ಸಾಹಿತ್ಯ ವಿಮರ್ಶೆ ಸಾಹಿತ್ಯದ ಮೌಲ್ಯಮಾಪನಕ್ಕೆ ಪ್ರಮುಖ ಸಾಧನ ಹಿ ಪ್ರೊ. ಕೇಶವ ಜಹಗೀರದಾರ

ಸಾಹಿತ್ಯ ವಿಮರ್ಶೆ ಸಾಹಿತ್ಯದ ಮೌಲ್ಯಮಾಪನಕ್ಕೆ ಪ್ರಮುಖ ಸಾಧನ ಹಿ ಪ್ರೊ. ಕೇಶವ ಜಹಗೀರದಾರ  Literary criticism is a key tool for the evaluation of literature — Prof. Keshava Jahagirdar.

ಲೋಕದರ್ಶನ ವರದಿ 

ಸಾಹಿತ್ಯ ವಿಮರ್ಶೆ ಸಾಹಿತ್ಯದ ಮೌಲ್ಯಮಾಪನಕ್ಕೆ ಪ್ರಮುಖ ಸಾಧನ ಹಿ ಪ್ರೊ. ಕೇಶವ ಜಹಗೀರದಾರ  

ಗದಗ 13: ಕೆ.ಎಲ್‌.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಗದಗದಲ್ಲಿ ಕನ್ನಡ ಮತ್ತು ಇಂಗ್ಲೀಷ್ ವಿಭಾಗಗಳ ಸಹಭಾಗಿತ್ವದಲ್ಲಿ “ಸಾಹಿತ್ಯ ವಿಮರ್ಶೆ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸೆಪ್ಟೆಂಬರ್ 12, 2026ರಂದು ಮಹಾವಿದ್ಯಾಲಯದಲ್ಲಿ ಆಯೋಜಿಸಲಾಯಿತು.  

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ. ಕೇಶವ ಜಹಗೀರದಾರ ಅವರು ಸಾಹಿತ್ಯ ವಿಮರ್ಶೆಯ ಸ್ವರೂಪ, ಉದ್ದೇಶ, ಮಹತ್ವ ಹಾಗೂ ವಿವಿಧ ಆಯಾಮಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರವಾಗಿ ತಿಳಿಸಿದರು. ಸಾಹಿತ್ಯ ಕೃತಿಯ ಗುಣಮಟ್ಟ, ಆಶಯ, ಭಾಷೆ, ಶೈಲಿ, ಸೌಂದರ್ಯ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯನ್ನು ಅರ್ಥೈಸಿಕೊಳ್ಳುವಲ್ಲಿ ಸಾಹಿತ್ಯ ವಿಮರ್ಶೆಯ ಪಾತ್ರ ಮಹತ್ವದ್ದಾಗಿದೆ ಎಂದು ಅವರು ವಿವರಿಸಿದರು.  

ವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳನ್ನು ಕೇವಲ ಓದುವುದಕ್ಕೆ ಸೀಮಿತವಾಗದೆ, ಅವುಗಳ ಒಳಾರ್ಥ, ಸೌಂದರ್ಯಮೌಲ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ವಿಮರ್ಶಾತ್ಮಕ ದೃಷ್ಟಿಕೋನದಿಂದ ಗ್ರಹಿಸಬೇಕು ಎಂದು ತಿಳಿಸಿದರು. ವಿಮರ್ಶೆಯು ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿದ್ದು, ಉತ್ತಮ ಸಾಹಿತ್ಯವನ್ನು ಗುರುತಿಸುವಲ್ಲಿ ಹಾಗೂ ಓದುಗರಲ್ಲಿ ವಿಚಾರಶೀಲತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.  ಕಾರ್ಯಕ್ರಮವನ್ನುವಿದ್ಯಾಥಿ ನಿಕುಮಾರಿಹರ್ಷಿತಾನಿರ್ವಹಿಸಿದರು. ಶ್ರೀ. ಯಲ್ಲಪ್ಪಆಡಕಾವುಸ್ವಾಗತಿಸಿದರು.  ಜಯಶ್ರೀಬಾರಕೇರವಂದಿಸಿದರು.  

ಕಾರ್ಯಕ್ರಮದಲ್ಲಿಸಂಯೋಜಕರಾದಕನ್ನಡವಿಭಾಗದಡಾ. ರಾಮಚಂದ್ರಪಡೆಸೂರ ಹಾಗೂಶ್ರೀ. ಯಲ್ಲಪ್ಪಆಡಕಾವುಮತ್ತುವಿವಿಧವಿಭಾಗಗಳಅಧ್ಯಾಪಕರುಹಾಗೂವಿದ್ಯಾರ್ಥಿಗಳುಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.