ಕಿರಣಗಿ ಪಿ.ಕೆ.ಪಿ.ಎಸ್ ಲಾಭದಲ್ಲಿ ಮುನ್ನಡೆ, ಅಧ್ಯಕ್ಷ ಸಿದಗೌಡ ಪಾಟೀಲ
Kiranagi PKPS Forges Ahead in Profit: President Sidagouda Patil
ಅಥಣಿ 18: ಕಿರಣಗಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 2025-26 ನೇ ಸಾಲಿನಲ್ಲಿ 5 ಲಕ್ಷ 5 ನೂರು ರೂಪಾಯಿಗಳಷ್ಟು ಲಾಭ ಗಳಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಮುನ್ನಡೆಯುತ್ತಿದೆ ಎಂದು ಅಧ್ಯಕ್ಷ ಸಿದಗೌಡ ಪಾಟೀಲ ಹೇಳಿದರು. ಅವರು ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ರಮೇಶ ಗುರವ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 765 ಸದಸ್ಯ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 4 ಕೋಟಿ 19 ಲಕ್ಷ ರೂ.ಗಳಷ್ಟು ಸಾಲ ವಿತರಿಸಲಾಗಿದೆ ಎಂದರು. ಪ್ರಸಕ್ತ ಸಾಲಿನಲ್ಲಿ 6 ಕೋಟಿ 7 ಲಕ್ಷದಷ್ಟು ಆರ್ಥಿಕ ವ್ಯವಹಾರ ನಡೆಸಿದೆ ಎಂದ ಅವರು 1170 ಸದಸ್ಯರಿಂದ 56 ಲಕ್ಷ ದಷ್ಟು ಶೇರು ಬಂಡವಾಳ ಸಂಗ್ರಹಿಸಿದೆ ಎಂದರು.
ಸಂಘದ ಹಿರಿಯ ಸದಸ್ಯ ಬಾಬುರಾವ ವಾಘಮೋಡೆ ಮಾತನಾಡಿ, ಕಿರಣಗಿಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ 1960 ರಲ್ಲಿ ನಮ್ಮ ಗ್ರಾಮದ ಹಿರಿಯ ಸಹಕಾರಿಗಳು ರೈತರ ಆರ್ಥಿಕ ಅನಕೂಲಕ್ಕಾಗಿ ಅತ್ಯಂತ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ನಮ್ಮ ಸಂಸ್ಥೆ ಇಂದು ಆರ್ಥಿಕ ಕ್ಷೇತ್ರದಲ್ಲಿ ಬೃಹದಾಕಾರವಾಗಿ ಬೆಳೆದಿದೆ ಎಂದ ಅವರು 1960 ರಲ್ಲಿ ಸಹಕಾರ ಸಂಘದ ಲಾಭಾಂಶ ಪಡೆಯದ ಕಿರಣಗಿ ಗ್ರಾಮಸ್ಥರು ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಹೋಗಲು ಸಂಪರ್ಕ ಸೇತುವೆ ನಿರ್ಮಿಸಲು ಸಹಕಾರ ನೀಡಿದ್ದನ್ನು ನಾವು ಸ್ಮರಿಸಿಕೊಳ್ಳಬೇಕು ಎಂದರು.
ಸಹಕಾರಿ ಧುರೀಣ ಸುರೇಶ ಮೆಂಡಿಗೇರಿ ಮಾತನಾಡಿ, ಸಹಕಾರಿ ಸಂಘದ ಸಿದಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಲಾಭದಲ್ಲಿ ಮುನ್ನಡೆಯುತ್ತಿದ್ದು, ಗ್ರಾಮಸ್ಥರು ಈ ಮೊದಲಿನಂತೆ ಮುಂದೆಯೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಹಕಾರಿ ಸಂಘದ ಉಪಾಧ್ಯಕ್ಷ ಬಾಬುರಾವ ಚವ್ಹಾಣ, ಸದಸ್ಯರಾದ ಆನಂದ ಕೋಡಗ, ಬಾಬು ಬಿಳ್ಳೂರ , ಬಾಳಾಸಾಬ ವಾಘಮೋಡೆ, ಬುರಾನ ಸನದಿ, ಮಲ್ಲಪ್ಪ ನಂದಗಾಂವ, ಶಂಕರ ಕಾಂಬಳೆ, ಶಂಕರ ಕೋಳಿ, ಶಿವರಾಜ ನಂದಗಾಂವ, ಶ್ರೀಮತಿ ದಾನವ್ವಾ ಸಂಗಪ್ಪ ಮೆಂಡಿಗೇರಿ, ಕಾಶೀಬಾಯಿ ಢವಳೇಶ್ವರ, ಮುಖ್ಯ ಕಾರ್ಯನಿರ್ವಾಹಕ ರಮೇಶ ಗುರವ,ಕ್ಲರ್ಕ ಮಾಯಪ್ಪ ಧನಗರ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 