ಮುಂದಗೋಡ

14ನೇ ದಲೈ ಲಾಮಾರ ಆಶೀರ್ವಾದ ಪಡೆದ ಶಾಸಕ ಶಿವರಾಮ ಹೆಬ್ಬಾರ್

14ನೇ ದಲೈ ಲಾಮಾರ ಆಶೀರ್ವಾದ ಪಡೆದ ಶಾಸಕ ಶಿವರಾಮ ಹೆಬ್ಬಾರ್

ಮುಂಡಗೋಡ 29: ಮುಂಡಗೋಡದ ಟಿಬೇಟಿಯನ್ ಕಾಲೋನಿಗೆ ಭಾನುವಾರ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಅವರು ಟಿಬೆಟಿಯನ್ನರ ಪರಮೋಚ್ಚ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪುರಸ್ಕೃತ ಪೂಜ್ಯ ದಲೈ ಲಾಮ ಅವರ ದರ್ಶನ ಪಡೆದು ಆಶೀರ್ವಾದ ಪಡೆದರು. ಶಾಸಕರು ದಲೈ ಲಾಮ ಅವರ ದರ್ಶನ ಪಡೆದು ಶಾಂತಿ, ಕರುಣೆ ಮತ್ತು ವಿಶ್ವ ಸಹೋದರತ್ವದ ಸಂದೇಶವನ್ನು ಸ್ಮರಿಸಿದರು. ಅವರು ಪರಮಪೂಜ್ಯರ ಆಧ್ಯಾತ್ಮಿಕ ಚಿಂತನೆಗಳು ಸಮಾಜದಲ್ಲಿ ಸೌಹಾರ್ದತೆ, ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ಕಮಲಾಕರ ನಾಯ್ಕ್‌, ನಾಗರಾಜ್ ನಾಯ್ಕ್‌ ಹಾಗೂ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ