ಪ್ರಜಾ ಸೇವೆ ಆಂದೋಲನ ಪರಿಣಾಮಕಾರಿ ಆಗಬೇಕು ಶಾಸಕ ರಾಜುಗೌಡ

ಪ್ರಜಾ ಸೇವೆ ಆಂದೋಲನ ಪರಿಣಾಮಕಾರಿ ಆಗಬೇಕು ಶಾಸಕ ರಾಜುಗೌಡ MLA Rajugowda should make the public service movement effective

ಪ್ರಜಾ ಸೇವೆ ಆಂದೋಲನ ಪರಿಣಾಮಕಾರಿ ಆಗಬೇಕು ಶಾಸಕ ರಾಜುಗೌಡ 

ದೇವರಹಿಪ್ಪರಗಿ 13: ‘ಪ್ರಜಾ ಸೇವೆ ಆಂದೋಲನ’ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮ ಕಾರಿಯಾಗಿ ನಡೆದು, ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪುವಂತಾಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು. ತಾಲೂಕಿನ ಸಾತಿಹಾಳ ಗ್ರಾ.ಪಂ ಹಾಗೂ ತಾಲೂಕು ಆಡಳಿತ ಸಹಯೋಗದಲ್ಲಿ ಶನಿವಾರ ಕಚೇರಿ ಆವರಣದಲ್ಲಿ ನಡೆದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,ಕರ್ನಾಟಕ ಸರ್ಕಾರದ ವತಿಯಿಂದ ಪ್ರಾರಂಭವಾಗಿರುವ ಪ್ರಜಾ ಸೇವಾ ಆಂದೋಲನವು, ಇದು ಬಡಜನರ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಾಗಬೇಕು. ಎಲ್ಲಾ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಗಂಭೀರವಾಗಿ ತೆಗೆದುಕೊಂಡು ಸಾರ್ವಜನಿಕರ ಕುಂದು ಕೊರತೆಗಳನ್ನು ನಿವಾರಿಸಲು ಪ್ರಯತ್ನಿಸಬೇಕು. ಈ ಕಾರ್ಯಕ್ರಮ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದದ್ದಲ್ಲ. ಇದು ಸರ್ಕಾರದ ಕಾರ್ಯಕ್ರಮವಾಗಿದ್ದು ಅಧಿಕಾರಿಗಳು ಸರ್ಕಾರದ ಸೇವಕರಾಗಿ ಪಕ್ಷ ಬೇಧವಿಲ್ಲದೆ ಬಡಜನರ ಸಮಸ್ಯೆಗಳನ್ನು ಪರಿಹರಿಸಬೇಕು.  ತಾಲೂಕಿನ ಜನರು ಕೂಡ ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.  ತಹಶೀಲ್ದಾರ್ ನಿಂಗಣ್ಣ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜಾ ಸೇವೆ ಆಂದೋಲನದಡಿ ಸುಮಾರು 57ಕ್ಕೂ ಹೆಚ್ಚು ಸಾರ್ವಜನಿಕರ ಅರ್ಜಿ ಸ್ವೀಕರಿಸಲಾಗಿದೆ. ಅದರಲ್ಲಿ 18 ಅರ್ಜಿಗಳನ್ನುಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದ್ದೇವೆ. ಬಾಕಿ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಲಾಯಿತು.  ಹೆಚ್ಚಿನ ಪಾರದರ್ಶಕತೆಯಿಂದ ಶಾಸಕರ ನೇತೃತ್ವದಲ್ಲಿ ನಿಮ್ಮೆಲ್ಲರ ಕೆಲಸ ಮಾಡುತ್ತೇವೆ ಎಂದರು. ಮುಖಂಡರುಗಳಾದ ಶೇಖರಗೌಡ ಹಿರೇಗೌಡ, ಸುನೀಲ ಮಾಗಿ, ನಾಗರಾಜ ಅವಟಿ, ಕುಮಾರ ರಾಠೋಡ ಸೇರಿದಂತೆ ಹಲವಾರು ಜನ ಮುಖಂಡರು ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.  ಕಾರ್ಯಕ್ರಮದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ, ಸಿಡಿಪಿಒ ಶಿಲ್ಪಾ ಹಿರೇಮಠ,  ಝೆ.ಪಿ ವಿ.ಎ.ರಾಠೋಡ, ಕೃಷಿ ಇಲಾಖೆ ಅಧಿಕಾರಿ ಶರಣಗೌಡ ಬಿರಾದಾರ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ.ರಾಮು ರಾಠೋಡ,ಗ್ರಾ.ಕು ನೀರು ಎಇಇ ವ್ಹಿ.ಬಿ.ಗುಂದಗಿ, ಹೆಸ್ಕಾಂ ಎಇಇ ಕೆ.ಎಂ.ಸಾವಳಗಿ,  ತಹಶೀಲ್ದಾರ್ -2 ಎಂ,ಜಿ, ಬಿರಾದಾರ, ಅರಣ್ಯ ಇಲಾಖೆಯ ಜಿ.ಬಿ.ರಾಮಗಿರಿಮಠ,  ಕೆಬಿಜೆಎ ಲ್ ಎಸ್‌.ಒ ಶ್ರೀಶೈಲ ಬಿರಾದಾರ, ಪಿಡಿಒ ಎಂ.ಎಸ್‌.ಕತ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವಿವಿಧ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.