ಬೈಲಹೊಂಗಲ 03: ಮಹಾದಾಯಿ ಟ್ರೀಬುನಲ್ದಲ್ಲಿ ರಾಜ್ಯದ ಪರವಾಗಿ 13.5 ಟಿಎಂಸಿ ನೀರು ಬಳಕೆಗೆ ಬಂದಿರುವ ಆದೇಶವನ್ನು ತಕ್ಷಣ ಜಾರಿಗೊಳಿಸಲು, ಕೇಂದ್ರ ಸಕರ್ಾರ ಅಧಿಸೂಚನೆ ಹೊರಡಿಸಿ ಯೋಜನೆ ಅನುಷ್ಟಾನಗೊಳಿಸಲು ರಾಜ್ಯ ಸಕರ್ಾರ, ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಬೇಕೆಂದು ಕಳಸಾ ಬಂಡೂರಿ ಹೋರಾಟ ಸಮಿತಿ ಮುಖಂಡ ಶಿವರಂಜನ ಬೋಳಣ್ಣವರ ಹೇಳಿದರು.
ಅವರು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅ.14ರಂದು ಟ್ರೀಬನಲ್ದಿಂದ ರಾಜ್ಯದ ಪರವಾಗಿ ಬಂದ ಆದೇಶವನ್ನು ತಕ್ಷಣ ಎಚ್ಚೆತ್ತುಕೊಂಡು ಅನುಷ್ಟಾನಗೊಳಿಸಲು ಮುಂದಾಗಬೇಕು ವಿನಾಕಾರಣ ಒಬ್ಬರ ಮೇಲೆ ಒಬ್ಬರು ಹಾಕುವದನ್ನು ಬಿಟ್ಟು ಈ ಭಾಗದ ರೈತರ, ಜನತೆಯ ಹಿತ ದೃಷ್ಟಿಯಿಂದ ಯೋಜನೆ ಅನುಷ್ಠಾನ ಅತಿ ಅವಶ್ಯವಾಗಿದೆ ಎಂದರು.
ಹೋರಾಟ ಸಮಿತಿ ಮುಖಂಡ, ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಶಾಸಕರು, ಸಂಸದರು ಪಕ್ಷ ಬೇದ ಮರೆತು ರಾಜ್ಯ ಮತ್ತು ಕೇಂದ್ರ ಸಕರ್ಾರದಿಂದ ಅಧಿಸೂಚನೆ ಹೊರಡಿಸುವಂತೆ ಪ್ರಾಮಾಣಿಕ ಪ್ರಯತ್ನಮಾಡುವಂತೆ ಆಗ್ರಹಿಸಿದರು.
ಇನ್ನು ಮುಂದೆ ಯಾವುದೆ ಕಾರಣಕ್ಕೂ ಟ್ರಿಬುನಲ್ದಲ್ಲಿ ಮರುಪ್ರಶ್ನಿಸಿ ಅಜರ್ಿಹಾಕಿದರೆ ಯಾವುದೆ ಪ್ರಯೋಜನೆ ಇಲ್ಲಾ. ಕಾಲಹರಣಮಾಡದೆ ಯೋಜನೆಯ ಜಾರಿಗೆ ಕ್ರಮ ಕೈಗೊಂಡು ಹೆಚ್ಚಿನ ನೀರಿಗಾಗಿ ಸುಪ್ರೀಂಕೊಟರ್ಿನಲ್ಲಿ ಮೇಲ್ಮನವಿ ಸಲ್ಲಿಸುವ ಪ್ರಕ್ರೀಯೆಗೆ ಚಾಲನೆ ನೀಡುವದಾಗಬೇಕು. ಕಾವೇರಿ ಮತ್ತು ಕೃಷ್ಣಾ ನದಿಯ ಪಾತ್ರದಲ್ಲಿ ಬಂದಿರುವ ತಿಪರ್ು ಮುಂಬರುವ ದಿನಗಳಲ್ಲಿ ಕಳಸಾ ಬಂಡೂರಿ ಮತ್ತು ಮಹಾದಾಯಿ ಯೋಜನೆಗೆ ತಿಪರ್ು ಬರುವದು ನಿಶ್ಚಿತ. ಇದರಲ್ಲಿ ಯಾವುದೆ ಸಂದೇಹವಿಲ್ಲ. ರಾಜಕೀಯ ನಾಯಕರು ತಮ್ಮ ಕುಚರ್ಿ ಅಸ್ಥಿತ್ವಕ್ಕಾಗಿ ರಾತ್ರಿ ಹೊತ್ತು ಸುಪ್ರೀಂ ಕೊರ್ಟ ನ್ಯಾಯಾಲಯದ ಕದ ತಟ್ಟುವ ಜನನಾಯಕರಿಗೆ ತಿಪರ್ೂಬಂದು ಸುಮಾರು 75ದಿನಗಳು ಗತಿಸಿದರು ಈ ಕುರಿತು ಚಕಾರ ಶಬ್ದ ಎತ್ತದೆ ಕಾಟಾಚಾರಕ್ಕೆ ಎಂಬಂತೆ ನಾಲೆಗೆ ಬೇಟ್ಟಿನಿಡಿದ್ದು ಯಾವ ಪುರಷಾರ್ತಕ್ಕಾಗಿ ಎಂದು ಕಿಡಿಕಾರಿದರು. ತಕ್ಷಣ ರಾಜ್ಯ ಸಕರ್ಾರ, ಕೇಂದ್ರ ಸಕರ್ಾರಕ್ಕೆ ಪತ್ರ ಬರೆದು ಯೋಜನೆಯ ಅನುಷ್ಟಾನಕ್ಕೆ ಅಧಿಸೂಚನೆ ಹೋರಡಿಸಲು ಮುಂದಾಗಬೇಕೆಂದರು.
ನ.5ರಂದು ಪಟ್ಟಣದ ಎಸ್.ಆರ್.ಸರ್ಕಲ್ದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿಗಳ ಕಾಯರ್ಾಲಯಕ್ಕೆ ತೆರಳಿ ರಾಜ್ಯ ಸಕರ್ಾರಕ್ಕೆ ಮನವಿ ಅಪರ್ಿಸಲಾಗುವದು. ಕಾರಣ ರೈತರು ಮತ್ತು ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕೆಂದು ಮನವಿಮಾಡಿದರು.
ಜಿಪಂ ಸದಸ್ಯ ಶಂಕರ ಮಾಡಲಗಿ, ಸಿ.ಕೆ.ಮೇಕ್ಕೆದ, ಮಹಾಂತೇಶ ಕಮತ, ಮಡಿವಾಳಪ್ಪ ಹೋಟಿ, ಮಹೇಶ ಹರಕುಣಿ. ಮಹಾಂತೇಶ ಮತ್ತಿಕೊಪ್ಪ, ಮಲ್ಲಿಕಾಜರ್ುನ ಹುಂಬಿ, ಸೋಮನಾಥ ಸೊಪ್ಪಮಠ, ಮುರಗೇಶ ಗುಂಡ್ಲೂರ, ರುದ್ರಪ್ಪ ಹೊಸಮನಿ, ಕುಮಾರ ದೇಶನೂರ, ಈರಣ್ಣ ಬೆಟಗೇರಿ, ಸುರೇಶ ವಾಲಿ, ಎಸ್.ಜಿ.ಕುಲಕಣರ್ಿ, ಮಾರುತಿ ತಿಗಡಿ ಇದ್ದರು.