ಹೂವಿನ ಹಡಗಲಿ

ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ

ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ

ಹೂವಿನಹಡಗಲಿ 09:  ಸಾಮೂಹಿಕ ವಿವಾಹ ಕಾರ್ಯಕ್ರಮ ಗಳು ಬಡವರಿಗೆ ವರದಾನವಾಗಿವೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ ಹೇಳಿದರು.ಪಟ್ಟಣದ ಗವಿಮಠದಲ್ಲಿ 31ನೇ ಗವಿಸಿದ್ದೇಶ್ವರ ಜಾತ್ರಾ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ, ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಮಠದ ಸಮಾಜ ಮುಖಿ ಕಾರ್ಯಕ್ರಮ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಗೂರಿನ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.ಉತ್ತಂಗಿಯ ಸೋಮಶಂಕರ ಸ್ವಾಮೀಜಿ, ಹಾವನೂರಿನ ಶಿವಕುಮಾರ ಸ್ವಾಮೀಜಿ, ನಾಗತಿಬಸಾಪುರ ಗಿರಿರಾಜ ಹಾಲಸ್ವಾಮೀಜಿ, ಹಂಪಸಾಗರದ ಅಭಿನವ ಶಿವಲಿಂಗ ಸ್ವಾಮೀಜಿ, ಉಪನಾಯಕನಹಳ್ಳಿ ದೊಡ್ಡಬಸಯ್ಯ ಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು.ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಹಕ್ಕಂಡಿ ಶಿವನಾಗಪ್ಪ, ಭಾಗ್ಯ ವಿಜಯಕುಮಾರ್ ಇದ್ದರು. 9 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿತು. ಬೆಳಗ್ಗೆ ಜಂಗಮವಟುಗಳ ಶಿವದೀಕ್ಷೆ ಅಯ್ಯಾಚಾರ ಜರುಗಿತು. ಹಾಲಯ್ಯ ಶಾಸ್ತ್ರಿ ನೇತೃತ್ವದ ತಂಡ ಪೌರೋಹಿತ್ಯ ನೆರವೇರಿಸಿದರು. 


ಸುದ್ದಿ ಓದಿ