ಬ್ಯಾರೇಜ ಕಂ ಬ್ರಿಡ್ಜ ಕಾಮಗಾರಿಗೆ ಶಾಸಕ ವೈದ್ಯ ಭೂಮಿ ಪೂಜೆ
MLA Vaidya performs Bhoomi Puja for Barrage and Bridge work
ಯರಗಟ್ಟಿ, 18 ; ಈ ಭಾಗದ ರೈತರು ತಮ್ಮ ಹೊಲಗಳಿಗೆ ಸಂಚರಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಈ ಬ್ಯಾರೇಜನಿಂದ ಅನುಕೂಲವಾಗಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಜಾಲಿಕಟ್ಟಿ ಜೀವಾಪೂರ ಸಂಪರ್ಕಿಸುವ ರಸ್ತೆಗೆ ಮಂಗಳವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಸುಮಾರು 1.50 ಕೋಟಿ ರೂ. ಮೊತ್ತದ ಬ್ಯಾರೇಜ ಕಂ ಬ್ರಿಡ್ಜ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಯರಗಟ್ಟಿ ಭಾಗದ ಜನರಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕೆಎಂಎಫ ನಿರ್ದೇಶಕ ಶಂಕರ ಇಟ್ನಾಳ ಮಾತನಾಡಿ, ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದ್ದು ಗುಣಮಟ್ಟದ ಜತೆಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣ ಗೊಳಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಶಾಸಕ ವಿಶ್ವಾಸ ವೈದ್ಯ ಅವರನ್ನು ಗ್ರಾಮಸ್ಥರು, ಕಾರ್ಯಕರ್ತರು ಸನ್ಮಾನಿಸಿದರು.
ಮುಖಂಡ ವೆಂಕಣ್ಣ ಯರಡ್ಡಿ, ಕಲ್ಮೇಶ ಬಾಲರಡ್ಡಿ, ಮುತ್ತನಗೌಡ ನಾಯ್ಕರ, ಪುಟ್ಟು ಅರಳಿಕಟ್ಟಿ, ಬಸವರಾಜ ಗಿರೆಡ್ಡಿ, ರಮೇಶ ಅರಳಿಕಟ್ಟಿ, ಶಾಶಪ್ಪ ಗೋಪಾಳಿ, ಪ್ರವೀಣ ಯರಡ್ಡಿ, ಬಸು ತಳವಾರ, ಹನಮಂತ ಅರೇಬೆಂಚಿ, ಪ್ರಕಾಶ ಚೌರೆಡ್ಡಿ, ಶಿವನಗೌಡ ನಾಯ್ಕರ, ಶಂಕರ ಹುಬ್ಬಳ್ಳಿ, ತಿಪ್ಪಣ್ಣ ಕಡಬಿ, ಮಲನಾಯ್ಕ ನಾಯ್ಕರ, ಬಸವರಾಜ ಬನಪ್ಪನವರ, ಬಸಯ್ಯ ಅಟಿಗಲ್ಲ, ಸದಾ ಕುರಿ, ಮಹಾದೇವಯ್ಯ ಪೂಜೇರ, ಶಶಿಧರ ತಳವಾರ ಸುಭಾನಿ ಕುದರಿ, ಮಹಾಂತೇಶ ಉಪ್ಪಿನ, ಬಸನಾಯ್ಕ ಚಿಕಾಕಿ, ಪಡೆಪ್ಪ ನರಿ, ಆರ್.ಕೆ.ಪಟಾತ, ಪ್ರಕಾಶ ಮುರಗೋಡ ಸೇರಿದಂತೆ ಕಾರ್ಯಕರ್ತರು ಇದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 