ಹೂವಿನ ಹಡಗಲಿ

ಕೆರೆಯ ಪೈಪ್‌ಲೈನ್ ಸೋರಿಕೆ : ಅಡಿಕೆ,ಮೆಕ್ಕೆಜೋಳ ಬೆಳೆ ನಾಶ

ಕೆರೆಯ ಪೈಪ್‌ಲೈನ್ ಸೋರಿಕೆ : ಅಡಿಕೆ,ಮೆಕ್ಕೆಜೋಳ ಬೆಳೆ ನಾಶ


ಲೋಕದರ್ಶನ ವರದಿ 

ಹೂವಿನಹಡಗ 21:  ಇಲ್ಲಿನ ತುಂಗಭದ್ರಾ ನದಿ ತೀರದ ರಾಜವಾಳ ಬಳಿಯಿಂದ  ಕೂಡ್ಲಿಗಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಗುರುವಾರ  ತಿಪ್ಪಾಪುರ ಬಳಿ ಪೈಪ್‌ಲೈನ್ ಸೋರಿಕೆ ಉಂಟಾಗಿ ಅಪಾರ ನೀರು ಪೋಲಾಗಿ ಅಡಿಕೆ,ಮೆಕ್ಕೆಜೋಳ ಅಪಾರ ಬೆಳೆ ನಾಶವಾಗಿದೆ.’ಕೂಡ್ಲಿಗಿ ತಾಲ್ಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್ ಒಡೆದು ಸೋರಿಕೆಯಿಂದ ಅಪಾರ ಪ್ರಮಾಣದ ನೀರು ರೈತರ ಕೃಷಿ ಜಮೀನು ಹರಿಯುತ್ತಿದ್ದು ರೈತ ಸತ್ಯನಾರಾಯಣ ಅವರ ಅಡಿಕೆ ಗಿಡಗಳು ನೀರಿನ ರಭಸಕ್ಕೆ ನೆಲಕಚ್ಚಿದೆ ಮತ್ತು ರೈತ ಗಂಟೆ ಸಾಹೇಬ ಅವರ ಕಟಾವಿಗೆ ಬಂದಿದ್ದ  ಮೆಕ್ಕೆಜೋಳ  ಬೆಳೆ ಸಂಪೂರ್ಣ ಹಾನಿಯಾಗಿದೆ.ಕೂಡಲೇ ಸಂಭಂಧಿಸಿದ ಅಧಿಕಾರಿಗಳು ಸ್ಥಳ ಪರೀಶೀಲನೆ ಮಾಡಿ ನಷ್ಟಕ್ಕೊಳಗಾದ  ರೈತರಿಗೆ ಸರ್ಕಾರ ದಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ