ರೈತೋದಯ ಹಸಿರು ಸೇನೆ ರಾಜ್ಯ ಸಂಚಾಲಕರಾಗಿ ಲಕ್ಷ್ಮವ್ವ ಪ, ಮೇಳಿಗಟ್ಟಿ

ರೈತೋದಯ ಹಸಿರು ಸೇನೆ ರಾಜ್ಯ ಸಂಚಾಲಕರಾಗಿ ಲಕ್ಷ್ಮವ್ವ ಪ, ಮೇಳಿಗಟ್ಟಿ  Lakshmava P, Meligatti as state coordinator of Rythodaya Green Army

ಲಕ್ಷ್ಮೇಶ್ವರ 22: ರೈತರ ಅಭಿವೃದ್ಧಿಯ ನನ್ನ ಉಸಿರು ರೈತರ ಕಲ್ಯಾಣವೇ ನಮ್ಮ ರಾಜ್ಯ ರೈತೋದಯ ಹಸಿರು ಸೇನೆಯ ಉದ್ದೇಶ ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಸಂಸ್ಥಾಪಕ ಬಿ ಟಿ ಚಂದ್ರಶೇಖರ್ ಅವರು ರೈತರ ಅಭಿವೃದ್ಧಿಗಾಗಿ ರಾಜ್ಯದ್ಯಂತ ನಿರಂತರ ಪ್ರವಾಸ ಮಾಡುತ್ತಾ ರೈತರ ಸಮಸ್ಯೆಗಳನ್ನು ಆಲಿಸುತ್ತಾ ರಾಜ್ಯಾದ್ಯಂತ ರೈತೋದಯ ಹಸಿರು ಸೇನೆಯ ಪದಾಧಿಕಾರಿಗಳನ್ನು ನೇಮಕ ಮಾಡುತ್ತಾ ರೈತೋದಯ ಹಸಿರು ಸೇನೆಯನ್ನು ಬಲಿಷ್ಠ ಪಡಿಸುತ್ತಿದ್ದಾರೆ. 

ಸಾವಿರದ ಎಂಟು ಜೋಡಿ ಸಾಮೂಹಿಕ ವಿವಾಹಗಳ ಕಲ್ಯಾಣ ಉತ್ಕನ ರುವಾರಿ ಬಿ ಟಿ ಚಂದ್ರಶೇಖರ್ ಅವರು ಶುಕ್ರವಾರ ಲಕ್ಷ್ಮೇಶ್ವರ ತಾಲೂಕಿನ ಒಡೆಯರ ಮಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ರೈತ ಮಹಿಳೆ ಲಕ್ಷ್ಮವ್ವ ಪರಮೇಶಪ್ಪ ಮೇಳಿಗಟ್ಟಿ ಅವರನ್ನು ರಾಜ್ಯ ಸಂಚಾಲಕರನ್ನಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿದರು.. ಈ ಸಮಯದಲ್ಲಿ ರೈತೋದಯ ಹಸಿರು ಸೇನೆಯ ರಾಜ್ಯ ಮಹಿಳಾ ಅಧ್ಯಕ್ಷೇ ಲತಾ ಸೇರಿದಂತೆ ಅನೇಕ ರೈತ ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು