ಕಾಗವಾಡ

ವರ್ತಮಾನದ ನಿರ್ವಹಣೆ ಮತ್ತು ಉತ್ತಮ ಭವಿಷ್ಯದ ನಿರ್ಮಾಣವೇ ನಿಜವಾದ ಶಿಕ್ಷಣ

ವರ್ತಮಾನದ ನಿರ್ವಹಣೆ ಮತ್ತು ಉತ್ತಮ ಭವಿಷ್ಯದ ನಿರ್ಮಾಣವೇ ನಿಜವಾದ ಶಿಕ್ಷಣ

ಲೋಕದರ್ಶನ ವರದಿ 

ಕಾಗವಾಡ  18 : ವಿದ್ಯಾರ್ಥಿ ಜೀವನವು ಭವಿಷ್ಯವನ್ನು ರೂಪಿಸುವ ಸುವರ್ಣ ಅವಕಾಶವಾಗಿದೆ. ಭವಿಷ್ಯವನ್ನು ಹೇಗೆ ನಿರ್ಮಾಣ ಮಾಡಬೇಕು ಮತ್ತು ವರ್ತಮಾನವನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಕಲಿಯುವುದೇ ನಿಜವಾದ ಶಿಕ್ಷಣವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಆಲೋಚನೆಗಳೊಂದಿಗೆ ಓದುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ನೇಜ್‌ನ ಖ್ಯಾತ ವಾಗ್ನಿ ವೀರೇಶ ಪಾಟೀಲ ತಿಳಿಸಿದ್ದಾರೆ. 

ಅವರು, ಶನಿವಾರ ದಿ. 18 ರಂದು ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಮಹಾವಿದ್ಯಾಲಯದ ಪ್ರಥಮ ಪಿಯುಸಿ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಪದವಿಪೂರ್ವ ಮತ್ತು ಪದವಿ ಓದುವ ಅವಧಿಯಲ್ಲಿ ತಾವು ತಗೆದುಕೊಳ್ಳುವ ತಿರ್ಮಾಣಗಳು, ವರ್ತನೆಗಳು ಮತ್ತು ಆಲೋಚನೆಗಳು ನಿಮ್ಮ ಭವಿಷ್ಯದ ಭದ್ರತೆಯ ಮೇಲೆ ತುಂಬಾ ಪರಿಣಾಮ ಬೀರುತ್ತವೆ. ನಾಳೆ ನಾವು ಏನು ಆಗಬೇಕೆಂಬುದು ಈಗ ನಾವು ಏನು ಮಾಡುತ್ತೇವೆ ಅನ್ನುವದರ ಮೇಲೆ ತಿರ್ಮಾನಗೊಳ್ಳುತ್ತದೆ. ಆದ್ದರಿಂದ ಚನ್ನಾಗಿ ಓದಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 


ಸುದ್ದಿ ಓದಿ