ರಾಣೆಬೆನ್ನೂರ

ಮುಂಗಾರು ಬೆಳೆ ನಷ್ಟ: ರೈತರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ

ಮುಂಗಾರು ಬೆಳೆ ನಷ್ಟ: ರೈತರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ


ರಾಣೆಬೆನ್ನೂರು 20: ತಾಲ್ಲೂಕಿನಲ್ಲಿ ಮುಂಗಾರು ಬೆಳೆ ಬಾರದೆ, ಸಮರ​‍್ಕವಾಗಿ ಮಳೆಯೂ ಆಗದ ಪರಿಣಾಮ ರೈತರು ಆರ್ಥಿಕವಾಗಿ ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಸ್ಥಳ ಪರೀಶೀಲನೆ ನಡೆಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ಯುವ ಮುಖಂಡ ಹಾಗೂ ಜಿ.ಪಂ. ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಆಗ್ರಹಿಸಿದರು.  

ಗುರುವಾರ ಮಧ್ಯಾಹ್ನ ತಮ್ಮ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣೆಬೆನ್ನೂರು ತಾಲ್ಲೂಕಿನ ರೈತರು ಬೆಳೆ ಕಾಣದೆ ಹಾಕಿದ ಬಂಡವಾಳವನ್ನೂ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ, ಜಿಲ್ಲಾಡಳಿತ ಹಾಗೂ ಶಾಸಕರು ರೈತರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.  

ತಾಲ್ಲೂಕಿನ ಕೇರಿಮಲ್ಲಾಪುರ, ಚೌಡದಾನಪುರ, ಚಿಕ್ಕ ಕುರುವತ್ತಿ, ಚಂದಾಪುರ, ಹರನಗಿರಿ, ಯತ್ನಳ್ಳಿ, ಹೊನ್ನತ್ತಿ ಹಾಗೂ ಹಳೆ ಹೊನ್ನತ್ತಿ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಪರೀಶೀಲನೆ ನಡೆಸಲಾಗಿದ್ದು, ಬಹುತೇಕ ಕಡೆ ಬೆಳೆ ಸಂಪೂರ್ಣ ಹಾಳಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಬೆಳೆ ನಷ್ಟದ ಸಮಗ್ರ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಸಂತೋಷಕುಮಾರ ಪಾಟೀಲ ಒತ್ತಾಯಿಸಿದರು. 


ಸುದ್ದಿ ಓದಿ