ದೇವಸ್ಥಾನಗಳು ಶಾಂತಿ, ಸೌಹಾರ್ದದ ಕೇಂದ್ರಗಳಾಗಲಿ

ದೇವಸ್ಥಾನಗಳು ಶಾಂತಿ, ಸೌಹಾರ್ದದ ಕೇಂದ್ರಗಳಾಗಲಿ May temples become centers of peace and harmony

 ಚಿಕ್ಕೋಡಿ   07: ಧಾರ್ಮಿಕ ಕಾರ್ಯಗಳು ಗ್ರಾಮದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತವೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.  

 ತಾಲೂಕಿನ ಹಿರೇಕೊಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಬರಗಾಲದ ಸಂದರ್ಭದಲ್ಲಿ ನೀರಿನ ಸಮಸ್ಯೆಯಿಂದ ರೈತರು ಹಾಗೂ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದೀಗ ಕಾಲುವೆ ಮೂಲಕ ನೀರು ಹರಿದು ಬಂದಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದ್ದು, ಬರದ ಆತಂಕ ದೂರವಾಗಿದೆ ಎಂದರು.  

 ದೇವಸ್ಥಾನ ನಿರ್ಮಾಣಕ್ಕೆ ?30 ಲಕ್ಷ ಅನುದಾನ ನೀಡಲಾಗಿದ್ದು, ಅದರ ನೆರವಿನಿಂದ ಸುಂದರ ಹಾಗೂ ಸುಸಜ್ಜಿತ ದೇವಸ್ಥಾನ ನಿರ್ಮಾಣವಾಗಿದೆ. ದೇವಸ್ಥಾನವನ್ನು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರವನ್ನಾಗಿ ಬಳಸಿಕೊಂಡು, ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.  

 ಚಿಕ್ಕೋಡಿ-ಸದಲಗಾ ಕ್ಷೇತ್ರದ ವಿವಿಧ ಗ್ರಾಮಗಳ ದೇವಸ್ಥಾನಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಲಾಗುತ್ತಿದೆ. 2025-26ನೇ ಸಾಲಿನಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ?6 ಕೋಟಿ ಅನುದಾನ ನೀಡಲಾಗಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯ ಜತೆಗೆ ಗ್ರಾಮಗಳ ಮೂಲಸೌಕರ್ಯ ಹಾಗೂ ನೀರಾವರಿ ಸಮಸ್ಯೆಗಳ ಪರಿಹಾರಕ್ಕೂ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.  

 ದೇವಸ್ಥಾನ ಉದ್ಘಾಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.  

 ಈ ಸಂದರ್ಭದಲ್ಲಿ ಸುರೇಶ ಚೌಗಲಾ, ಪ್ರಲ್ಹಾದ ಪಾಂಡವ, ಮಹದೇವ ಪವಾಡೆ, ಬಾಬಾಸಾಹೇಬ ಗುಡಿಮನಿ, ದಾದಾಪಟೇಲ, ನಿಜಾಮ ಪಟೇಲ್, ಬಾಬರ ಪಟೇಲ್, ಚಿದಾನಂದ ಕುಷ್ಣುಗೋಳ, ಮಾಜಿ ಟಿಪ್ಪಿ ಸುರೇಶ ಚೌಗಲಾ, ಸೂರ್ಯಕಾಂತ ಚೌಗಲಾ, ಶ್ರೀಶೈಲ್ ಕಮತೆ, ಚನ್ನಪ್ಪ ಮಿರಜೆ, ವಿನೋದ ಪಾಂಡವ, ಸಂಜು ಪಾಂಡವ, ಪ್ರಕಾಶ ಪಾಂಡವ, ರಾಮಾ ಪಾಂಡವ, ಮಲ್ಲಿಕಾರ್ಜುನ ಚೌಗಲಾ, ವಿಜಯ್ ಪಾಂಡವ, ಚಂದ್ರಕಾಂತ ಲೋಕರೆ, ಸಮರ್ಥ ಪಾಂಡವ, ಸತೀಶ್ ಪಾಂಡವ, ಪ್ರಭಾಕರ್ ಪಾಂಡವ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.