ಮಹಾಲಿಂಗಪುರ ಅರ್ಬನ ಬ್ಯಾಂಕ ಚುನಾವಣೆ: ಶೇಖರ ಅಂಗಡಿ ಬಣಕ್ಕೆ ಭರ್ಜರಿ ಜಯ

ಮಹಾಲಿಂಗಪುರ 05: ಅತ್ಯಂತ ಕುತೂಹಲ ಕೆರಳಿಸಿದ ಸ್ಥಳೀಯ ಪ್ರತಿಷ್ಠಿತ ದಿ ಮಹಾಲಿಂಗಪುರ ಅರ್ಬನ ಬ್ಯಾಂಕಿನ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯ ಮತ ಎಣಿಕೆ ರವಿವಾರ ನಡೆದು ಶೇಖರ ಅಂಗಡಿ ಪೆನಲಗೆ 7 ಸ್ಥಾನ ಹಾಗೂ ಮಹಾಲಿಂಗಪ್ಪಾ ಕೋಳಿಗುಡ್ಡ ಪೆನಲಗೆ 5 ಸ್ಥಾನಗಳಲ್ಲಿ ಜಯ ಸಾಧಿಸಿದೆ. 

12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇಖರ ಅಂಗಡಿ ಬಣದ 1 ಸ್ಥಾನ ಅವಿರೋಧ ಆಯ್ಕೆಯಾಗಿತ್ತು. ಉಳಿದ 11 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 21 ಅಭ್ಯರ್ಥಿಗಳು ಸ್ಪರ್ದಿಸಿದರು.ಇದು ಎರಡು ಬಣಗಳಿಗೆ ಪ್ರತಿಷ್ಠೆಯಾಗಿ ಅತ್ಯಂತ ಕುತೂಹಲ ಕೆರಳಿಸಿತು.ಸಾಮಾನ್ಯ ಕ್ಷೇತ್ರದಿಂದ ಶೇಖರ ಅಂಗಡಿ,ಶ್ರೀಶೈಲ ಹಿಪ್ಪರಗಿ, ಅಶೋಕ ಅಂಗಡಿ,ಮಹಾಲಿಂಗಪ್ಪ ಕೋಳಿಗುಡ್ಡ, ಫಕೃದ್ದಿನ್ ಕುಂಟೋಜಿ, ವಿರೂಪಾಕ್ಷ ಪಂಚಕಟ್ಟಿಮಠ, ಗುರುಪಾದ ಅಂಬಿ ಆಯ್ಕೆಯಾದರೆ.ಹಿಂದುಳಿದ ಅ ವರ್ಗದ ಕ್ಷೇತ್ರದಿಂದ ಹೊಳೆಪ್ಪಾ ಬಾಡಗಿ. ಆಯ್ಕೆಯಾದರೆ ಮಹಿಳಾ ಕ್ಷೇತ್ರದಿಂದ ಅಕ್ಷತಾ ಹಲಗತ್ತಿ. ಲಷ್ಮಿ ದಿನ್ನಿಮನಿ. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಗಿರಮಲ್ಲಪ್ಪ ಕಬಾಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್ ಕೆ ಸಾರವಾಡ ಘೋಷಿಸಿದ್ದಾರೆ. 

ಅಂಗಡಿ ಬಣಕ್ಕೆ 7 ಸ್ಥಾನ : ಬ್ಯಾಂಕಿನ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಬ್ಯಾಂಕಿನ್ ಹಿಂದಿನ ಅಧ್ಯಕ್ಷರಾದ ಮಹಾಲಿಂಗಪ್ಪ ಕೋಳಿಗುಡ್ಡ ಮತ್ತು ಚುನಾವಣೆ ಚಾಣಕ್ಯ ಶೇಖರ ಅಂಗಡಿ ಬಣದ ನಡುವೆ ತೀವ್ರ ಹಣಾಹಣಿ ನಡೆದು ಒಂದು ಅವಿರೋಧ ಆಯ್ಕೆ ಹಾಗೂ 6 ಸ್ಥಾನ ಗೆಲುವಿನೊಂದಿಗೆ ಶೇಖರ ಅಂಗಡಿ ಬಣ ಒಟ್ಟು 7 ಸ್ಥಾನ ಗೆಲುವಿನೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 

ಕೋಳಿಗುಡ್ಡ ಬಣಕ್ಕೆ 5 ಸ್ಥಾನ : ಕಳೆದ ನಾಲ್ಕು ಅವಧಿಗೆ ಬ್ಯಾಂಕಿನ್ ಅಧ್ಯಕ್ಷರಾಗಿದ್ದ ಮಹಾಲಿಂಗಪ್ಪ ಕೋಳಿಗುಡ್ಡ ಬಣ 5 ಸ್ಥಾನ ಗೆಲ್ಲುವು ಮೂಲಕ ಪ್ರತಿಪಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. 

ಚುನಾವಣಾಧಿಕಾರಿಗಳಾದ ಸಿದಗಿರಿ ನೇಮಗೌಡ, ಪಿ ವಿ ಜಮಾದಾರ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಎಸ್ ಎಂ ಗುಣದಾಳ ಉಪಸ್ಥಿತರಿದ್ದರು. 

ವಿಜಯೋತ್ಸವ : ಹೆಚ್ಚು ಸ್ಥಾನಗಳಿಸುವ ಮೂಲಕ ಗೆಲುವು ಸಾಧಿಸಿದ ಶೇಖರ ಅಂಗಡಿ ಬನದ ಸದಸ್ಯರು ಮಹಾಲಿಂಗೇಶ್ವರರ ದರ್ಶನ ಪಡೆದು, ಪ್ರತಿಯೊಂದು ವೃತ್ತಗಳಲ್ಲಿಯೂ ಪಠಾಕಿ ಸಿಡಿಸಿ ಗುಲಾಲ ಎರಚಿ, ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.  

ಈ ವಿಜಯೋತ್ಸವ ನನ್ನ ಮತದಾರರಿಗೆ ಸೇರಬೇಕು, ಇದರಲ್ಲಿ ನನ್ನದೇನು ಇಲ್ಲ ನನ್ನ ಮೇಲೆ ಹೆಚ್ಚಿನ ನಂಬಿಕೆ ಇಟ್ಟು,ನನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿ ಈ ಸಂಸ್ಥೆಯ ಆಡಳಿತ ಜವಾಬ್ದಾರಿಯನ್ನು ನೀಡಿದ ಮತದಾರರಿಗೆ ನಾನು ಮತ್ತು ನನ್ನ ಪೇನಲ್‌ನ ಪ್ರತಿಯೊಬ್ಬ ಸದಸ್ಯರು ಋಣಿಯಾಗಿದ್ದೇವೆ, ಒಟ್ಟಿನಲ್ಲಿ ನನ್ನ ಕೈಲಾದ ಮಟ್ಟಿಗೆ ಇನ್ನೂ ಹೆಚ್ಚಿನ ಸೇವೆ ಮಾಡಿ ಸೈ ಎನಿಸಿಕೊಳ್ಳುತ್ತೇನೆ.           

ಶೇಖರ ಬಿ. ಅಂಗಡಿ. ಅರ್ಬನ ಬ್ಯಾಂಕ ನೂತನ ಸದಸ್ಯ