ಗುರ್ಲಾಪೂರದಲ್ಲಿ ಮಾರುತಿ ದೇವರ ಓಕಳಿ ಹಾಗು ಶ್ರೀ ಬಸವೇಶ್ವರ ರಥೋತ್ಸವ

   ಗುರ್ಲಾಪೂರದಲ್ಲಿ ಮಾರುತಿ ದೇವರ ಓಕಳಿ ಹಾಗು ಶ್ರೀ ಬಸವೇಶ್ವರ ರಥೋತ್ಸವ Maruti Devara Okali and Sri Basaveshwara Chariot Festival in Gurlapur

ಲೋಕದರ್ಶನ ವರದಿ 

ಗುರ್ಲಾಪೂರ 19 : ಪ್ರತಿವರ್ಷದಂತೆ ಈ ವರ್ಷವು ಶ್ರೀ ಮಾರುತಿದೇವರ ಓಕಳಿ ಹಾಗೂ ಶ್ರೀ ಬಸವೇಶ್ವರ ರಥೋತ್ಸವವು ದಿ:21 ರಿಂದ 25 ವರಿಗೆ  ಅದ್ದೂರಿಯಾಗಿ ಜರುಗುವದು. ಗುರುವಾರ ದಿ.21 ರಂದು ಗ್ರಾಮದ ಮಾರುತಿ ದೇವರ ಮುಂದೆ ಇರುವ ಓಕಳಿ ಹೊಂಡಕ್ಕೆ ವಿಷೇಶವಾಗಿ ಪೊಜೆ  ಸಲ್ಲಿಸಿ ಓಕಳಿ ಹೊಂಡ ತಗೆದು ಸಣ್ಣಓಕಳಿ ಆಡುವರು,  ಶುಕ್ರವಾರಂದು ಗ್ರಾಮದ ಲಕ್ಷ್ಮಿ ದೇವಿಗೆ ವಿಷೇಶ ಪೊಜೆಮಾಡಿ ಉಡಿ ತುಂಬಿ ಮಹಾಮಂಗಳಾರತಿ ಮಾಡುವರು ಸಂಜೆ ಗ್ರಾಮದ ಓಕಳಿ ಆಟವಾಡುವರು, ಶನಿವಾರರಂದು ಗ್ರಾಮದ ಮಾರುತಿ ದೇವರಿಗೆ ವಿಷೇಶವಾಗಿ ಪೂಜೆಮಾಡಿ  ಬಸವೇಶವರ ರತದಲ್ಲಿ  ಗೌಡರ ಮನೆಯಿಂದ ಕಳಸಕ್ಕೆ ಪೋಜೆ ಮಾಡಿ ಶ್ರೀ ಬಸವೇಶ್ವರ ರಥದಲ್ಲಿ ಬಸವೇಶ್ವರ ಮೂರ್ತಿ ಹಾಗು ಕಳಸವನ್ನು ಕುಡಿಸುವರ ನಂತರ. ಯುವಕರುಸೇರಿ  ಕಡೆ ಓಕಳಿ ಆಡುವರು  ತದನಂತರ  ಮಾರುತಿದೇವರ ಪಲಕ್ಕಿಯೊಂದಿಗೆ ಓಕಳಿ ಹೊಂಡಕ್ಕೆ ಪ್ರದಷಣೆ ಮಾಡಿ  ಶ್ರೀ ಬಸವೇಶ್ವರರ ಗದ್ದುಗೆಯವರಿಗೆ ಹೋಗಿ ಮಹಾಮಂಗಳಾರತಿ ಮಾಡಿ ಪಲಕ್ಕಿ ಉತಸ್ಸವ ಮರಳಿ ಮಾರುತಿ ದೇವಸ್ಥಾನಕ್ಕೆ  ಬರುತ್ತದೆ.  ಸೋಮವಾರ ದಿ.25 ರಂದು ಶ್ರೀ ಬಸವೇಶ್ವರರ ಗದ್ದುಗೆಗೆ ಮಹಾ ಅಭಿಷಕ ಜರುಗುವದು. ಸಂಜೆ 5 ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ರಥೋತ್ಸವವು ಮಾರುತಿ ದೇವಸ್ಥಾನದವರಿಗೆ ಜರುಗಿ ಮಹಾ ಮಂಗಳಾರುತಿ ಸಲ್ಲಿಸಿ ಮರಳಿ ಶ್ರೀ ಬಸವೇಶ್ವರಕ್ಕೆ ತಲಪುವುದು ಈ ಸಮಯದಲ್ಲಿ ಸುಮಂಗಲಿಯರ ಆರತಿ ಸಕಲ ವಾದ್ಯ ಮೇಳ ಕುದರಿಕುಣಿತ ಹಾಗೂ ರೂಪಕಗಳು ಪ್ರದರ್ಶನ ಜರಗುವದು ಎಂದು ಜಾತ್ರಾ ಕಮೀಟಿಯವರು ತಿಳಿಸಿರುತ್ತಾರೆ.