ಧರ್ಮದ ಮಾರ್ಗದಲ್ಲಿ ಬದುಕು ಸಾಗಲಿ: ಗುರುಪಾದ ಮಹಾಸ್ವಾಮಿಗಳು
May life be led on the path of righteousness: Gurupada Mahaswamiji
ಬೀಳಗಿ 10: ಜಾನಮಟ್ಟಿ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ನಡೆದ 31ನೇ ಶ್ರಾವಣ ಮಾಸದ ಪ್ರವಚನ ಮಂಗಲೋತ್ಸವದಲ್ಲಿ ಅಡವಿಸಿದ್ದೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಕತ್ತರಿ ಬೇರಿ್ಡಸುವ ಸಂಕೇತವಾದರೆ, ಸೂಜಿ ಜೋಡಿಸುವ ಸಂಕೇತವಾಗಿದೆ. ಸೂಜಿಯಂತೆ ಧರ್ಮವು ಸಮಾಜವನ್ನು ಒಗ್ಗೂಡಿಸುತ್ತದೆ. ಮನುಷ್ಯ ಸ್ವಾರ್ಥಕ್ಕಾಗಿ ಬದುಕದೆ ಧರ್ಮ ಹಾಗೂ ರಾಷ್ಟ್ರದ ಹಿತಕ್ಕಾಗಿ ಜೀವನ ನಡೆಸಬೇಕು. ಆತ್ಮಜಾಗೃತಿ ಮತ್ತು ವಾಸ್ತವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಅವರು ಹೇಳಿದರು. ಪ್ರವಚನಕಾರ ಹುಚ್ಚಯ್ಯ ಈರಯ್ಯ ಹಿರೇಮಠ ಮಾತನಾಡಿ, ಶರಣರು ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ಆದ್ಯತೆ ನೀಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು. ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಮಾತನಾಡಿ, ಸನ್ಮಾರ್ಗದ ಬದುಕಿಗೆ ಪುರಾಣ-ಪ್ರವಚನಗಳು ಅಗತ್ಯವಾಗಿವೆ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 