ನಂದಿಗೆ ಭಕ್ತಿ ಹಾಗೂ ಶ್ರದ್ಧೆಯಿಂದ ಅಂತ್ಯಸಂಸ್ಕಾರ
Last rites performed for Nandi with devotion and reverence
ಇಂಡಿ 17 : ತಾಲ್ಲೂಕಿನ ತಡವಲಗಾ ಗ್ರಾಮದ ಸಿದ್ದಣ್ಣ ಸಾತಲಿಂಗಪ್ಪ ಇಂಡಿ ಅವರಿಗೆ ಸೇರಿದ ಎತ್ತು ವಯೋಸಹಜವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂಡಿ ಮನೆತನದವರು ನಂದಿಗೆ ಭಕ್ತಿ ಹಾಗೂ ಶ್ರದ್ಧೆಯಿಂದ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ನಂದಿಯನ್ನು ಶಿವನ ವಾಹನ ಹಾಗೂ ಪರಮ ಭಕ್ತನೆಂದು ಪೂಜಿಸಲಾಗುತ್ತದೆ. ಹೀಗಾಗಿ ಇಂಡಿ ಮನೆತನದವರು ಎತ್ತನ್ನು ಕೇವಲ ಪ್ರಾಣಿಯಂತೆ ಕಾಣದೆ, ಕುಟುಂಬದ ಸದಸ್ಯನಂತೆ ಗೌರವಿಸಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಅಂತಿಮ ನಮನದ ಸಂದರ್ಭದಲ್ಲಿ ನಂದಿಯ ದೇಹವನ್ನು ಶುದ್ಧ ನೀರು ಹಾಗೂ ಗಂಗಾಜಲದಿಂದ ಸ್ವಚ್ಛಗೊಳಿಸಿ, ಅಲಂಕರಿಸಲಾಯಿತು.
ಹಣೆಗೆ ವಿಭೂತಿ, ಕುಂಕುಮ ಹಾಗೂ ಅರಿಶಿನ ಹಚ್ಚಿ, ಕೊರಳಿಗೆ ಹೂವಿನ ಹಾರ ಹಾಕಿ, ದೇಹಕ್ಕೆ ಹೊಸ ವಸ್ತ್ರವನ್ನು ಹೊದಿಸಲಾಯಿತು. ಬಳಿಕ ಪೂಜೆ ಸಲ್ಲಿಸಿ ಧೂಪ ಹಾಗೂ ಕಪೂರದ ಆರತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಂತಿಮ ಯಾತ್ರೆಯ ಸಂದರ್ಭದಲ್ಲಿ ಶಿವನಾಮ ಸ್ಮರಣೆ ಮಾಡಲಾಯಿತು. ಬಳಿಕ ಸಂಪ್ರದಾಯದಂತೆ ಸ್ವಚ್ಛ ಸ್ಥಳದಲ್ಲಿ ಗುಂಡಿ ತೋಡಿ, ತಳದಲ್ಲಿ ಉಪ್ಪು, ಪವಿತ್ರ ನೀರು, ವಿಭೂತಿ ಹಾಗೂ ಬಿಲ್ವಪತ್ರೆಗಳನ್ನು ಇರಿಸಿ ನಂದಿಗೆ ಭೂಸಮಾಧಿ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ನೂರಾರು ಜನರು ಉಪಸ್ಥಿತರಿದ್ದು, ನಂದಿಗೆ ಅಂತಿಮ ನಮನ ಸಲ್ಲಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 