ಕೊಗನೂರು ಗ್ರಾಮಸ್ಥರಿಂದ ಲೋಕಸಭಾ ಚುನಾವಣಾ ಬಹಿಷ್ಕಾರ: ತಹಶಿಲ್ದಾರರಿಗೆ ಮನವಿ

ಶಿರಹಟ್ಟಿ 20:  ಸ್ವತಂತ್ರ ಯೋಧರ ನಾಡು ಎಂದೇ ಪ್ರಶಿದ್ಧಿ ಪಡೆದ ತಾಲೂಕಿನ ಕೋಗನೂರು ಗ್ರಾಮಸ್ಥರಿಂದ ಈ ಬಾರಿ ನಡೆಯುವ ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಿದ್ದು, ಶಿರಹಟ್ಟಿ ತಹಶೀಲ್ದಾರರ ಮುಖಾಂತರ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

ಕೊಗನೂರು ಗ್ರಾಮಸ್ಥರು ನಮಗೆ ಯಾವುದೇ ರೀತಿಯ ನ್ಯಾಯ ಸಿಕ್ಕಿಲ್ಲ, ಈ ಬಾರಿ ನಾವೆಲ್ಲರೂ ಮತ ಹಾಕಲ್ಲ ಇದಕ್ಕೆ ಪೂರಕವಾಗಿ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡುವ ಕುರಿತು ತಹಶೀಲ್ದಾರ್ ಅನೀಲ ಬಡಿಗೇರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

ಇಲ್ಲಿನ ಗ್ರಾಮಸ್ಥರಿಗೆ ಇ-ಸ್ವತ್ತು ನಮೂನೆ 9 ಹಾಗೂ 11ಎ ಗ್ರಾಮ ಠಾಣಾ ಪರಿವರ್ತಿಸಿ ಹೊಸ ಗ್ರಾಮ ಠಾಣಾ ಸಮಸ್ಯೆಯನ್ನು ಬಗೆಹರಿಸಲು ತುಂಬಾ ದಿನಗಳಿಂದ ಮನವಿಯನ್ನು ಸಲ್ಲಿಸಲಾಗಿತ್ತು, ಆದರೆ ಕೆಲಸ ಆಗದ ಕಾರಣ ಹಾಗೂ ಇನ್ನೂ ಅನೇಕ ಮೂಲಭೂತ ಸೌಕರ್ಯಗಳಿಂದ ನಮ್ಮ ಗ್ರಾಮ ವಂಚಿತವಾಗಿದೆ ಎಂದು ಬೇಸರದಿಂದ  ಕೊಗನೂರು ಗ್ರಾಮಸ್ಥರು ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡುವ ಕುರಿತು ಮನವಿ ಪತ್ರವನ್ನು ಶಿರಹಟ್ಟಿ ತಹಸೀಲ್ದಾರ್ ಅನಿಲ್ ಬಡಿಗೇರ್ ಅವರಿಗೆ  ಸಲ್ಲಿಸಿದರು.  

ಈ ಸಂದರ್ಭದಲ್ಲಿ ಊರಿನ ಯುವ ಮುಖಂಡರಾದ ರಾಖೇಶ ಬೂದಿಹಾಳ. ರಮೇಶ ಕೂರಗುಂದ. ಮುತ್ತು ತಳವಾರ, ಕೊಟ್ರೇಶ ಪಾಣಿಗಟ್ಟಿ, ಪುಟ್ಟರಾಜ ಬಸಾಪುರ, ಪರತಗೌಡ ಬಸಾಪುರ ಉಪಸ್ಥಿತರಿದ್ದರು.