ಕಾನೂನು ಅರಿವು ಕಾರ್ಯಕ್ರಮ ಜನ ಜಾಗೃತಿ ಅಗತ್ಯ
ಹೂವಿನಹಡಗಲಿ 30: ತಾಲೂಕಿನ ಸೋಗಿ ಗ್ರಾಮದ ಪಟ್ಟೇದ ಸಿದ್ದಮಲ್ಲಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ತಾಲೂಕ ಕಾನೂನು ಸೇವಗಳ ಸಮಿತಿ ತಾಲೂಕ ವಕೀಲರ ಸಂಘ ಹಾಗೂ ಸಂಘ ಸಂಸ್ಥೆಗಳ ಸಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗೆ ಕಾನೂನು ಅರಿವು ನೆರವು ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಸಹಾಯಕ ಅಭಿಯೋಜಕ ಕೆ. ಅಜಯ್ ಕುಮಾರ್ ಮಾತನಾಡಿ ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುವುದು ಕಾನೂನಿನ ಅರಿವನ್ನು ಜನರಿಗೆ ಮುಟ್ಟಿಸುವಉದ್ದೇಶದಿಂದ ಜನ ಜಾಗೃತಿ ವಿಚಾರ ಮೂಡಿಸಲು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಕೀಲ ಹನುಮಂತ ಗದುಗಿನ ಮಾರುತಿ ಹೊಸಮನಿ ದೊರೆಪ್ಪನಾಯಕ ಕ್ಯಾತ ಎಸ್ ಸಂಗಮೇಶ ಕಾನೂನು ಸಮಿತಿಯ ಸಹಾಯಕರು ಡಿಕೆ ಚನ್ನಬಸಯ್ಯಸ್ವಾಮಿ ಇದ್ದರು.ಶಾಲಾ ಮುಖ್ಯ ಗುರುಗಳಾದ ಕಡ್ಲಿ ಗುರು ಬಸವರಾಜ್, ಜಿಎಸ್‌ಎಂ ಕೊಟ್ರೇಶ್ ಶೇಕ್ ಅಹಮದ್ ಅತಿಥಿ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಇದ್ದರು. ಮಲ್ಲಿಕಾರ್ಜುನ ಕೆ ನಿರ್ವಹಿಸಿದರು.