‘ಉತ್ತಂಗಿ ಚನ್ನಪ್ಪನವರು ಸರ್ವಜ್ಞನ ವಚನಗಳನ್ನು ಮನೆ-ಮನಗಳಿಗೆ ಮುಟ್ಟಿಸಿದರು’
ಧಾರವಾಡ 30: ರೆವರಂಡ ಉತ್ತಂಗಿ ಚನ್ನಪ್ಪನವರು ಸರ್ವಜ್ಞನ ವಚನಗಳನ್ನು ಶಾಸ್ತ್ರಿಯ ಅಧ್ಯಯನ ಮಾಡಿ ಎಲ್ಲರ ಮನೆ-ಮನಗಳಿಗೆ ಮುಟ್ಟಿಸಿದರು ಎಂದು ಹುಬ್ಬಳ್ಳಿಯ ಗುರುಬಸವ ಟ್ರಸ್ಟ ಸಂಚಾಲಕ ಶಶಿಧರ ಕರವೀರಶೆಟ್ಟರ ತಿಳಿಸಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ರೆ. ಚನ್ನಪ್ಪ ಉತ್ತಂಗಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಉತ್ತಂಗಿ ಚೆನ್ನಪ್ಪನವರ ಬದುಕು ಮತ್ತು ಸಂದೇಶ’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ರೆ. ಉತ್ತಂಗಿ ಚನ್ನಪ್ಪನವರು ಭಾರತೀಯ ಕ್ರೈಸ್ತರಾದರೂ ಲಿಂಗಾಯತ ಕ್ರೈಸ್ತರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿ, ಹಿಂದೂ ಸಮಾಜದ ಹಿತ ಚಿಂತಕರೆನಿಸಿಕೊಂಡರು. ರೆ. ಉತ್ತಂಗಿಯವರಿಗೆ ಯೇಸು ಕ್ರಿಸ್ತನ ಬಗ್ಗೆ ಅಪಾರ ಶ್ರದ್ಧೆಭಕ್ತಿ ಇತ್ತು. ವೃತ್ತಿಯಿಂದ ಕ್ರೈಸ್ತಧರ್ಮದ ಧರ್ಮ ಪ್ರಚಾರಕರಾದರೂ ಪ್ರವೃತ್ತಿಯಿಂದ ಕನ್ನಡದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ ಕನ್ನಡದ ಕಟ್ಟಾಳು. ಚಿಕಿತ್ಸಕ ಬುದ್ದಿಯ ಅವರು ಎಲ್ಲವನ್ನು ಒರೆಗೆ ಹಚ್ಚಿ ಸತ್ಯಾಸತ್ಯತೆಯನ್ನು ಅರಿಯುತ್ತಿದ್ದರು.
ಎಲ್ಲಾ ಧರ್ಮಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅವರು ಯಾವಧರ್ಮವನ್ನು ದುರಭಿಮಾನದಿಂದ ಕಂಡವರಲ್ಲ. ರೆ. ಉತ್ತಂಗಿಯವರು ಜೀವನದುದ್ದಕ್ಕೂ ಖಾದಿ ಬಟ್ಟೆ ಧರಿಸಿ ದೇಶಿಯತೆಯನ್ನು ಮೈಗೂಡಿಸಿಕೊಂಡಿದ್ದರು. ಕೆಲವೊಮ್ಮೆ ಮೇಲಾಧಿಕಾರಿಗಳ ವಕ್ರದೃಷ್ಠಿಗೆ ಬಿದ್ದದ್ದೂ ಉಂಟು. ವಿದ್ವಾಂಸ ಎಸ್. ಎಸ್. ಭೂಸನೂರಮಠ ಅವರ ಜೋತೆಗೂಡಿ ಶಿವಶರಣರ ಬಗ್ಗೆ ವಚನ ಸಂಪಾದನೆ ಮಾಡಿದರು ಅಂತಹ ಮಹಾನುಭಾವರ ನೆನೆವುದೇ ಪುಣ್ಯದ ಕಾರ್ಯ ಎಂದು ಹೇಳಿದರು.
ಉಪಸ್ಥಿತ ಗ್ರಂಥಾಲಯ ವಿಜ್ಞಾನಿ ಡಾ. ಎಸ್. ಆರ್. ಗುಂಜಾಳ ಮಾತನಾಡಿ, ರೆ. ಉತ್ತಂಗಿಯವರ ಜೊತೆ ನನ್ನದು ಅವಿನಾಭಾವ ಸಂಬಂಧವಿತ್ತು. ಲಿಂಗಾಯತ -ಕ್ರೈಸ್ತಧರ್ಮದ ಬಗ್ಗೆ ಮಹತ್ವದ ಕೃತಿ ರಚಿಸಿದ ಮಹಾನುಭಾವರು ಎಂದು ಅವರ ಒಡನಾಟ ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿಯ ಬಸವಕೇಂದ್ರದ ಅಧ್ಯಕ್ಷರಾದ ಪ್ರೊ. ಜಿ. ಬಿ. ಹಳ್ಯಾಳ ಮಾತನಾಡಿ, ಲಿಂಗಾಯತ ಧರ್ಮವನ್ನು ನಮ್ಮವರಿಗಿಂತ ಹೊರಗಿನವರೇ ಹೆಚ್ಚು ತಿಳಿದಿದ್ದಾರೆ. ಉತ್ತಂಗಿ ಚನ್ನಪ್ಪನವರು ಬಸವಣ್ಣವರ ಅಂತರಂಗದ ಭಕ್ತರು. ಉತ್ತಂಗಿಯವರು ಸರ್ವಜ್ಞನನ್ನು ಬೆಳಕಿಗೆ ತಂದರೆ ಉತ್ತಂಗಿಯವರನ್ನು ಜಗತ್ತಿಗೆ ಪರಿಚಯಿಸಿದವರು ಡಾ. ಎಸ್. ಆರ್. ಗುಂಜಾಳ ಎಂದು ಹೇಳಿದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಗುರು ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ವೇದಿಕೆಯಲ್ಲಿ ಶಂಕರ ಕುಂಬಿ ಇದ್ದರು.
ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಎಸ್.ಎಸ್. ನಾಗಶೆಟ್ಟಿ, ಬಸವಂತಪ್ಪ ತೋಟದ, ಕೆ. ಎಸ್. ಕೋರಿಶೆಟ್ಟರ, ಉಮೇಶ ಕಟಗಿ, ಸಿ. ಜಿ. ಹಿರೇಮಠ ಸೇರಿದಂತೆ ಮುಂತಾದವರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 