ತಾ.ಪಂ.ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಜೆ.ಎನ್.ಗಣೇಶ
MLA J.N. Ganesh inaugurated the new building of the T.P.
ತಾ.ಪಂ.ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಜೆ.ಎನ್.ಗಣೇಶ
ಕಂಪ್ಲಿ 09: ತಾಲೂಕಿನ ನಂ.10 ಮುದ್ದಾಪುರದ ಹೊಸಪೇಟೆ ಬೈಪಾಸ್ ರಸ್ತೆಯ ಮಿನಿವಿಧಾನಸೌಧ ಬಳಿಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ ತಾಲೂಕು ಪಂಚಾಯಿತಿಯ ನೂತನ ಕಟ್ಟಡವನ್ನು ಶಾಸಕ ಜೆ.ಎನ್.ಗಣೇಶ ಶನಿವಾರ ಉದ್ಘಾಟಿಸಿದರು.ನಂತರ ವೇದಿಕೆ ಸಮಾರಂಭದಲ್ಲಿ ಶಾಸಕ ಗಣೇಶ ಮಾತನಾಡಿ, ಕಂಪ್ಲಿ ತಾಲೂಕು ಕೇಂದ್ರವಾದ ಮೇಲೆ ತಾಲೂಕು ಪಂಚಾಯಿತಿ ಕಛೇರಿಯನ್ನು ನಗರದ ನೀರಾವರಿ ಇಲಾಖೆ ಬಳಿಯಲ್ಲಿರುವ ಕಟ್ಟಡದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, ಈಗ ಕೋಟ್ಯಾಂತರ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದು, ಇದರಲ್ಲಿ ಇನ್ನು ಮುಂದೆ ತಾಪಾಂಯ ಕಾರ್ಯವೈಕರಿಗಳು ನಡೆಯಲಿವೆ. ಪ್ರತಿಯೊಂದು ಯೋಜನೆಗಳ ತಾಪಂ ಮಟ್ಟದಿಂದ ಗ್ರಾಪಂಗೆ ಬರುತ್ತವೆ. ಅಧಿಕಾರಿಗಳ ಸಹಕಾರದಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಇನ್ನೂ ಕೆಲ ತಿಂಗಳಲ್ಲಿ ಕಂಪ್ಲಿ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿವೆ ಎಂದರು. ಈ ವೇಳೆ ಜಿಲ್ಲಾ ಮಟ್ಟದ ಸರಸ್ ಮೇಳ, ಉತ್ಪನ್ನಗಳ ವಸ್ತು ಪ್ರದರ್ಶನ, ಸಂಜೀವಿನಿ ಮಾಸಿಕ ಸಂತೆ ಸೇರಿದಂತೆ ವಿವಿಧ ವಸ್ತು ಪ್ರದರ್ಶನಗಳಿಗೆ ಚಾಲನೆ ನೀಡುವ ಮೂಲಕ ವೀಕ್ಷಿಸಿದರು.ಈ ಸಂದರ್ಭದಲ್ಲಿ ಜಿಪಂ ಯೋಜನಾಧಿಕಾರಿ ವಾಗೀಶ್, ತಾಪಂ ಆಡಳಿತಾಧಿಕಾರಿ ಪರಿಮಳ, ಇಒ ಆರ್.ಕೆ.ಶ್ರೀಕುಮಾರ, ಸಹಾಯಕ ನಿರ್ದೇಶಕ ಮಲ್ಲನಗೌಡ ಕೆ.ಎಸ್, ಗ್ರಾಪಂ ಅಧ್ಯಕ್ಷೆ ಸೋಮೇಶ್ವರಿ, ಸದಸ್ಯರು, ಎಇಇ ಹರೀಶ್, ಪುರಸಭೆ ಸದಸ್ಯ ಸಿ.ಆರ್.ಹನುಮಂತ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಕೃಷಿ ಅಧಿಕಾರಿಗಳಾದ ಸೋಮಶೇಖರ, ಶ್ರಿಧರ್, ಮುಖಂಡರಾದ ಕೆ.ಷಣ್ಮುಕಪ್ಪ, ಜಗದೀಶಗೌಡ, ಬಿ.ನಾರಾಯಣಪ್ಪ, ರಘುರಾಮ್ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು, ತಾಪಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 