ಪ್ರವಚನ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಿ
Make good use of the discourse program
ತಾಳಿಕೋಟಿ: ತಾಲೂಕಿನ ಮಿಣಜಿ ಕ್ಷೇತ್ರದಲ್ಲಿ ಶ್ರೀ ಮಾಯಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ಶ್ರೀ ಅಕ್ಕಮಹಾದೇವಿಯ ಅಕ್ಕನ ಬಳಗದ ವತಿಯಿಂದ ಒಂದು ತಿಂಗಳ ಪರ್ಯಂತರ ಶ್ರಾವಣ ಮಾಸದ ನಿಮಿತ್ಯವಾಗಿ ಶ್ರೀ ಅಕ್ಕಮಹಾದೇವಿಯ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಗುರುವಾರ ಸಂಜೆ ಜರುಗಿತು. ಪ್ರವಚನಕಾರರಾದ ಶ್ರೀ ವೇದಮೂರ್ತಿ ಡಾ. ಸೋಮಶೇಖರಯ್ಯ ಹಿರೇಮಠ ಹಾಗೂ ಉದ್ಘಾಟಕರಾದ ಗುಳಬಾಳದ ಪರಮಪೂಜಾ ಹುಚ್ಚೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿ.
ಶ್ರಾವಣ ಮಾಸದಲ್ಲಿ ಅಕ್ಕಮಹಾದೇವಿ ಅಂತಹ ಜೀವನವನ್ನು ಅನುಸರಿಸುವುದು ಹಾಗೂ ಅವರ ವಚನಗಳನ್ನು ಆಲಿಸುವುದು ಪ್ರಮುಖವಾದ ವಿಷಯ ಎಂದು ಮಾತನಾಡಿದರು. ಗ್ರಾಮದ ಯುವ ಉದ್ಯಮಿ ವಿರೇಶಗೌಡ ಪಾಟೀಲ ಹಾಗೂ ತಾಳಿಕೋಟಿ ಅರ್ಬನ್ ಬ್ಯಾಂಕಿನ ನಿರ್ದೇಶಕರಾದ ಡಿ ಕೆ ಪಾಟೀಲ ಮಾತನಾಡಿ ನಮ್ಮೂರಿನ ಈ ಶ್ರಾವಣ ಮಾಸದ ಪ್ರವಚನ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಲಿ ಎಂದರು.
ಹಿರಿಯರಾದ ಜೆ ಡಿ ಪಾಟೀಲ, ಎಚ್ ಬಿ ಬಾಗೇವಾಡಿ,ಈರಯ್ಯ ಹಿರೇಮಠ, ಬಿ ಎಮ್ ಬಿರಾದಾರ, ಎಸ್ ಎಮ್ ಬಿರಾದಾರ, ನಾಗಪ್ಪ ಶರಣರು, ಎಂ ಎಸ್ ಮ್ಯಾಗೇರಿ, ವೀರೇಶಗೌಡ ಬಾಗೇವಾಡಿ, ಮಲ್ಲನಗೌಡ ಬಿರಾದಾರ, ಎಮ್ ಸಿ ಸಜ್ಜನ, ಬಿ.ಜಿ.ಯರನಾಳ, ರಮೇಶ ಜಂಬಗಿ, ಸಂಗನಗೌಡ ಪಾಟೀಲ, ಎ ಎಮ್ ಸರ್ಜಾಪುರ, ಎಮ್ ಜಿ ಯರನಾಳ, ಜಿ ಬಿ ಬಿರಾದಾರ, ಬೈರೊಡಗಿ ಆರ್ ಎಸ್ ಪೂಜಾರಿ, ಅಂಬ್ರ್ಪ ಶರಣರು ಬಾಗೇವಾಡಿ, ಸಾಬಣ್ಣ ಅಗ್ನಿ, ಮುತ್ತು ವಾಲಿ, ಜಗನಪ್ಪಗೌಡ ಪಾಟೀಲ, ಈರಣ್ಣ ನಾಯ್ಕೊಡಿ,ಎಮ್ ಸಿ ಅಕ್ಕಿ, ಉಪಸ್ಥಿತರಿದ್ದರು.
ಶರಣಗೌಡ ಬಿರಾದಾರ ನಿರೂಪಿಸಿ ವಂದಿಸಿದರು. ಮಹಾಂತೇಶ ಬಿರಾದಾರ, ತಬಲವಾದಕ ಆಕಾಶ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. ಪ್ರವಚನಕಾರರು ಮಹಾ ಸಾಧ್ವಿ ವೀರವಿರಾಗಿಣಿ ಅಕ್ಕಮಹಾದೇವಿ ಅವರ ಜೀವನ ಚರಿತ್ರೆ ಕೇಳಿದರೆ ಜೀವನ ಪಾವನವಾಗಿ ಬದುಕು ನಂದನವನವಾಗಿ ಇರುವುದು ಎಂದು ಅವರ ವಚನಗಳನ್ನು ಸಾರಿದರು. ಅಕ್ಕನ ಬಳಗದವರಾದ ಮಹಾದೇವಿ ಬಿರಾದಾರ, ಪದ್ಮಾವತಿ ಪಾಟೀಲ, ಚೆನ್ನಮ್ಮ ವಾಲಿ ಮಾತೆಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 