ಮಹಾಲಿಂಗಪುರ 11: ಜಮ್ಮು ಮತ್ತು ಕಾಶ್ಮಿರ ಹಾಗೂ ಭಾರತದ ಗಡಿ ಭಾಗದಲ್ಲಿ ಪಾಕಿಸ್ಥಾನದ ಷಡ್ಯಂತ್ರದಿಂದ ನಡೆಯುತಿರುವ ಧಾಳಿಯಲ್ಲಿ ಗಾಯಾಳುಗಳಾಗಿರುವ ಸೈನಿಕರಿಗಾಗಿ ಅವಶ್ಯವಿರುವ ರಕ್ತವನ್ನು ಪೋರೈಸಲು ಚಿಮ್ಮಡ ಗ್ರಾಮದಲ್ಲಿ ಬ್ರಹತ್ ರಕ್ತದಾನ ಶಿಬಿರ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಸಮೀಪದ ಚಿಮ್ಮಡ ಗ್ರಾಮ ಪಂಚಾಯತಿ ಆವರಣದಲ್ಲಿ ಕರ್ನಾಟಕ ರಾಜ್ಯ ರಕ್ತಚಾಲನಾ ಪರಿಷತ್ತು, ಮುಧೋಳದ ರಾಮನಗೌಡ ಆಸ್ಪತ್ರೆಯ ರಕ್ತನಿಧಿ ಭಂಡಾರದ ಸಂಚಾರಿ ರಕ್ತದಾನ ಘಟಕದಲ್ಲಿ
ತೇರದಾಳ ಮತಕ್ಷೇತ್ರದ ಯೂಥ್ ಕಾಂಗ್ರೇಸ್ ಸಮೀತಿಯ ಆಶೃಯದಲ್ಲಿ ಹಮ್ಮಿಕೊಳ್ಳಲಾದ ಬ್ರಹತ್ ರಕ್ತದಾನ ಶಿಬಿರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ಯುವಕರು ರಕ್ತದಾನ ಮಾಡುವುದರ ಮೂಲಕ ಸಾರ್ಥಕತೆ ಮೆರೆದರು.
ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮೈಕ್ ಧ್ವನಿ ವರ್ದಕದ ಮೂಲಕ ಗ್ರಾಮದ ಪ್ರತಿಯೊಂದು ವಾರ್ಡಗಳಲ್ಲಿ ನಡೆಸಿದ ಪ್ರಚಾರದ ಫಲವಾಗಿ ನೂರಾರು ಜನ ಯುವಕರು ಮತ್ತು ಯುವತಿಯರು ರಕ್ತದಾನ ಮಾಡಲು ಮುಂದಾಗಿದ್ದು ಪ್ರತಿಯೊಬ್ಬ ರಕ್ತದಾನಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ ಎಂದು ತೇರದಾಳ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಪೂಜಾರಿ ತಿಳಿಸಿದ್ದಾರೆ.
ಕಾಂಗ್ರೆಸ್ ಗ್ರಾಮ ಘಟಕದ ಉಮೇಶ ಪೂಜಾರಿ, ರಾಜ್ಯ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶೀ ಸೂರಜ ಅವಟಿ, ಮಾಜಿ ಸೈನಿಕ ಮಹಾಲಿಂಗಪ್ಪ ಬಳಗಾರ, ಅಶೋಕ ಮೋಟಗಿ, ಗ್ರಾ.ಪಂ. ಸದಸ್ಯ ಬಾಳಪ್ಪ ಗಡೆಪ್ಪನವರ, ಶ್ರೀಶೈಲ ಮಠಪತಿ, ಅಶೋಕ ಚಿಮ್ಮಡ, ಎಸ್ಡಿಎಂಸಿ ಅಧ್ಯಕ್ಷ ಪ್ರಭು ದೇವಗೋಳ, ಮಹಾದೇವ ಅಥಣಿ ಸೇರಿದಂತೆ ಹಲವಾರು ಜನ ಪ್ರಮುಖರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.