ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ - ಡಾ ಚಂದ್ರು ಲಮಾಣಿ
MLA performs Bhoomi Puja for Anganwadi building - Dr Chandru Lamani
ಲಕ್ಷ್ಮೇಶ್ವರ 02 : ಪಟ್ಟಣದ ವಾರ್ಡ್ ನಂಬರ್ 15ರ ವ್ಯಾಪ್ತಿಯಲ್ಲಿ ಬರುವ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದ ಹತ್ತಿರ ನೂತನವಾಗಿ ಹೊಸ ಅಂಗನವಾಡಿ ಕಟ್ಟಡಕ್ಕೆ ಶಾಸಕ ಡಾ ಚಂದ್ರು ಲಮಾಣಿ ಅವರು ಗುರುವಾರ ಭೂಮಿ ಪೂಜೆ ನೆರವೇರಿಸಿದರು ಈ ಸಮಯದಲ್ಲಿ ಮಾತನಾಡಿದ ಅವರು ಪಟ್ಟಣದಲ್ಲಿ ಇರುವ ಕೆಲ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳು ಇಲ್ಲದೆ ಬಾಡಿಗೆ ಕಟ್ಟಡದಲ್ಲಿವೆ ಇದರಿಂದ ಅಂಗನವಾಡಿ ಶಿಕ್ಷಕಿಯರು ಮತ್ತು ಆಯಾ ಸಿಬ್ಬಂದಿಗಳು ಅಂಗನವಾಡಿ ಮಕ್ಕಳು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಅದಕ್ಕಾಗಿ ಸಂತ ಕಟ್ಟಡಗಳಿಲ್ಲದ ಅಂಗನವಾಡಿಗಳಿಗೆ ಹೊಸ ಕಟ್ಟಡಗಳನ್ನು ಕಟ್ಟಲು ನಿವೇಶನದ ಕೊರತೆಯ ಸಹ ಕಂಡು ಬರುತ್ತಿದ್ದು ಅಂತದರಲ್ಲಿ ಕೆಲವೊಂದು ಕಡೆ ನಿವೇಶನಗಳನ್ನು ಪುರಸಭೆಯಿಂದ ಗುರುತಿಸಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು ಕಟ್ಟಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರವು ಅಗತ್ಯವಾಗಿದೆ ಎಂದು ತಿಳಿಸಿದ ಅವರು ಅಂಗನವಾಡಿ ಕಟ್ಟಡ ಕಟ್ಟುವ ಗುತ್ತಿಗೆದಾರರು ಆದಷ್ಟು ಬೇಗನೆ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮುಗಿಸಬೇಕು ಎಂದರು ಈ ಸಮಯದಲ್ಲಿ ಶಿಶು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮೃತ್ಯುಂಜಯ ಗುಡದಾನ್ವೇರಿ ಪುರಸಭೆಯ ಮಾಜಿ ಸದಸ್ಯ ರಾಜಣ್ಣ ಕುಂಬಿ ಬಸವರಾಜ ಚಕ್ರಸಾಲಿ ಗಂಗಾಧರ ಮೆಣಸಿನಕಾಯಿ ಭೀಮಣ್ಣ ಯಂಗಾಡಿ ಗೀರೀಶ ಚೌರೆಡ್ಡಿ ಪ್ರವೀಣ ಬೊಮಲೆ ಬಸಣ್ಣ ಗುರಿಕಾರ ನಂದಾ ನವಲೆ ಮಂಜುಳಾ ಛತ್ರದ ನಾಗಲಕ್ಷ್ಮಿ ಕುಲಕರ್ಣಿ ರೂಪ ಕಟ್ಟಿಮನಿ ರಜಿಯಾ ಚಂಗಾಪುರಿ ಡಿವಿ ಕೊಟ್ಟೂರ ನೀಲವ್ವ ಪೂಜಾರ ಸಂಗೀತಾ ಸಾವ್ರದ ಸೇರಿದಂತೆ ಇನ್ನೂ ಅನೇಕರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 