ಎಸ್.ಪಿ.ಎಚ್.ಭರತೇಶ ಕನ್ನಡ ಮಾಧ್ಯಮ ಶಾಲೆ ಉತ್ತಮ ಸಾಧನೆ
ಬೆಳಗಾವಿ 03: ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯ, ಎಸ್.ಪಿ.ಎಚ್. ಭರತೇಶ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2024-25 ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆದಿತ್ಯ ರಾಜು ಪಾಟೀಲ 94.4ಅ ಪ್ರಥಮ ಸ್ಥಾನ, ಫಲಕ ಮೋಮಿನ 88.16ಅ ದ್ವಿತೀಯ ಸ್ಥಾನ, ರಮ್ಯಾ ಅರಳಪ್ಪನವರ 88ಅ ಅಂಕ ಪಡೆದು ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.