ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ : ಶಿವಕುಮಾರ ಶಾಸ್ತಿ
Liberation is not attained until one becomes a servant of the Guru: Shivakumara Shastry.
ಆಲಮೇಲ ೨೦: ಗುರು ಎಂದರೆ ಆತ್ಮ, ಗುರು ಎಂದರೆ ಪರಮಾತ್ಮ, ಸಕಲ ಜೀವಾತ್ಮಗಳ ದಾರಿದೀಪ ಗುರು, ಅಂತಹ ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಆಳಂದ ತಾಲೂಕಿನ ಧೋತರಗಾಂವ ಗ್ರಾಮದ ಪಂಡಿತ ಶಿವಕುಮಾರ ಶಾಸ್ತಿöçಗಳು ಹೇಳಿದರು.
ಅವರು ತಾಲೂಕಿನ ಸುಕ್ಷೇತ್ರ ದೇವರನಾವದಗಿ ಗ್ರಾಮದ ಮಲ್ಲಿಕಾರ್ಜುನ ಹಾಗೂ ಸೋಮೇಶ್ವರ ದೇವರ ದೇವಸ್ಥಾನದ ಆವರಣದಲ್ಲಿ ಜಾತ್ರಾ ನಿಮಿತ್ಯವಾಗಿ ಹಮ್ಮಿಕೊಂಡ ತಿಂಗಳುಗಳ ಕಾಲ ಆಯೋಜಿಸಿರುವ ನವಲಗುಂದದ ಅಜಾತಶತ್ರು ನಾಗಲಿಂಗ ಮಹಾಸ್ವಾಮಿಗಳ ಮಹಾಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಜ್ಞಾನದ ಕತ್ತಲೆಯನ್ನು ಕಳಚಿ, ಜ್ಞಾನದ ಬೆಳಕನ್ನು ತೋರಿಸುವವರೇ ಗುರು ’ಗು’ ಅಂದರೆ ಕತ್ತಲು ಮತ್ತು ’ರು’ ಅಂದರೆ ಕತ್ತಲನ್ನು ಹೊಡೆದೋಡಿಸುವ ಬೆಳಕು ಎಂದರ್ಥ. ನಮ್ಮ ಜೀವನಕ್ಕೆ ಸರಿಯಾದ ದಾರಿಯನ್ನು ತೋರಿಸಿ, ನೈತಿಕತೆ ಹಾಗೂ ಸಂಸ್ಕಾರವನ್ನು ಕಲಿಸುವ ಗುರು ದೇವರ ಸಮಾನ. ಇಂತಹ ಗುರುವಿನ ಪುರಾಣದಲ್ಲಿ ಭಾಗವಹಿಸಿ ನಾಗಲಿಂಗರ ಜೀವನ ಚರಿತ್ರೆ ಅವರ ಪವಾಡಗಳನ್ನು ಅರಿತುಕೊಳ್ಳಬೇಕು ಎಂದರು.
ಗ್ರಾಮದ ಹಿರೇಮಠದ ಬಸಲಿಂಗಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅಂಕಲಗಿಯ ಗಾನ ಕೋಗಿಲೆ ಚನ್ನಮಲ್ಲಯ್ಯಾ ಗವಾಯಿಗಳು, ಚವಡಾಪುರದ ತಬಲಾ ಚತುರ ರಾಜಶೇಖರ ತೇಲಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಯರಗಲ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಗುಗ್ರಿ, ಬಿಸಿಊಟ ಎಡಿ ನಿಂಗಣ್ಣ ಸಣ್ಣಕ್ಕಿ, ಉದ್ಯಮಿ ರುದ್ರಗೌಡ ಜನಿವಾರ, ಪತ್ರಕರ್ತ ನಿಂಗಣ್ಣ ಬಿರಾದಾರ, ಶಿಕ್ಷಕ ಚನ್ನು ನಾರಾಯಣಪುರ, ಬಲವಂತ ಪಡಕೆ ಅಧ್ಯಕ್ಷ ಮಡಿವಾಳ ಕುಮಸಿ, ಮಲಕಣ್ಣ ಕುಮಸಿ, ಮಹಾಂತಯ್ಯ ಮಠಪತಿ, ಗಂಗಾಧರ ಬಡಿಗೇರ, ಸುರೇಶ ವಡ್ಡರ, ದೇವರನಾವದಗಿ ಗ್ರಾಮದ ಸಕಲ ಭಕ್ತರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 