ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ
Measures to provide drinking water in the village
ಗದಗ ಜುಲೈ 11: ತಿಮ್ಮಾಪೂರ ಗ್ರಾಮದಲ್ಲಿ ಐದು ಸಾವಿರ ಜನಸಂಖ್ಯೆ ಇದ್ದು ಡಿಬಿಓಟಿ ನೀರು ಕುಡಿಯಲಿಕ್ಕೆ ಬಳಸಲಾಗುತ್ತದೆ. ಸದರಿ ಗ್ರಾಮದಲ್ಲಿ ಒಂದು ಕೆರೆ ಇದ್ದು ಮಳೆಯ ಕೊರತೆಯಿಂದ ಬತ್ತಿ ಹೋಗಿರುತ್ತದೆ. ಗ್ರಾಮದಲ್ಲಿ ಪ್ಲೋರೈಡ್‌ಯುಕ್ತ ನೀರು ಇರುವುದರಿಂದ ಕುಡಿಯುವ ನೀರಿನ ಬೋರ್‌ವೆಲ್‌ಗಳು ಸಹ ಇರುವುದಿಲ್ಲ. ಸದರಿ ಗ್ರಾಮಕ್ಕೆ ಹರ್ಲಾಪುರ ಗ್ರಾಮದ ಮಹಡಿ ಗುಡ್ಡದ ಹತ್ತಿರ ಒಂದು ಬೋರ್‌ವೆಲ್ ಇದ್ದು. ಸುಮಾರು 07 ಕೀ.ಮೀ ದೂರದಲ್ಲಿದೆ. ಸದರಿ ಬೋರವೆಲ್‌ನಿಂದ ಈ ಹಿಂದೆ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿತ್ತು, ಸದ್ಯ ಪೈಪಲೈನ್ ದುರಸ್ಥಿಯಿಂದ ಅದೂ ಸಹ ನಿಂತು ಹೋಗಿರುತ್ತದೆ. ಈಗ ಕೇವಲ ಡಿಬಿಓಟಿ ಇಂದ ಮಾತ್ರ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು. 2.85 ಲಕ್ಷ ಲೀಟರ್ ನೀರು ಪೂರೈಕೆ ಆದರೆ ಮಾತ್ರ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಜುಲೈ ಮೊದಲನೇ ವಾರದಲ್ಲಿ ಡಿಬಿಓಟಿ ನೀರು ಪೂರೈಸುವ ಕೇಂದ್ರ ಸ್ಥಳದಲ್ಲಿ ವಿಧ್ಯುತ್ ಪೂರೈಕೆಯ ಸಮಸ್ಯೆಯಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುವಲ್ಲಿ ಸಮಸ್ಯೆ ಆಗಿದೆ. ಕಾರಣ ಸದರಿ ಸಮಸ್ಯೆಯ ಕುರಿತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ್ಘ ನೈರ್ಮಲ್ಯ ಇಲಾಖೆ ಗದಗ ಇವರೊಂದಿಗೆ ಸಮಾಲೋಚಿಸಿ ದಿ.06-07-2025 ರಿಂದ ಸರಾಸರಿ 2.40 ಲಕ್ಷ ಲೀಟರ್ ನೀರು ಪೂರೈಕೆ ಆಗುವಂತೆ ಕ್ರಮಕೈಗೊಳ್ಳಲಾಗಿದೆ.
ತಿಮ್ಮಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ವಿತರಣೆ ಮಾಡುವಾಗ ಕೆಲವೊಂದು ಕುಟುಂಬದವರು ನಳಕ್ಕೆ ನೇರವಾಗಿ ಮೋಟರ್ ಮೂಲಕ ನೀರನ್ನು ಪಂಪ್ ಮಾಡುವುದರಿಂದ ಎತ್ತರದ ಭಾಗದ ಮನೆಗಳಿಗೆ ನೀರು ಪೂರೈಕೆಯಲ್ಲಿ ಸಮಸ್ಯೆ ಆಗುತ್ತಿದೆ. ಸದರಿ ಕುಟುಂಬಗಳಿಗೆ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮನೆ ಬೇಟಿ ಮಾಡಿ ಮನವೋಲಿಸಿ ಮೋಟಾರ ಹಚ್ಚದಂತೆ ಕ್ರಮಕೈಗೊಳ್ಳಲಾಗಿದೆ. ಹಾಗೂ ಮುಂದುವರೆಯಿಸಿದಲ್ಲಿ ಅಂತವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಸದರ ತಿಮ್ಮಾಪೂರ ಗ್ರಾಮವು ಕುಡಿಯುವ ನೀರಿಗಾಗಿ ಡಿಬಿಓಟಿ ನೀರನ್ನು ಮಾತ್ರ ಅವಲಂಬಿಸಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಬೇರೆ ನೀರಿನ ಮೂಲಗಳು ಇಲ್ಲದೇ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ. ಕಾರಣ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲಾ ಕುಡಿಯುವ ನೀರಿನ ಖಿಂಖಏ ಈಓಖಅಇ ಅನುದಾನದಲ್ಲಿ ಹರ್ಲಾಪೂರ ಗ್ರಾಮದ ಹತ್ತಿರ ಇರುವ ಮಹಡಿ ಗುಡ್ಡದ ಬೋರವೆಲ್‌ನ ಪೈಪಲೈನನ್ನು ದುರಸ್ಥಿಪಡಿಸಿ ಕುಡಿಯವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲಾಗುವುದೆಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾ0ುತ ಗದಗ ಇವರು ತಿಳಿಸಿರುತ್ತಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 