ಬಾಳೇಕುಂದ್ರಿ. ಕೆ.ಎಚ್ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಮಂದಿರ ಉದ್ಘಾಟಿಸಿದ ಲಕ್ಷ್ಮೀ ಹೆಬ್ಬಾಳಕರ್

ಬಾಳೇಕುಂದ್ರಿ. ಕೆ.ಎಚ್ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಮಂದಿರ ಉದ್ಘಾಟಿಸಿದ ಲಕ್ಷ್ಮೀ ಹೆಬ್ಬಾಳಕರ್ Lakshmi Hebbalkar inaugurated the Sri Mahalakshmi Devi Temple in Balekundri. K.H. village.

 ಬೆಳಗಾವಿ 15 :  ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೇವಸ್ಥಾನಗಳ ಜೀರ್ಣೋದ್ದಾರ ಮಾಡುವ ಮೂಲಕ ಏಳೂವರೆ ವರ್ಷಗಳ ಹಿಂದೆ ಕೊಟ್ಟ ಮಾತನ್ನು ನಾನು ಉಳಿಸಿಕೊಂಡಿರುವೆ. ನಾನು ಕೇವಲ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿಲ್ಲ. ಇಡೀ ಕರ್ನಾಟಕದ ಮನೆ ಮನೆಗೂ ಗೃಹಲಕ್ಷ್ಮೀ ಯೋಜನೆಯನ್ನು ತಲುಪಿಸುವ ಕೆಲಸ ಮಾಡುತ್ತಿರುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ಸುಮಾರು 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಹಾಲಕ್ಷ್ಮೀ ದೇವಿ ಮಂದಿರದ ವಾಸ್ತುಶಾಂತಿ, ಕಳಸಾರೋಹಣ ಹಾಗೂ ಲೋಕಾರೆ​‍್ಣಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ನಾವು ಭಾರತೀಯರು, ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ. ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಅಧರ್ಮದಿಂದ ನಡೆಯುವುದು ನಮ್ಮ ಸಂಸ್ಕೃತಿ ಅಲ್ಲ.  ಕಲ್ಲು, ಗಾಳಿ, ಅಗ್ನಿ, ಸೂರ್ಯ, ಸಕಲ ಪ್ರಾಣಿಗಳನ್ನು ನಾವು ಹಿಂದೂ ಧರ್ಮದಲ್ಲಿ ಪೂಜೆ ಮಾಡುತ್ತೇವೆ. ಮತ್ತೊಬ್ಬರಿಗೆ  ಕಾಲು ತಾಗಿಸಿದರೂ ನಮಸ್ಕಾರ ಮಾಡುತ್ತೇವೆ.  

ಸಕಲ ಜೀವ ರಾಶಿಗಳನ್ನು ಪ್ರೀತಿಸುವುದೇ ಹಿಂದು ಧರ್ಮದ ಸಂಸ್ಕೃತಿ  ಎಂದು ಸಚಿವರು ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇದುವರೆಗೂ 154 ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಿರುವೆ. ಬಾಳೆಕುಂದ್ರಿ ಕೆ.ಎಚ್ ಗ್ರಾಮದ ಲಕ್ಷ್ಮೀ ದೇವಿ ದೇವಸ್ಥಾನದ ಜೀರ್ಣೋದ್ದಾರಕ್ಕೆ 50 ಲಕ್ಷ ರೂಪಾಯಿಯನ್ನು ಸರ್ಕಾರದಿಂದ ನೀಡಲಾಗಿದ್ದು, ಇದುವರೆಗೂ ಎರಡು ಕಂತಿನ ಹಣ ಬಿಡುಗಡೆ ಆಗಿದ್ದು, ಮೂರನೇ ಕಂತಿನ ಹಣ ಕೂಡ ಶೀಘ್ರ ಬಿಡ ುಗಡೆ ಆಗಲಿದೆ. ನಿಸ್ವಾರ್ಥತತೆಯಿಂದ ಊರಿನ ಜನರ ಸೇವೆ ಮಾಡುತ್ತಿರುವೆ.  ಜೈನ ಬಸದಿ, ಕಲ್ಮೇಶ್ವರ ದೇವಸ್ಥಾನಕ್ಕೆ ಎರಡು ಕೋಟಿ ರೂಪಾಯಿ ಹಾಗೂ ಬಸವೇಶ್ವರ ದೇವಸ್ಥಾನಕ್ಕೆ 35 ಲಕ್ಷ ರೂಪಾಯಿ ಅನುದಾನವನ್ನು ನೀಡಿರುವೆ ಎಂದು ತಿಳಿಸಿದರು.  

ಕ್ಷೇತ್ರದ ಗ್ರಾಮಗಳ ಪ್ರತಿಯೊಂದು ಗಲ್ಲಿಯನ್ನು ಅಭಿವೃದ್ಧಿ ಮಾಡಿರುವೆ.  ಕ್ಷೇತ್ರಕ್ಕೆ ಎಷ್ಟು ಅನುದಾನ ತರುತ್ತಿರುವೆ ಎಂದರೆ ಪೂಜೆ ಮಾಡಿ ಕೆಲಸ ಆರಂಭಿಸಲು ನನಗೆ ಸಮಯ ಸಾಕಾಗುತ್ತಿಲ್ಲ. ಹಾಗಾಗಿ ನನ್ನ ಮಗ ಹಾಗೂ ನನ್ನ ತಮ್ಮನನ್ನು ಗುದ್ದಲಿ ಪೂಜೆಗೆ ಕಳುಹಿಸುತ್ತಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಹಾಲಕ್ಷ್ಮೀ ದೇವಿ ಮಂದಿರದ ವಾಸ್ತುಶಾಂತಿ, ಕಳಸಾರೋಹಣ ಹಾಗೂ ಲೋಕಾರೆ​‍್ಣಯ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದಲ್ಲಿ ವಸಂತರಾವ ಜಾಧವ, ದಶರಥ ಚೌಬಾರಿ, ಬಾಬು ಧರೆನ್ನವರ, ಗಣಪತಿ ಬಾಳುನ್ನವರ, ನಾಗೇಶ ದೇಸಾಯಿ, ಶಂಕರಗೌಡ ಪಾಟೀಲ, ಮಹಾದೇವಿ ರಾಮಚನ್ನವರ, ಕಲ್ಲಪ್ಪ ರಾಮಚನ್ನವರ, ನಿಲೇಶ ಚಂದಗಡ್ಕರ್, ವಿಠ್ಠಲ ಕುರುಬರ, ರವಿ ಬಾಳುನ್ನವರ, ಮಾರುತಿ ಸುಳಗೇಕರ ಮುಂತಾದವರು ಉಪಸ್ಥಿತರಿದ್ದರು.