ಓತಿಹಾಳ ಸರ್ಕಾರಿ ಪ್ರೌಢ ಶಾಲೆಗೆ ಭೂಮಿ ಮಂಜೂರು ಆದೇಶ ಪ್ರತಿ ಹಸ್ತಾಂತರಿಸಿದ ಶಾಸಕ ಮನಗೂಳಿ

ಓತಿಹಾಳ ಸರ್ಕಾರಿ ಪ್ರೌಢ ಶಾಲೆಗೆ ಭೂಮಿ ಮಂಜೂರು ಆದೇಶ ಪ್ರತಿ ಹಸ್ತಾಂತರಿಸಿದ ಶಾಸಕ ಮನಗೂಳಿ  MLA Managuli hands over the copy of the land allotment order to Otihala Government High School

ಲೋಕದರ್ಶನ ವರದಿ 

ಸಿಂದಗಿ 19: ತಾಲ್ಲೂಕಿನ ಓತಿಹಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಶಾಲಾ ಮೈದಾನ ಹಾಗೂ ಕಟ್ಟಡಕ್ಕಾಗಿ ಸುಮಾರು 3 ಎಕರೆ 30 ಗುಂಟೆ ಭೂಮಿಯನ್ನು ಮಂಜೂರು ಮಾಡಲಾಗಿದ್ದು ಸಂಬಂಧಿಸಿದ ಸರ್ಕಾರಿ ಆದೇಶದ ಪ್ರತಿಯನ್ನು ಸರ್ಕಾರಿ ಪ್ರೌಢ ಶಾಲೆಯ ಅವರಿಗೆ ಭೂಮಿ ಮಂಜೂರ ಮಾಡಿರುವ ಆದೇಶ ಪ್ರತಿ ಶಾಸಕ ಅಶೋಕ ಎಂ ಮನಗೂಳಿಯವರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಡಿ ಬಿ ದೊಡಮನಿಯವರಿಗೆ ಆದೇಶ ಪ್ರತಿ ಹಸ್ತಾಂತರಿಸಿ ಅವರು ಮಾತನಾಡಿ ಓತಿಹಾಳ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಶಾಲೆಗಳಿಗೆ ಭೂಮಿ ಮಂಜೂರ ಮಾಡಲು ಮನವಿ ನೀಡಿರುವದರಿಂದ ಮನವಿಗೆ ನಾನು ಸ್ವಂದನ ಮಾಡಿ ಸರಕಾರ ಭೂಮಿ ಮಂಜೂರ ಮಾಡಿ ಕೊಟ್ಟಿರುವೆ ತಕ್ಷಣ ಒಂದು ಶಾಲಾ ಕೋಣೆ ಮಂಜೂರು ಮಾಡುತ್ತೇನೆ ಎಂದು ಭರವಸೆ ನೀಡಿದರು. ಬಂದಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ರೂಗಿಯವರಿಗೆ ದೂರವಾಣಿ ಮೂಲಕ ಸೂಚನೆ ನೀಡಿದ ಶಾಸಕರು. 

ಗ್ರಾಮದ ಪ್ರಗತಿ ಸಂಘದ ಸದಸ್ಯ ಹಾಗೂ ಸರಕಾರಿ ಪ್ರಾಥಮಿಕ ಶಾಲಾ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ಶಿವಾನಂದ ಸಾಲಿಮಠ . ಪ್ರಗತಿ ಸಂಘದ ಸಹ ಕಾರ್ಯದರ್ಶಿ ಕಿರಣಕುಮಾರ ನಾಟಿಕಾರ ಮಾತನಾಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಎರಡು ಶಾಲಾ ಕೋಣೆಗಳು ಮಂಜೂರ ಮಾಡಬೇಕು ಹಾಗೂ ಪ್ರಾಥಮಿಕ ಶಾಲಾ ಆಸ್ತಿ ಗ್ರಾಮ ಪಂಚಾಯತದಲ್ಲಿ ಗಣಕ ಯಂತ್ರದ ಉತ್ತಾರಿ ನೀಡುವಂತೆ ಮನವಿ ಮಾಡಿದರು. ಸೈನಿಕ ಭೀಮನಗೌಡ ಜುಮನಾಳ ಮನವಿ ಮಾಡಿ ಮಾತನಾಡಿ ಪ್ರೌಢ ಶಾಲಾ ಮಕ್ಕಳಿಗೆ ಕುಡಿಯುವ ನೀರಿ ವ್ಯವಸ್ಥೆ ಮಾಡಬೇಕು ಎಂದರು.  ಶಾಸಕರಿಗೆ ಪ್ರೌಢ ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸುವ ಸಮಾರಂಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ವೈ ಸಿ ಮಯೂರ.ಮುಖ್ಯ ಶಿಕ್ಷಕ ಜಿ ಎನ್ ನಡಕೂರ, ಭೀಮಪ್ಪ ವಠಾರ, ಎಸ್ ಎಸ್ ಅವಟಿ ಹಿರಿಯ ಶಿಕ್ಷಕ ಗೊಂದಲಿ ಶಿಕ್ಷಕರು. ಬಸವರಾಜ ಅಗಸರ, ಎಂ ಎಸ್ ಡಂಬಳ, ಆರ್‌.ಎಚ್‌.ಬಿರಾದಾರ, ಯಲ್ಲಪ್ಪ ವಠಾರ ಇದ್ದರು.