ಮಬನೂರ ಗ್ರಾಪಂ ಉಪಚುನಾವಣೆ : ಮಹಾದೇವಪ್ಪ ಮೇಟಿ ಅವಿರೋಧ ಆಯ್ಕೆ

Mabanura Grama by-election: Mahadevappa Meti elected unopposed

ಮಬನೂರ ಗ್ರಾಪಂ ಉಪಚುನಾವಣೆ : ಮಹಾದೇವಪ್ಪ ಮೇಟಿ ಅವಿರೋಧ ಆಯ್ಕೆ 

ಯರಗಟ್ಟಿ 18: ತಾಲೂಕಿನ ಮಬನೂರ ಗ್ರಾಮದ ಗ್ರಾಮ ಪಂಚಾಯತ ಉಪಚುನಾವಣೆಯಲ್ಲಿ ಕಾಂಗ್ರೇಸ್ ಅರ್ಭ್ಯಥಿ ಮಹಾದೇವಪ್ಪ ಮೇಟಿ  ಅವಿರೋಧವಾಗಿ ಆಯ್ಕೆ ಆಗಿದ್ದಾರೆ.  ಸವದತ್ತಿ ಶಾಸಕ ವಿಶ್ವಾಸ ವೈದ್ಯ ನೇತೃತ್ವವದಲ್ಲಿ ಮತ್ತು ಮಬನೂರ ಗ್ರಾಮದ ಮುಖಂಡರ ಸಹಮತದೊಂದಿಗೆ ಉಪಚುನಾವಣೆಯಲ್ಲಿ ಮಹಾದೇವಪ್ಪ ಮೇಟಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಚುನಾವಣಾಧಿಕಾರಿ ಬಸವರಾಜ ಅಯ್ಯನಗೌಡರವರು ಆಯ್ಕೆಯಾದ ಅರ್ಭ್ಯಥಿಗೆ ಚುನಾವಣಾ ಪ್ರಮಾಣ ಪತ್ರವನ್ನು ವಿತರಿಸಿದರು. ಪಿಡಿಓ ರಾಜಿಸಾಬ ಚಿಪ್ಪಲಕಟ್ಟಿ, ಆರ್‌. ಕೆ. ಪಟಾತ, ಗ್ರಾ. ಪ. ಸದಸ್ಯ ಯಲ್ಲಪ್ಪ ನರಿ, ಗೋಪಾಲ ಮೇಟಿ ಉಪಸ್ಥಿತರಿದ್ದರು.