ಶರಣರ ಜೀವನ ಚರಿತ್ರೆ, ಆದರ್ಶ, ತತ್ವಗಳನ್ನು ಪ್ರವಚನಗಳ ಮೂಲಕ ತಿಳಿಯಿರಿ

ಶರಣರ ಜೀವನ ಚರಿತ್ರೆ, ಆದರ್ಶ, ತತ್ವಗಳನ್ನು ಪ್ರವಚನಗಳ ಮೂಲಕ ತಿಳಿಯಿರಿ  Learn about the lives, ideals, and philosophies of the Sharanas through discourses


ನೇಸರಗಿ, ಸೆ.15: ಕರ್ನಾಟಕ ನಾಡು ಕಂಡ ಅನೇಕ ಮಹಾನ್ ಶರಣರ ಜೀವನ ಚರಿತ್ರೆ, ಆದರ್ಶ ಹಾಗೂ ತತ್ವಗಳನ್ನು ಶ್ರಾವಣ ಮಾಸದಲ್ಲಿ ಎಲ್ಲ ಮಠಗಳಲ್ಲಿ ನಡೆಯುವ ಪ್ರವಚನ ಕಾರ್ಯಕ್ರಮಗಳ ಮೂಲಕ ಜನರು ತಿಳಿದುಕೊಂಡು, ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಪ್ರವಚನಕಾರ ಅಶೋಕ ಬಿಜಗಟ್ಟಿ ಹೇಳಿದರು.  

ಗ್ರಾಮದ ಶ್ರೀ ಚೆನ್ನವೃಷಭೇಂದ್ರ ಅಜ್ಜನವರ ಲೀಲಾಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಅಂಕಲಗಿ ಶ್ರೀಮಠದ ಶ್ರೀ ಅಡವಿ ಸಿದ್ದೇಶ್ವರ ಅವರ ಪ್ರವಚನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.  

ಶರಣರ ಜೀವನ ಮೌಲ್ಯಗಳು ಹಾಗೂ ಅವರ ಆದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಸಾಧ್ಯ ಎಂದು ಅವರು ತಿಳಿಸಿದರು.  

ಕಾರ್ಯಕ್ರಮದಲ್ಲಿ ಹಿರಿಯರಾದ ರುದ್ರ​‍್ಪ ಹೊಂಡಪ್ಪನವರ, ಮಹದೇವ ಮೆಣಸಿನಕಾಯಿ, ಯಲ್ಲಪ್ಪ ರೊಟ್ಟಿ, ಅಭಯ ಶ್ರೀಗಳು, ಮಲ್ಲಿಕಾರ್ಜುನ ಯತ್ತಿನಮನಿ, ಅಣ್ಣಪ್ಪ ಮಾಳಣ್ಣವರ, ನಿಂಗಪ್ಪ ಕುಂಟಗಿ, ಶಿವಪ್ಪ ತುಬಾಕಿ, ಶೋಭಾ ತುಬಾಕಿ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಭಕ್ತರು ಭಾಗವಹಿಸಿದ್ದರು.