವಾಬ್ದಾರಿಯಾಗಿದೆ.ದೇಶದಲ್ಲಿ ೫ ವಲಯ ಮಂಡಳಿಗಳಿದ್ದು, ಇವು ೧೯೫೭ರಲ್ಲಿ ಅಸ್ಥಿತ್ವಕ್ಕೆ ಬಂದಿವೆ. ಈ ಮಂಡಳಿಗಳಿಗೆ ಕೇಂದ್ರ ಗೃಹ ಸಚಿವರು ಶಾಶ್ವತ ಅಧ್ಯಕ್ಷರು. ಕಾನೂನು ಸುವ್ಯವಸ್ಥೆ ನಿಭಾಯಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಗಂಭೀರ ಮತ್ತು ಮಹತ್ವದ ಚರ್ಚ ನಡೆಯಲಿದೆ.