ಕಿಷ್ಕಿಂಧ ಜಿಲ್ಲೆಗೆ ಆಗ್ರಹಿಸಿ ಪತ್ರ ಚಳುವಳಿ

ಗಂಗಾವತಿ 09: ಕಿಷ್ಕಿಂಧ ಜಿಲ್ಲೆಗೆ ಆಗ್ರಹಿಸಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಗಾವತಿಯ ಅಂಚೆ ಕಚೇರಿ ಬಳಿ ಪತ್ರ ಚಳುವಳಿ ನಡೆಸುವ ಮೂಲಕ ಸರಕಾರದ ಗಮನ ಸೆಳೆಯಲಿದ್ದಾರೆ ಎಂದು ಸಂಕಲ್ಪ ಎಜ್ಯುಕೇಷನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ನಾಗರಾಜ್ ಗುತ್ತೇದಾರ್ ವಕೀಲರು ತಿಳಿಸಿದರು. 

ನಗರದ ಸಂಕಲ್ಪ ಸ್ವತಂತ್ರ ಪದವಿಪೂರ್ವ ಕಾಲೇಜ್ ಹಾಗು ಸಂಕಲ್ಪ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ 9 ಗಂಟೆಗೆ ಅವರು ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಂಗಾವತಿ ಕನಕಗಿರಿ, ಕಾರಟಗಿ ತಾಲೂಕು ಅಲ್ಲದೆ ತಾವರಗೆರಾ ಪಟ್ಟಣ ಸೇರಿ ಗಂಗಾವತಿ ಕೇಂದ್ರವನ್ನಾಗಿಟ್ಟುಕೊಂಡು ಕಿಷ್ಕಿಂಧ ಜಿಲ್ಲೆ ಮಾಡಿದರೆ. ನಾಗರೀಕರಿಗೆ ಸಾಕಷ್ಟು ಸೌಲಭ್ಯಗಳು ಲಭ್ಯವಾಗಲಿವೆ, ಇಲ್ಲಿನ ಜಮೀನ ಮೊತ್ತ ವೃದ್ಧಿಯಾಗಲಿದೆ, ವ್ಯವಹಾರಿಕವಾಗಿ ಇನ್ನೂ ಹೆಚ್ಚು ಪ್ರಗತಿ ಹೊಂದಲಿದ್ದು ಅನೇಕ ಹೊಸ ಉದ್ಯಮಗಳು ತೆರೆದುಕೊಳ್ಳಲಿವೆ. ಶಿಕ್ಷಣಕ್ಕೆ ವಿಪುಲ ಅವಕಾಶಗಳು ಸಿಗಲಿವೆ ಎಂದು ವಿವರಿಸಿದರು. 

ಪತ್ರ ಚಳುವಳಿ ಸಾಂಕೇತಿಕವಾಗಿದ್ದು, ಹಂತಹಂತವಾಗಿ ಎಲ್ಲಾ ಶಾಲಾ ಕಾಲೇಜುಗಳು ಪಾಲ್ಗೊಳ್ಳುವಂತೆ ಪ್ರೇರೆಪಿಸಲಾಗುವುದು, ಜಿಲ್ಲಾ ಹೋರಾಟ ಜನಾಂದೊಲವಾಗಿ ಮಾರ​‍್ಾಡಾದಾಗ ಮಾತ್ರ ಸರಕಾರದ ಗಮನ ಸೆಳೆಯಲು ಸಾಧ್ಯ, ಇತರೆ ತಾಲೂಕುಗಳು ಹೆಚ್ಚು ಮುತುವರ್ಜಿಯಿಂದ ಕಾರ್ಯ ಮಾಡಬೇಕಿದೆ, ಸಿಎಂ, ಡಿಸಿಎಂ ಹಾಗು ಕಂದಾಯ ಸಚಿವರಿಗೆ ಮಕ್ಕಳು ಪತ್ರ ಬರೆದಿದ್ದು ಅವರ ವಿಳಾಸಗಳಿಗೆ ಪೋಸ್ಟ್‌ ಮಾಡುವ ಮೂಲಕ ಗಮನ ಸೆಳೆಯಲಿದ್ದಾರೆ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಸವರಾಜ್ ಸಿರಿಗೇರಿ, ಉಪನ್ಯಾಸ ಪವನ್ ಕುಮಾರ್ ಗುಂಡೂರು, ನಾಗರಾಜ್ ಹರಟಿ, ಶಂಕರ್ ವರದಾಪುರ, ವಿಶ್ವನಾಥ್ ಹೆಚ್ ಹಾಗು ಶಿವರಶಣ, ವಿದ್ಯಾರ್ಥಿಗಳು ಪದ್ಮಾವತಿ, ನಿವೇದಿತ, ಕೌಶಲ್ಯ, ಕಲ್ಪನಾ, ಪಲ್ಲವಿ, ಅರುಣ್ ಚೌವ್ಹಾಣ್, ಮಂಜುನಾಥ್ ಇತರರಿದ್ದರು.