ಹೂವಿನ ಹಡಗಲಿ

ಮಳೆ ಇಲ್ಲದೆ ಒಣಗುತ್ತಿರುವ ಮೆಕ್ಕೆಜೋಳ ಬೆಳೆ

ಮಳೆ ಇಲ್ಲದೆ ಒಣಗುತ್ತಿರುವ ಮೆಕ್ಕೆಜೋಳ ಬೆಳೆ

ಲೋಕದರ್ಶನ ವರದಿ 

ಹೂವಿನಹಡಗಲಿ  27:  ಕಳೆದ 20 ದಿನಗಳಿಂದ  ತಾಲ್ಲೂಕಿನ ಇಟ್ಟಿಗಿ, ಹಿರೇಹಡಗಲಿ,ಹೊಳಲು  ಹೋಬಳಿ ಸೇರಿದಂತೆ ನಾನಾ ಕಡೆ ಮುಂಗಾರು ಮಳೆ ಬಾರದೆ ಇರುವುದರಿಂದ ಒಂದು ತಿಂಗಳಿಂದ ಬಿತ್ತನೆ ಮಾಡಿದ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, , ಹೆಸರು, ಸೂರ್ಯಕಾಂತಿ ಇತರೆ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ. ಸಕಾಲದಲ್ಲಿ ಮಳೆ ಬಾರದೇ ಕಾರಣ ಬಿತ್ತನೆಗೂ ಹಿನ್ನೆಡೆಯಾಗಿದೆ. ಮುಂಗಾರು  ಆರಂಭದಲ್ಲಿ ಅಲ್ಪಸ್ವಲ್ಪ ಮಳೆಯಿಂದಾಗಿ ರೈತರು ಸಾಲ ಸೂಲಮಾಡಿ ಬಿತ್ತನೆ ಬೀಜ,ಗೊಬ್ಬರಕ್ಕೆ  ಲಕ್ಷಾಂತರ ಹಣ ಖರ್ಚು ಮಾಡಿ  ಬಿತ್ತನೆ ಮಾಡಿದ್ದಾರೆ.

ಕೈಕೊಟ್ಟ ಮಳೆ :  ಈಗಾಗಲೇ ಬಿತ್ತನೆ ಮಾಡಿದ ಒಂದು ತಿಂಗಳು ಮೆಕ್ಕೆಜೋಳ ಬೆಳೆಯನ್ನು ಎರಡು ಬಾರಿ ಎಡೆಗುಂಟೆ ಕೆಲಸಗಳು ಮುಗಿದಿವೆ. ತೇವಾಂಶ ಕೊರತೆ ಜತೆಗೆ ಬಿಸಿಲು ಹೆಚ್ಚಾಗಿ ಸಸಿಗಳು ಒಣುಗುತ್ತಿವೆ.ಇನ್ನೂ  ಸೂರ್ಯಕಾಂತಿ, ಹೈಬ್ರಿಡ್ ಜೋಳಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಏಕದಳ ಮತ್ತು ದ್ವಿದಳ ಧಾನ್ಯಗಳು ಸೇರಿದಂತೆ ಎಣ್ಣೆ ಕಾಳು ಬೆಳೆಗಳು ಕೂಡ ಮಳೆ ಕೊರತೆಯನ್ನು ಎದುರಿಸುತ್ತಿವೆ.ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿ ಗ್ರಾಮದ ರೈತ ಮಳೆಯ ನೀರೀಕ್ಷೆಯಲ್ಲಿ  ಮುದೇಗೌಡ್ರ ಪ್ರಕಾಶ್ ಒಣಗಿದ ಮೆಕ್ಕೆಜೋಳ ಬೆಳೆಯಲ್ಲಿ ಎಡಕುಂಟಿ ಹೊಡೆಯುತ್ತಿರುವದು. 


ಸುದ್ದಿ ಓದಿ