ಎಸ್ಸೆಸ್ಸೆಲ್ಸಿ ಪರೀಕ್ಷೆ: ಆಲಮಟ್ಟಿ ಹಳಕಟ್ಟಿ ಪ್ರೌಢಶಾಲೆ ಬಾಲೆಯರೇ ಟಾಪರ್ಸ್
ಆಲಮಟ್ಟಿ 03: ಪ್ರಸಕ್ತ 2024-25 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆ-1 ರ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಇಲ್ಲಿನ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ರಾವಬಹದ್ದೂರ ಡಾ,ಫ.ಗು.ಹಳಕಟ್ಟಿ (ಆರ್. ಬಿ.ಪಿ.ಜಿ) ಪ್ರೌಢಶಾಲೆಗೆ ಅತ್ಯುತ್ತಮ ಫಲಿತಾಂಶ ಲಭಿಸಿದ್ದು ಬಾಲಕಿಯರೇ ಟಾಪರ್ ಅಗಿ ಮಿಂಚಿದ್ದಾರೆ.
ಪರೀಕ್ಷೆಯಲ್ಲಿ ಗಮನಾರ್ಹ ಫಲಿತಾಂಶ ಪಡೆಯುವದರೊಂದಿಗೆ ಬಾಲಕಿಯರು ಅಮೋಘ ಮೇಲುಗೈ ಸಾಧಿಸಿ ಮಿನುಗಿದ್ದು ಇಲ್ಲಿ ವಿಶೇಷ. ಸುಷ್ಮಿತಾ ವಸಂತ ರಾಠೋಡ 571 (ಶೇ,91.36) ಅಂಕ ಪಡೆಯುವ ಮೂಲಕ ಶಾಲೆಗೆ ಟಾಪರ್ ಅಗಿ ಮೊದಲ ಸ್ಥಾನ ಪಡೆದರೆ ಸೌಮ್ಯಾ ಕೆ.ನಲವಡೆ 566 (ಶೇ,90.56) ಅಂಕದೊಂದಿಗೆ ದ್ವೀತಿಯ, ಸಂಗೀತಾ ಸಾರವಾಡ 544 (ಶೇ,87.04 ) ಅಂಕಗಳಿಸುವ ಮೂಲಕ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾಳೆ.
ಸಿಂಚನಾ ಆಲಮಟ್ಟಿ 521(ಶೇ, 83.36) 4ನೇ ಸ್ಥಾನ, ಹರೀಷ ಕೆ.ವಡ್ಡರ. 503 (ಶೇ,80.48 ) 5ನೇ ಸ್ಥಾನ, ಚೈತ್ರಾ ಎಸ್.ಚಲವಾದಿ 502 (ಶೇ, 80.32) 6ನೇ ಸ್ಥಾನ, ಪ್ರಜ್ವಲ್ ಲಮಾಣಿ 475 (ಶೇ,76.00) 7ನೇ ಸ್ಥಾನ, ಭಾಗ್ಯಶ್ರೀ ಆರ್.ಕೋಲಕಾರ 474 (ಶೇ, 75.84) 8 ನೇ ಸ್ಥಾನ, ಪಲ್ಲವಿ ಆರ್.ಬೊಂಬಲೇಕರ 471(ಶೇ,75.36) 9 ನೇ ಸ್ಥಾನ, ಕೀರ್ತಿ ಟಿ.ಲಮಾಣಿ 458(ಶೇ,73.28) 10ನೇ ಸ್ಥಾನ, ಸಾಗರ ಎಸ್.ಪವಾರ 447(ಶೇ, 71.52)11ನೇ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.
ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ತೇರ್ಗಡೆಯಾಗಿ ಶಾಲೆಗೆ, ಸಂಸ್ಥೆಗೆ ಕೀರ್ತಿ ತಂದಿರುವ ಸಾಧಕ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷ ಗದುಗಿನ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿ ಶಿಕ್ಷಣ ತಜ್ಞ ಪ್ರೊ, ಶಿವಾನಂದ ಪಟ್ಟಣಶೆಟ್ಟರ, ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.