ಮುದ್ದೆಬಿಹಾಲ್

ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

          ಮುದ್ದೇಬಿಹಾಳ 17: ತಾಲೂಕಿನ ಕುಟೋಜಿ ಗ್ರಾಮದ ವ್ಯಾಪ್ತಿಯ ಹೊರವಲಯದಲ್ಲಿರುವ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ದೇಬಿಹಾಳ್ ತಾಲೂಕಿನ, ವಲಯದ ಸ್ವ ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ  ಶನಿವಾರ 151 ಜೋಡಿ ವೃತಾಧಾರಿಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು. 

           ಸಾನಿಧ್ಯ ವಹಿಸಿದ ಮಹಾದೇವಯ್ಯ ಶಾಸ್ತ್ರೀಗಳು ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ನಮ್ಮ ಭಾರತೀಯ, ಧರ್ಮ, ಸಂಸ್ಕೃತಿ ಸಂಸ್ಕಾರ ಉಳಿಯಬೇಕಾದರೆ ಅಲ್ಲಲ್ಲಿ ಇಂತಹ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುತ್ತಿರಲೇಬೇಕು, ಮಕ್ಕಳಿಗೆ ಸಂಸ್ಕಾರದ, ಪರಂಪರೆಯ ಕುರಿತು ಬೋಧನೆ ಮಾಡಬೇಕು ಅಂದಾಗ ಮಾತ್ರ ನಾವು ಧರ್ಮವಂತರಾಗಿ, ಸತ್ಯವಂತರಾಗಿ ಎಲ್ಲರೂ ಒಂದೇ ಎನ್ನುವ  ಮೂಲಕ ಸಹೋದರತೆಯಿಂದ ಬಾಳಲು ಸಾಧ್ಯ ಎಂದರು. 

            ನಿರ್ದೇಶಕ ಸಂತೋಷಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳೆಯರಲ್ಲಿ ಪೂಜಾ ಕಾರ್ಯಕ್ರಮಗಳಿಂದ ಉತ್ತಮ ಸಂಸ್ಕಾರ ಪಡೆಯಲು ಸಾಧ್ಯ. ಯೋಜನೆಯ ಮೂಲಕ ಕೆರೆ ಕಾರ್ಯಕ್ರಮ, ಶಿಷ್ಯವೇತನ, ಶಾಲಾ ಶಿಕ್ಷಕರ ಒದಗಣೆ, ದೇವಸ್ಥಾನ ಜೀರ್ಣೋದ್ಧಾರ, ವಿಮಾ ಸಹಾಯಧನ ಇತ್ಯಾದಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ 4 ವಿದ್ಯಾರ್ಥಿಗಳಿಗೆ ಸುದ್ನಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಿಸಿದರು. 

            ಮಂಜುಳಾ ಕೆಸರಟ್ಟಿ, ಡಾಕ್ಟರ್ ವಿರೇಶ್ ಪಾಟೀಲ್ ಅವರು ಯೋಜನೆಯ ಮೂಲಕ ಮಹಿಳೆಯರು ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ. ಸರಕಾರ ಮಾಡುವಂತ ಕೆಲಸವನ್ನು ಇವತ್ತು ಯೋಜನೆಯ ಮೂಲಕ್ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಅವರಿಗೆ ನಾವು ಕೃತಜ್ಞತೆ ಸಲ್ಲಿಸಬೇಕು ಎಂದರು. ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯ ಸಿ ಬಿ ಅಸ್ಕಿ ಹಾಗೂ ಶ್ರೀಶೈಲ್ ದೊಡ್ಡಮನಿ ಮಾತನಾಡಿ ಧರ್ಮಸ್ಥಳ ಯೋಜನೆ ಬಂದ್ಮೇಲೆ ಮಹಿಳೆಯರು ಸ್ವಾವಲಂಬನೆಯಾಗಿ ಜೀವನ ನಡೆಸುತ್ತಿದ್ದಾರೆ ಹಾಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ ಅವರಿಗೆ ನಾವು ಚಿರಋಣಿ ಎಂದು ಹೇಳಿದರು.  

             ನಾಗಲಿಂಗಯ್ಯಾ ಮಠ, ಪುರಸಭೆ ಅಧ್ಯಕ್ಷ ಮೈಬೂಬ ಗೋಳಸಂಗಿ, ಗಟ್ಟಿಪ್ರಸಾದ್ ಕರುಣಾಮಯಿ, ಧರ್ಮಸ್ಥಳ ಯೋಜನೆಯ ತಾಲೂಕು ಯೋಜನಾಧಿಕಾರಿ ಶಿವಾನಂದ ಪಿ, ಶಾಖಾಧಿಕಾರಿ ಮಲ್ಲಿಕಾರ್ಜುನ ಹುಳಬೇಂಚಿ, ನಾಗೇಶ್ ಎಸ್ ಕೆ ಸ್ವಾಗತಿಸಿದರು. ಜಗದೀಶ್ ನಿರೂಪಿಸಿದರು. ಕೃಷಿ ಮೇಲ್ವಿಚಾರಕರು ನಗದು ಮೇಲ್ವಿಚಾರಕರು ವಲಯದ ಹತ್ತು ಜನ ಸೇವಾಪ್ರತಿನಿಧಿಗಳು ವಿ ಎಲ್ ಈ ಗಳು ಹತ್ತು ಒಕ್ಕೂಟಗಳ ಅಧ್ಯಕ್ಷರು ಪದಾಧಿಕಾರಿಗಳು ಸ್ವ ಸಹಾಯ ಸಂಘದ ಸದಸ್ಯರುಗಳು ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ