ಸಂಭ್ರಮದಿಂದ ಕಾರ್ತಿಕ ಮಹೋತ್ಸವ
Kartik Mahotsav celebrated with enthusiasm
ಸಂಭ್ರಮದಿಂದ ಕಾರ್ತಿಕ ಮಹೋತ್ಸವ
ತಾಳಿಕೋಟೆ: ಪಟ್ಟಣದ ಪಟ್ಟಣದ ಪುರಾತನ ಮಠವಾದ ಅಗ್ನಿ ಚರಮೂರ್ತಿ ( ಚರಂತಿಮಠ) ಕಾರ್ತಿಕ ಮಹೋತ್ಸವವು ಭಕ್ತಿ,ಶ್ರದ್ಧೆ, ಸಂಭ್ರಮ ಸಡಗರದಿಂದ ಮಂಗಳವಾರ ಜರುಗಿತು.
ಶಾಂತವೀರ ಮಹಾಸ್ವಾಮಿ ಚರಂತಿಮಠದ ಕಾರ್ತಿಕೋತ್ಸವ ಕಾರ್ಯಕ್ರಮವು ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ಜರುಗಿತು. ಕಾರ್ತಿಕೋತ್ಸವ ನಿಮಿತ್ತ ಬೆಳಿಗ್ಗೆ ಕರ್ತೃ ಗದ್ದುಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಿ ಅರ್ಚಕ ಜಗದೀಶ್ ಹಿರೇಮಠ್ ಇವರು ಪೂಜಾ ಕಾರ್ಯ ನೆರವೇರಿಸಿದರು.
ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಾಯಂಕಾಲ ಕಾರ್ತಿಕ ಇಳಿಸುವ ಕಾರ್ಯಕ್ರಮವು ಜರುಗಿತು.
ಈ ಸಂದರ್ಭದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಬ್ರಹ್ಮ ಶಿವಯೋಗಿ ಶಿವಾಚಾರ್ಯರು ಚರಂತಿಮಠ ತಾಳಿಕೋಟೆ- ಅಣದೂರ ಅವರು, ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಹೆಚ್ಚು ಫಲಪ್ರದವಾಗುತ್ತದೆ. ಈ ತಿಂಗಳು ದೀಪದಾನ ತುಳಸಿ ಪೂಜೆ, ಶಿವ- ವಿಷ್ಣು-ಪೂಜೆ ಮಾಡುವುದರಿಂದ ಅಂಧಕಾರ ತೊಲಗಿ ಜ್ಞಾನ, ಆರೋಗ್ಯ, ಸುಖ-ಶಾಂತಿ ಮತ್ತು ಮೋಕ್ಷದ ಮಾರ್ಗ ದೊರೆಯುತ್ತದೆ ಎಂದರು.
ಉತ್ಸವದಲ್ಲಿ ಸಂಗಯ್ಯ ಚರಂತಿಮಠ, ಸುಭಾಸ್ ಅಲ್ಲಾಪೂರ, ಪವಾಡೆಯ್ಯ ಚರಂತಿಮಠ, ಪರಮಯ್ಯ ಹಿರೇಮಠ, ಶ್ರೀಶೈಲ ವಿಭೂತಿ, ವಿರುಪಾಕ್ಷಿಗೌಡ ಪಾಟೀಲ, ಶಾಂತಗೌಡ ದೇಸಾಯಿ, ಶರಣು ಪಾಲ್ಕಿ , ರಾಜು ಅಲ್ಲಾಪೂರ, ಗುರುನಾಥಗೌಡ ಮಸ್ಕಾನಾಳ, ದೀಪು ಚರಂತಿಮಠ, ಶರಣು ಬಿಳೇಭಾವಿ, ಖಾಸ್ಗತೇಶ್ವರ ಸೊಸ?ಯಿಟಿಯ ಸಿಬ್ಬಂದಿ ವರ್ಗ ಹಾಗೂ ಮಹಿಳೆಯರು ಮಕ್ಕಳು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 