ಮಾರಿಕಾಂಬಾ ದೇವಿ ಜಾತ್ರೆ: ಐದನೇ ಹೊರಬೀಡು ಕಾರ್ಯಕ್ರಮ
Marikamba Devi Fair: Fifth launch event
ಮುಂಡಗೋಡ 28: ಹಳೂರ ಓಣಿಯ ಮಾರಿಕಾಂಬಾ (ದ್ಯಾಮವ್ವ ದೇವಿ) ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಐದನೇ ಹಾಗೂ ಕೊನೆಯ ಹೊರಬೀಡು ಕಾರ್ಯಕ್ರಮ ಭಕ್ತಿಭಾವದೊಂದಿಗೆ ಆಚರಿಸಲಾಯಿತು. ದೇವಿಯ ಅಲಿಖಿತ ಆದೇಶದಂತೆ, ಊರಿನ ಜನರು ತಮ್ಮ ಮನೆ, ಮನಸ್ಸು ಮತ್ತು ಭಾವಗಳನ್ನು ದೇವಿಯ ಪಾದಗಳಿಗೆ ಅರ್ಿಸಿ ತಾತ್ಕಾಲಿಕವಾಗಿ ಊರನ್ನು ತೊರೆದ ದೃಶ್ಯವು ಮನಮುಟ್ಟುವಂತಿತ್ತು. ಭಕ್ತರು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂಬ ನಂಬಿಕೆಯೊಂದಿಗೆ ತಮ್ಮ ಹೊಲ, ಗದ್ದೆಗಳು, ಹಸಿರು ತೋಟಗಳು, ಟಿಬೆಟ್ ಕ್ಯಾಂಪ್ ಪ್ರದೇಶಗಳು, ಉದ್ಯಾನವನಗಳು ಮತ್ತು ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ ಹೊರಬೀಡು ಸಂಪ್ರದಾಯವನ್ನು ವಿಧಿವಿಧಾನಗಳೊಂದಿಗೆ ಪಾಲಿಸಿದರು. ಹೊರಬೀಡು ಆಚರಣೆ ನಡೆಯುವ ವೇಳೆ ಬೀದಿಗಳು ಸಂಪೂರ್ಣ ಖಾಲಿಯಾಗಿದ್ದು, ಊರಿನ ಓಣಿಗಳು ಮೌನಕ್ಕೆ ಶರಣಾಗಿ, ಮುಂಡಗೋಡ ಪಟ್ಟಣವು ದೇವಿಯ ಸ್ಮರಣೆಯಲ್ಲಿ ಲೀನವಾಗಿದೆ ಎಂಬ ಭಾವನೆ ಮೂಡಿತು. ಜನಜೀವನದ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡು, ಭಯಭಕ್ತಿ ಮತ್ತು ಶ್ರದ್ಧೆಯ ವಾತಾವರಣವು ಊರಿನಲ್ಲೆ ಎಲ್ಲೆಡೆ ಒತ್ತುಗೊಂಡಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 