ಚಿರತೆ ಹೆಜ್ಜೆ ಗುರುತು, ಆತಂಕದಲ್ಲಿ ಜನತೆ
Leopard footprints, people worried
ತಾಳಿಕೋಟೆ 04: ತಾಲ್ಲೂಕಿನ ಹಿರೂರ ಗ್ರಾಮದ ಜಮೀನಿನಲ್ಲಿ ಚಿರತೆಯ ಹೆಜ್ಜೆಗುರುತುಗಳು ಕಂಡು ಬಂದಿದ್ದು ಡೋಣಿ ದಂಡೆಯ ಗುತ್ತಿಹಾಳ, ಬೋಳವಾಡ ಸುತ್ತಮುತ್ತಲಿನ ಗ್ರಾಮಸ್ಥರು ಭಯದ ವಾತಾವರಣ ಮೂಡಿಸಿದೆ.ಡಿ.31 ರಂದು ಚಿರತೆ ಹೆಜ್ಜೆ ಗುರುತುಗಳ ಬಗ್ಗೆ ರೈತರು ನೀಡಿದ ಮಾಹಿತಿಯ ಮೇರೆಗೆ ಸ್ಥಳ ಪರೀಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಅದು ಚಿರತೆಯ ಹೆಜ್ಜೆಗುರುತು ಎಂಬುದನ್ನು ಖಚಿತಪಡಿಸಿದ್ದಾರೆ.ಡಿ.31ರಿಂದ ಿಂದು ಶನಿವಾರದವರೆಗೆ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಚಿರತೆಯ ಚಲನವಲನದ ಬಗ್ಗೆ ಪರೀಶೀಲನೆ ನಡೆಸಿದ್ದಾಗಿ ಚಿರತೆ ಹಾಯ್ದು ಹೋಗಿರುವ ಹೆಜ್ಜೆ ಗುರುತಗಳಿವೆ. ಆದರೆ ಅಲ್ಲಿ ಇಲ್ಲಿ ಸುಳಿದಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ, ?ದು ಸಿಂದಗಿ ತಾಲ್ಲೂಕಿನತ್ತ ಹೋಗಿರುವ ಸಾಧ್ಯತೆಗಳಿವೆ ಎಂದರು,ಪತ್ರಿಕೆಯೊಂದಿಗೆ ಮಾತನಾಡಿದ ಮುದ್ದೇಬಿಹಾಳ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಬಿ.ಐ.ಬಿರಾದಾರ, ಚಿರತೆ ಒಂದೇ ಕಡೆ ಇರುವುದಿಲ್ಲ, ಸದ್ಯ ಹೆಜ್ಜೆ ಗುರುತು ಹೋಗಿರುವ ಬಗ್ಗೆ ಮಾತ್ರ ಇವೆ. ಕಳೆದ ಮೂರುದಿನಗಳಿಂದ ನಮ್ಮ ಸಿಬ್ಬಂದಿ ಅದರ ಹೆಜ್ಜೆ ಗುರುತುಗಳ ಹುಡುಕಾದಲ್ಲಿದ್ದಾರೆ. ನಂತರ ಎಲ್ಲಿಯೂ ಪತ್ತೆಯಾಗಿಲ್ಲ, ಈ ಬಗ್ಗೆ ಆತಂಕ ಬೇಡ, ಆದರೆ ಜನತೆ ಜಾಗೃತರಾಗಿರುವಂತೆ ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 