ಪ್ರತಿಷ್ಠಾನದಿಂದ ಪ್ರದರ್ಶನಕ್ಕೆ ನಾಟಕ ತಂಡ ಕಟ್ಟುವ ಕೆಲಸವಾಗಲಿ: ಝಾಕೀರ ನದಾಫ್

ಪ್ರತಿಷ್ಠಾನದಿಂದ ಪ್ರದರ್ಶನಕ್ಕೆ ನಾಟಕ ತಂಡ ಕಟ್ಟುವ ಕೆಲಸವಾಗಲಿ: ಝಾಕೀರ ನದಾಫ್  Let the foundation work on building a theater troupe for performances: Zakir Nadaf

ಧಾರವಾಡ 22: ಕಲಾತಂಡಗಳ ರಚನೆಯಿಂದ ಸ್ಥಳೀಯ ಕಲಾವಿದರಿಗೆ ಉತ್ತೇಜನ  ಮತ್ತು ಕನ್ನಡ ನಾಟಕ ಪರಂಪರೆ ಉಳಿಯಲು ಸಹಕಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನದ ಮಾರ್ತಾಂಡಪ್ಪ ಕತ್ತಿ ಮತ್ತು ಎಲ್ಲಾ ಪದಾಧಿಕಾರಿಗಳ ಪ್ರಯತ್ನ ಮಾಡಲಿ ಹಾಗೂ ಅವರ ಸಂಘಟನೆಯ ಕಾರ್ಯ ಶ್ಲಾಘನೀಯ ಕಾರ್ಯವಾಗಿದೆ ಎಂದು ರಂಗಾಯಣದ ನಿರ್ದೇಶಕ ಝಾಕೀರ ನಧಾಫ ಹೇಳಿದರು. 

ಅವರು ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನ  ಹಮ್ಮಿಕೊಂಡಕರ್ನಾಟಕ ನಾಟಕ ಜಾನಪದ ಕಲಾವಿದರ ಅಭಿವೃದ್ಧಿ ಸಂಘ ಹುಬ್ಬಳ್ಳಿ ಇವರು ಅರ​‍್ಿಸುವಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತ್ತಾ ನಾನು ಸುಮಾರು 16 ವರ್ಷದಿಂದ ನೋಡುತ್ತಾ ಬಂದಿರುವೆ ಪ್ರತಿಷ್ಠಾನ ಭಿನ್ನಹವಾದ ಸಾಂಸ್ಕೃತಿಕ ಕಾರ್ಯಗಳಿಂದ ಗುರುತಿಸಿಕೊಂಡಿದೆ. ಈ ಕಾರ್ಯ ಸರಕಾರ ಮತ್ತು ಸ್ಥಳೀಯರಿಂದ ಸದಾ ಸಹಕಾರ ನಿಕಡಬೇಕು ಎಂದು ಹೇಳಿದರು.  

ಈ ಕಾರ್ಯಕ್ರಮದಲ್ಲಿ ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಸ್ಥೆ ಹುಬ್ಬಳ್ಳಿಯ ಅಧ್ಯಕ್ಷರಾದ ಸುಜಾತ ವಿ ರೆಡ್ಡಿ, ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ರಾಜ್ಯಾಧ್ಯಕ್ಷರಾದ  ಶೇಖರಗೌಡ ಮಾಲಿ ಪಾಟೀಲ, ಖ್ಯಾತ ನ್ಯಾಯವಾದಿಗಳು ಹಾಗೂ ರೆಡ್ಡಿ ಬ್ಯಾಂಕ ಅಧ್ಯಕ್ಷರಾದ ಕೆ.ಎಲ್‌.ಪಾಟೀಲ, ಸಮಾಜ ಸೇವಕರಾದ ಶೋಭಾ ಭೂಮರಡ್ಡಿ, ನಾಟಕದ ನಿರ್ದೇಶಕರಾದ ಹೆಲನ್ ಮೈಸೂರು, ಅಭಿಯಂತರರು ಹಾಗೂ ಯುವಚಿಂತನಾ ಸಮಾವೇಶದ ಸರ್ವಾಧ್ಯಕ್ಷರಾದ ಸುನೀಲ ಬಾಗೇವಾಡಿ ಮಾತನಾಡಿದರು.ಅಧ್ಯಕ್ಷತೆಯನ್ನು ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ  ಅಧ್ಯಕ್ಷರಾದ ಎಮ್ ಎಸ್ ಫರಾಸ ವಹಿಸಿ ಮಾತನಾಡಿದರು.

ಇದೇ ಕಾರ್ಯಕ್ರಮದಲ್ಲಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ಪತ್ರಕರ್ತರಾದ ಜಿ.ಎಸ್‌. ಗೋನಾಳ ,  ನಂಬರ 1 ಕನ್ನಡ ಯುಟ್ಯೂಬ್ ಚಾನಲ್ ನ ಸೈಯದ ಸರ್ (ಜವಾರಿ ಕಾಕಾ),  ಕ ರಾ ಸ ನೌ ಸಂಘ, ಧಾರವಾಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಆರ್ ಬಿ ಲಿಂಗದಾಳ, ನಿವೃತ್ತ ನೌಕಕರ ಸಂಘದ ಅಧ್ಯಕ್ಷರಾದ ಬಿ.ಎಮ್ ಸೂರಕೊಂಡ, ಜಿಲ್ಲಾ ಅಧಿಕಾರಿಗಳ ಕಾರ್ಯಾಲಯದ  ಪರಿಸರ ಅಭಿಯಂತರರಾದ ಎಫ್ ವಾಯ್ ಕಳಸರೆಡ್ಡಿ, ಖ್ಯಾತ ವೈದ್ಯರು,ಹಾಗೂ ಐ.ಎಮ್‌.ಎ ಅಧ್ಯಕ್ಷರಾದ ಡಾ. ನವೀನ ಮಂಕಣಿ, ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಚ್ ಆರ್ ಸಂಕಪ್ಪನವರ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ,

ಧಾರವಾಡದ ಉಪನಿರ್ದೇಶಕರಾದ ಡಾ. ಎಸ್ ವಿ ಸಂತಿ, ಧಾರವಾಡ ಪಶುಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳಾದಡಾ. ಪ್ರಕಾಶ ಬೆನ್ನೂರು, ಸಮಾಜ ಸೇವಕರಾದ ಪುಷ್ಪ ಮಲ್ಲಿಗವಾಡ, ಸುಧಾ ಸಾಹುಕಾರ, ಶಶಿಕಲಾ ಬಸವರಡ್ಡಿ, ಉದ್ಯಮದಾರರಾದ ರಾಜೀವ ದೇಶಪಾಂಡೆ, ನಿವೃತ್ತ ಜಿಲ್ಲಾ ಉದ್ಯೋಗ ಅಧಿಕಾರಿಗಳಾದ ವಿ.ಬಿ. ಮತ್ತೂರ ಅವರನ್ನು ಸನ್ಮಾನಿಸಲಾಯಿತು. ಹಾಗೂ ಆದರ್ಶ ದಂಪತಿಗಳಾದ ಮಲ್ಲಮ್ಮ ಹಾಗೂ ಗವಿಸಿದ್ದಪ್ಪ ಗೋನಾಳ, ಸುಮಾ ಮತ್ತು ಈರ​‍್ಪ ಗಿರಡ್ಡಿ, ಸವಿತಾ ಮತ್ತು ಹಾಲಪ್ಪ ನಾಯಕ, ಮೈತ್ರ ಹಾಗೂ ರಮೇಶ ತುಂಗಳಇವರನ್ನು ಆದರ್ಶ ದಂಪತಿಗಳು ಎಂದು ಸನ್ಮಾನಿಸಲಾಯಿತು. 

ನಂತರ ಹೆಲನ ಮೈಸೂರು ಅವರ ನೇತೃತ್ವದ ಸಂಪೂರ್ಣ ಹೆಮ್ಮರೆಡ್ಡಿ ಮಲ್ಲಮ ನಾಟಕ ಪ್ರದರ್ಶನವು ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಸಮಾಜ ಸುಧಾರಣೆ ಸಂದೇಶವನ್ನು ಸಾರಿತು. ಪ್ರತಿಷ್ಠಾನದ ಉಪಾಧ್ಯಕ್ಷ ವಿಜಯಲಕ್ಷ್ಮಿ ಶೆಟ್ಟಿ ನಿರೂಪಿಸಿದರು. ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸುರೇಶ ಬೆಟಗೇರಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಕೃಷ್ಣಮೂರ್ತಿ ಗೊಲ್ಲರ ವಂದಿಸಿದರು.  ಈ ಕಾರ್ಯಕ್ರಮದಲ್ಲಿ ಹು-ಧಾ ರೆಡ್ಡಿ ಸಮಾಜದ ಗಣ್ಯರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ರಂಗಾಸಕ್ತರು  ಮತ್ತು  ರಂಗಕಲಾವಿದರು, ಧಾರವಾಡದ ರಂಗಕಲಾತಂಡದ ಸದಸ್ಯರು ಇದ್ದರು.