ಮಳೆ ಇಲ್ಲದೆ ಒಣಗುತ್ತಿರುವ ಮೆಕ್ಕೆಜೋಳ ಬೆಳೆ
Maize crop drying up without rain
ಲೋಕದರ್ಶನ ವರದಿ
ಹೂವಿನಹಡಗಲಿ 27: ಕಳೆದ 20 ದಿನಗಳಿಂದ ತಾಲ್ಲೂಕಿನ ಇಟ್ಟಿಗಿ, ಹಿರೇಹಡಗಲಿ,ಹೊಳಲು ಹೋಬಳಿ ಸೇರಿದಂತೆ ನಾನಾ ಕಡೆ ಮುಂಗಾರು ಮಳೆ ಬಾರದೆ ಇರುವುದರಿಂದ ಒಂದು ತಿಂಗಳಿಂದ ಬಿತ್ತನೆ ಮಾಡಿದ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, , ಹೆಸರು, ಸೂರ್ಯಕಾಂತಿ ಇತರೆ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ. ಸಕಾಲದಲ್ಲಿ ಮಳೆ ಬಾರದೇ ಕಾರಣ ಬಿತ್ತನೆಗೂ ಹಿನ್ನೆಡೆಯಾಗಿದೆ. ಮುಂಗಾರು ಆರಂಭದಲ್ಲಿ ಅಲ್ಪಸ್ವಲ್ಪ ಮಳೆಯಿಂದಾಗಿ ರೈತರು ಸಾಲ ಸೂಲಮಾಡಿ ಬಿತ್ತನೆ ಬೀಜ,ಗೊಬ್ಬರಕ್ಕೆ ಲಕ್ಷಾಂತರ ಹಣ ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ.
ಕೈಕೊಟ್ಟ ಮಳೆ : ಈಗಾಗಲೇ ಬಿತ್ತನೆ ಮಾಡಿದ ಒಂದು ತಿಂಗಳು ಮೆಕ್ಕೆಜೋಳ ಬೆಳೆಯನ್ನು ಎರಡು ಬಾರಿ ಎಡೆಗುಂಟೆ ಕೆಲಸಗಳು ಮುಗಿದಿವೆ. ತೇವಾಂಶ ಕೊರತೆ ಜತೆಗೆ ಬಿಸಿಲು ಹೆಚ್ಚಾಗಿ ಸಸಿಗಳು ಒಣುಗುತ್ತಿವೆ.ಇನ್ನೂ ಸೂರ್ಯಕಾಂತಿ, ಹೈಬ್ರಿಡ್ ಜೋಳಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಏಕದಳ ಮತ್ತು ದ್ವಿದಳ ಧಾನ್ಯಗಳು ಸೇರಿದಂತೆ ಎಣ್ಣೆ ಕಾಳು ಬೆಳೆಗಳು ಕೂಡ ಮಳೆ ಕೊರತೆಯನ್ನು ಎದುರಿಸುತ್ತಿವೆ.ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿ ಗ್ರಾಮದ ರೈತ ಮಳೆಯ ನೀರೀಕ್ಷೆಯಲ್ಲಿ ಮುದೇಗೌಡ್ರ ಪ್ರಕಾಶ್ ಒಣಗಿದ ಮೆಕ್ಕೆಜೋಳ ಬೆಳೆಯಲ್ಲಿ ಎಡಕುಂಟಿ ಹೊಡೆಯುತ್ತಿರುವದು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 