ಮಹಬೂಬೇ ಸುಬಾನಿ ಗ್ಯಾರವಿ ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ
Massive blood donation camp on the occasion of Mahbubey Subani Gyaravi festival
ಸರ್ದಾರ್ ಗಲ್ಲಿ ಮುಸ್ಲಿಂ ಪಿಂಜಾರ ಪಂಚ್ ಕಮಿಟಿ ಯಿಂದ ಬೃಹತ್ ರಕ್ತದಾನ ಶಿಬಿರ ಯಶಸ್ವಿ
ಕೊಪ್ಪಳ 24: ನಗರದ 15ನೇ ವಾರ್ಡ್ ಸರದಾರದಲ್ಲಿ ಹೈದರ್ ಅಲಿ ಸರ್ಕಲ್ ಹತ್ತಿರ ಮುಸ್ಲಿಂ ಪಿಂಜಾರ್ ಪಂಚ್ ಕಮಿಟಿ ವತಿಯಿಂದ ಪ್ರತಿ ವರ್ಷದಂತೆ ಹಜರತ್ ಮಹಬೂಬೇ ಸುಬಾನಿ ಗ್ಯಾರವಿ ಹಬ್ಬದ ಪ್ರಯುಕ್ತ ರವಿವಾರ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿತು.
ನಗರದ ಸರ್ದಾರ್ ಗಲ್ಲಿಯ ಮುಸ್ಲಿಂ ಪಿಂಜಾರ್ ಪಂಚ್ ಕಮಿಟಿ ಅಧ್ಯಕ್ಷರ ಮತ್ತು ಓಣಿಯ ಹಿರಿಯರ ನೇತೃತ್ವದಲ್ಲಿ ಹಜರತ್ ಮೈಬೋಬ್ ಸುಭಾನಿ ಪವಿತ್ರ ಗ್ಯಾರವಿ ಹಬ್ಬ ಹಾಗೂ ಸಾಮೂಹಿಕ ನಿಕಾ ಕಾರ್ಯಕ್ರಮ ಮುಂದಿನ ವಾರ ದಿ, 30 ರ ರವಿವಾರದಂದು ಜರುಗಲಿರುವ ಪ್ರಯುಕ್ತ ರವಿವಾರ ದಂದು ಜರುಗಿದ ಬೃಹತ್ ರಕ್ತದಾನ ಶಿಬಿರದಲ್ಲಿ ಯುವಕರು ಪಾಲ್ಗೊಂಡು ತಮ್ಮ ರಕ್ತ ದಾನ ಮಾಡುವುದರ ಮೂಲಕ ಒಂದು ಜೀವ ಉಳಿಸಿ ಪುಣ್ಯ ಗಳಿಸಿ ಕೊಳ್ಳುವಂತಹ ಪವಿತ್ರ ಮತ್ತು ಪುಣ್ಯದ ಕೆಲಸದಲ್ಲಿ ತೊಡಗಿಕೊಂಡು ಬೃಹತ್ ರಕ್ತದಾನ ಶಿಬಿರ ಯಶಸ್ವಿಗೊಳಿಸಿರುವುದಕ್ಕೆ ಸಮಾಜ ಮತ್ತು ಕಮಿಟಿಯ ಪರವಾಗಿ ಕೊಪ್ಪಳ ನಗರಸಭೆಯ ಮಾಜಿ ಸದಸ್ಯ ಹಾಗೂ ಸಮಾಜದ ಮುಖಂಡ ಎಂ ಮಾನ್ವಿ ಪಾಷಾ ರವರು ರಕ್ತದಾನ ಮಾಡಿದ ಯುವಕರಿಗೆ ಮತ್ತು ಶಿಬಿರಕ್ಕೆ ವ್ಯವಸ್ಥೆ ಮಾಡಿದ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಅಭಿನಂದಿಸಿದರು,
ಈ ಸಂದರ್ಭದಲ್ಲಿ ಪಂಚ್ ಕಮಿಟಿ ಅಧ್ಯಕ್ಷರಾದ ಖಾದರ್ ಸಾಬ್ ಕುದುರೆಮೋತಿ ,ಗೌರವ ಅಧ್ಯಕ್ಷ ಹಾಗೂ ಕಾನೂನು ಸಲಹೆಗಾರ ಶಾಬೂದ್ದೀನ್ ಸಾಬ್ ನೂರ್ ಬಾಷ, ಮುಸ್ತಫ ಕುದುರೆಮೋತಿ ,ಬಾಬು ಸಾಬ್ ,ನೂರು ಬಾಷಾ, ಸಲ್ಮಾ ಜಾನ್ ,ಇಬ್ರಾಹಿಂ ಕುದುರೆಮೋತಿ, ಖಾಜಾ ವಲಿ ಕುದುರೆಮೋತಿ, ಖಾಜಾಸಾಬ್ ಮಠಳಾಪುರ್, ನಬಿ ಸಾಬ್ ಸಂಕನೂರ್, ವಾಸಿಮ್ ಸಿದ್ನೆಕೊಪ್ಪ, ಮರ್ಧಾನ್ ಸಾಬ್ ಲುಂಗಿ ,ಮೀರಾಸಾಬ್ ಬನ್ನಿಗೊಳ, ಖಾಜಾ ಸಾಬ್ ಹನುಕುಂಟೆ, ರಿಯಾಜ್ ಕುದುರೆಮೋತಿ, ಕುತ್ಬುದ್ದೀನ್ ಸಾಬ್ ಬೆಟಗೇರಿ, ಲಾಲ್ ಸಾಬ್ ಕುದುರೆಮೋತಿ, ಕುತುಬುದ್ದೀನ್ ಸಾಬ್ ಚಳ್ಳ ಗಿಡದ, ಮರ್ದಾನ್ ಸಾಬ್ ಗರಸ್ಗಲ್, ಖಾಸಿಂಸಾಬ್ ಗರಸ್ಗಲ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ವೆಂಕಟೇಶ್ ನಾಯಕ್ ಸೇರಿದಂತೆ ಇತರ ಸಿಬ್ಬಂದಿ ವರ್ಗದವರು ಮತ್ತು ಯುವಕರು ಓಣಿಯ ಹಿರಿಯರು ಪಾಲ್ಗೊಂಡಿದ್ದರು, ರಕ್ತದಾನ ಮಾಡಿದ ಯುವಕರಿಗೆ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಪ್ರಮಾಣ ಪತ್ರ ನೀಡಿ ಅವರನ್ನು ಅಭಿನಂದಿಸಲಾಯಿತು,
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 