ನಿಂಬೆ ವಿದೇಶಕ್ಕೆ ರು್ತ: ಡಾ ನಾಗವೇಣಿ
Lemon exports to foreign countries: Dr. Nagaveni
ಲೋಕದರ್ಶನ ವರದಿ
ಇಂಡಿ 02 : ಅರ್ಥಿಕವಾಗಿ ಸದೃಡ ಮತ್ತು ಯುದ್ದ ರಹಿತ, ಗಲಭೆ ರಹಿತ ದೇಶಗಳಿಗೆ ಮಾತ್ರ ನಿಂಬೆ ರು್ತ ಮಾಡಿ ಎಂದು ಬೆಂಗಳೂರಿನ ರು್ತ ಸಲಹೆಗಾರರು ಡಾ. ನಾಗವೇಣಿ ಸಿ.ಆರ್ ಹೇಳಿದರು. ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ದಿ ನಿಗಮ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಇಂಡಿ ನಿಂಬೆ ರು್ತ ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು. ನಿಂಬೆ ರು್ತ ಮಾಡುವ ರೈತ ಅಥವಾ ರೈತ ಸಂಘಟನೆಗಳು ಸಂಸ್ಥೆ ಸ್ಥಾಪಿಸಿ ಅದರ ಆಧಾರ ಕಾರ್ಡ, ಪಾನ ಕಾರ್ಡ, ಜಿಎಸ್ ಟಿ ನಂ, ಬ್ಯಾಂಕ ಅಕೌಂಟ ನಂ ನೀಡಿ ಆಮದು ಮತ್ತು ರು್ತ ಕೋಡ ಮಾಡಬೇಕು.
ರಜಿಸ್ಟೇಷನ್ ಮಾಡಿ ಸರ್ಟಿಫಿಕೇಟ ಪಡೆಯಬೇಕು. ಆಮದು ರು್ತ ಬ್ಯಾಂಕ ಖಾತೆ ಮಾಡಿ ಇಸಿಜಿಸಿ ಇನ್ಸುರೆನ್ಸ ಮತ್ತು ಎಚ್ ಎಸ್ ಕೋಡ ತೆಗೆದು ರು್ತ ಮಾಡಬಹುದು ಎಂದರು. ಇದಕ್ಕೆ ಅಪೆಡಾ ಸಂಸ್ಥೆ ಇಲ್ಲವೆ ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ದಿ ನಿಗಮ ಸಂಪೂರ್ಣ ಸಹಕರಿಸುತ್ತದೆ. ನಮ್ಮಲ್ಲಿ ನಿಂಬೆ ಬೆಳೆಗೆ ಬಹಳ ಬೇಡಿಕೆ ಇದ್ದಾಗ ರು್ತ ಮಾಡಲು ಬರುವದಿಲ್ಲ. ಇಲ್ಲದಿದ್ದರೆ ನೀವು ಇಂಡಿಯ ನಿಂಬೆ ಜಗತ್ತಿನೆಡೆಗೆ ಕಳುಹಿಸಬಹುದು ಎಂದರು. ನಿಂಬೆ ಗುಣಮಟ್ಟದಿಂದ ಕುಡಿರಬೇಕು, ಇಂಡಿಯ ನಿಂಬೆಗೆ 25 ಹೊರ ರಾಷ್ಟಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ನಿಂಬೆ ಉತ್ಪನ್ನಗಳನ್ನು ಮಾಡಿ ನಿಂಬೆ ಉಪ್ಪಿನಕಾಯಿ, ನಿಂಬೆ ಪೌಡರ ಸೇರಿದಂತೆ ಇನ್ನಿತರ ರು್ತ ಮಾಡಬಹುದು ಎಂದರು.
ಇಂಡಿಯ ಕೃಷಿ ತಜ್ಞ ಡಾ. ಪ್ರೇಮಚಂದ್ರ ಮಾತನಾಡಿ ನಿಂಬೆಗೆ ಬೆಳವಣೆಗೆ ಹಂತದಲ್ಲಿ ಕ್ಲೋರೊಪಿರಿಪಾಸ್, ಡೈಮಿಥೋಟ್, ಕಾರ್ಬೆಂಡಜಿನ್, ಸ್ಟೆಂಪ್ಟೋಮಾಯಿಸಿನ ರಸಾಯನಿಕ ಓಷದ ಕೊಡಬಾರದು. ಕೊಟ್ಟರೆ ಗುಣಮಟ್ಟದ ನಿಂಬೆ ಬರುವದಿಲ್ಲ. ಮತ್ತು ವಿದೇಶದಲ್ಲಿ ಬೇಡಿಕೆ ಇರುವದಿಲ್ಲ ಎಂದರು.ಸಂಸ್ಥಾಪಕರು ಮತ್ತು ನಿರ್ದೇಶಕರು ಲಿಂಗರಾಜ ಮನಗೂಳಿ, ಡಾ. ಕಾರಂತ, ಸಹ ವಿಸ್ತಿರಣಾ ನಿರ್ದೇಶಕ ಕೃಷಿ ವಿಸ್ತರಣಾ ಕೇಂದ್ರ ವಿಜಯಪುರದ ಡಾ. ಆರ್ ಜೊಳ್ಳಿ, ಇಂಡಿಯ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ, ತೋಟಗಾರಿಕೆ ಉಪನಿರ್ದೇಶಕ ಡಾ. ಸಿದ್ದಲಿಂಗೇಶ್ವರ ವ್ಯವಸ್ಥಾಪಕ ನಿರ್ದೇಶಕ ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ರಾಹುಲಕುಮಾರ ಭಾವಿದೊಡ್ಡಿ, ಡಾ. ವೀಣಾ ತೋಟಗಾರಿಕೆಯ ಸತೀಶ ಬಡಿಗೇರ ಮಾತನಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 